ETV Bharat / international

2023ರಲ್ಲಿ ವಿಶ್ವದ ಶೇ 33ರಷ್ಟು ಜನರಿಗೆ ಆರ್ಥಿಕ ಹಿಂಜರಿತ ಬಿಸಿ: ಐಎಂಎಫ್ ಮುಖ್ಯಸ್ಥೆ​

author img

By

Published : Jan 3, 2023, 11:25 AM IST

Updated : Jan 3, 2023, 1:35 PM IST

ಜಗತ್ತಿನ ಮೂರನೇ ಒಂದು ಭಾಗದ ಜನರು ಆರ್ಥಿಕ ಹಿಂಜರಿತಕ್ಕೆ ತುತ್ತಾಗಲಿದ್ದಾರೆ ಎಂದು ಐಎಂಎಫ್ ಮುಖ್ಯಸ್ಥೆ ಎಚ್ಚರಿಸಿದ್ದಾರೆ.

2023ರಲ್ಲಿ ಜಗತ್ತಿನ ಜನಸಂಖ್ಯೆಯ ಶೇ 33ರಷ್ಟು ಜನರು ಆರ್ಥಿಕ ಹಿಂಜರಿತಕ್ಕೆ ಗುರಿಯಾಗಲಿದ್ದಾರೆ; ಐಎಂಎಫ್​ ಮುಖ್ಯಸ್ಥೆ ಎಚ್ಚರಿಕೆ
in-2023-33-percent-of-the-worlds-population-will-be-affected-by-economic-recession-imf-chief-warns

ಜಾಗತಿಕ ಆರ್ಥಿಕತೆಯ ಮೂರನೇ ಒಂದು ಭಾಗ ಆರ್ಥಿಕ ಹಿಂಜರಿತ ಎದುರಿಸಲಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಕಷ್ಟಕರವಾಗಿರಲಿದೆ. ಅಮೆರಿಕ, ಯುರೋಪ್​ ಮತ್ತು ಚೀನಾ ತಮ್ಮ ಆರ್ಥಿಕತೆಯಲ್ಲಿ ಕುಸಿತ ಕಾಣಲಿದೆ ಎಂದು ಐಎಂಎಫ್​ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿವ್ ಎಚ್ಚರಿಸಿದ್ದಾರೆ.

ಜನವರಿ 1ರಂದು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 10 ತಿಂಗಳಾದರೂ ರಷ್ಯಾ- ಉಕ್ರೇನ್​ ಯುದ್ದ ಅಂತ್ಯ ಕಾಣುವ ಲಕ್ಷಣ ತೋರುತ್ತಿಲ್ಲ. ಇದರ ಹೊರತಾಗಿ ಹಣದುಬ್ಬರ ಏರಿಕೆ, ಬಡ್ಡಿದರ ಹೆಚ್ಚಳ ಮತ್ತು ಚೀನಾದಲ್ಲಿ ಕೋವಿಡ್​ ಉಲ್ಬಣಗೊಳ್ಳುತ್ತಿದೆ ಎಂದರು.

ಜಗತ್ತಿನ ಮೂರನೇ ಒಂದು ಭಾಗದ ಆರ್ಥಿಕ ಹಿಂಜರಿತ ಅನುಭವಿಸಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 2023 ಕಷ್ಟಕರವಾಗಿರಲಿದೆ. ಕಾರಣ ಅಮೆರಿಕ, ಇಯು ಮತ್ತು ಚೀನಾದಲ್ಲಿ ಕುಸಿತ ಕಾಣಲಿದೆ. ಆರ್ಥಿಕ ಹಿಂಜರಿತ ಹೊಂದಿಲ್ಲದ ದೇಶದಲ್ಲೂ ಲಕ್ಷಾಂತರ ಜನರು ಆರ್ಥಿಕ ಹಿಂಜರಿತ ಅನುಭವಿಸಲಿದ್ದಾರೆ ಎಂದು ಅವರು ವಿವರಿಸಿದರು.

2021ರಲ್ಲಿ ಜಾಗತಿಕ ಬೆಳವಣಿಗೆ ಶೇ 6ರಷ್ಟು ಕಡಿಮೆಯಾಗಿತ್ತು. 2022ರಲ್ಲಿ 3.2ರಷ್ಟು ಮತ್ತು 2023ರಲ್ಲಿ 2.7ರಷ್ಟು ಕಡಿಮೆಯಾಗಲಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ಕೋವಿಡ್​​ 19 ಹೊರತು ಪಡಿಸಿದರೆ 2001ರಿಂದ ಇದು ದುರ್ಬಲ ಬೆಳವಣಿಗೆ ಆಗಿದೆ.

ಚೀನಾದಲ್ಲಿ ವ್ಯಕ್ತವಾದ ಪ್ರತಿಭಟನೆ ಬಳಿಕ ಸರ್ಕಾರ ಅಲ್ಲಿನ ಜೀರೋ ಕೋವಿಡ್​ ಪಾಲಿಸಿಯನ್ನು ರದ್ದು ಮಾಡಿ, ಆರ್ಥಿಕತೆಗೆ ತೆರೆದುಕೊಂಡಿದೆ. ಮುಂದಿನ ಎರಡು ತಿಂಗಳು ಚೀನಾಗೆ ಸಂಕಷ್ಟದ ಸಮಯವಾಗಿದೆ. ಚೀನಾದ ಬೆಳವಣಿಗೆ ಮೇಲೆ ಋಣಾತ್ಮಕ ಪರಿಣಾಮ ಎದುರಾಗಲಿದೆ. ಪ್ರದೇಶದ ಮೇಲಿನ ಪರಿಣಾಮವೂ ಋಣಾತ್ಮಕವಾಗಿದೆ. ಜಾಗತಿಕ ಬೆಳವಣಿಗೆ ಮೇಲಿನ ಪರಿಣಾಮವೂ ಋಣಾತ್ಮಕವಾಗಿರಲಿದೆ ಎಂದರು.

ಇದನ್ನೂ ಓದಿ: ಅಮೆರಿಕ ನಿರ್ಮಿತ ಉಕ್ರೇನ್​ ರಾಕೆಟ್​ ದಾಳಿಗೆ 63 ರಷ್ಯಾ ಸೈನಿಕರು ಹತ

Last Updated : Jan 3, 2023, 1:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.