ಇಸ್ಲಾಮಾಬಾದ್: ಪಾಕಿಸ್ತಾನದ ವಿದೇಶಿ ಸಾಲದ ಅವಶ್ಯಕತೆಯನ್ನು ಐಎಂಎಫ್ ಈ ಆರ್ಥಿಕ ವರ್ಷದಲ್ಲಿ 27 ಬಿಲಿಯನ್ನಿಂದ 25 ಬಿಲಿಯನ್ ಅಮೆರಿಕನ್ ಡಾಲರ್ಗೆ ಪರಿಷ್ಕರಿಸಿದೆ. ಇದನ್ನು 3.4 ಶತಕೋಟಿ ಡಾಲರ್ಗಳಷ್ಟು ಕಡಿಮೆ ಮಾಡುವ ಮೂಲಕ ಹಣದ ಬಿಕ್ಕಟು ಎದುರಿಸುತ್ತಿರುವ ಆರ್ಥಿಕತೆಗೆ ದೊಡ್ಡ ಪರಿಹಾರ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಜಾಗತಿಕ ಸಾಲದಾತ ಐಎಂಎಫ್, ಆರ್ಥಿಕ ಬೆಳವಣಿಗೆಯ ಪ್ರಕ್ಷೇಪಣವನ್ನು ಕೇವಲ 2 ಪ್ರತಿಶತಕ್ಕೆ ಇಳಿಸಿದೆ. ಸರ್ಕಾರದ ಬಾಹ್ಯ ಮತ್ತು ಸ್ಥೂಲ ಆರ್ಥಿಕ ಮುನ್ಸೂಚನೆಗಳನ್ನು ಅದು ತಿರಸ್ಕರಿಸಿದೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿಯ ನಿಯೋಗವು ನವೆಂಬರ್ 15 ರಂದು ಪಾಕಿಸ್ತಾನಿ ಅಧಿಕಾರಿಗಳೊಂದಿಗೆ ಎರಡು ವಾರಗಳ ಮಾತುಕತೆಗಳನ್ನು ನಡೆಸಿದೆ. ಈ ವೇಳೆ 3 ಬಿಲಿಯನ್ ಡಾಲರ್ ಸಾಲದ ಒಪ್ಪಂದದಂತೆ ಅದರ ಎರಡನೇ ಕಂತಿನ ಹಣವಾದ 700 ಮಿಲಿಯನ್ ಅಮೆರಿಕನ್ ಡಾಲರ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಐಎಂಎಫ್ ಈ ಆರ್ಥಿಕ ವರ್ಷದಲ್ಲಿ ಜುಲೈನಲ್ಲಿ ಅಗತ್ಯವಿರುವ 28.4 ಬಿಲಿಯನ್ ಡಾಲರ್ ಹಣವನ್ನು 25 ಬಿಲಿಯನ್ ಡಾಲರ್ಗೆ ಇಳಿಸಿತು. ನಾಲ್ಕು ತಿಂಗಳಲ್ಲಿ ಅಲ್ಲಿನ ಸರ್ಕಾರ ಈಗಾಗಲೇ 6 ಬಿಲಿಯನ್ ಅಮೆರಿಕನ್ ಡಾಲರ್ ಅನ್ನು ಪಡೆದಿದ್ದು, 12.5 ಬಿಲಿಯನ್ ಸಾಲದ ನಿರೀಕ್ಷೆಯಲ್ಲಿದೆ.
ಈ ಕುರಿತು ಮಾತನಾಡಿರುವ ಹಣಕಾಸು ಕಾರ್ಯದರ್ಶಿ ಇಮ್ದುಲ್ಲಾ ಬೊಸಲ್ ಅವರು, ಮಧ್ಯಂತರ ಸರ್ಕಾರಗಳು ಅವಶ್ಯಕತೆ ಇರುವ ಉಳಿದ ಹಣದ ಅಗತ್ಯತೆಯನ್ನು ಭದ್ರಪಡಿಸುವುದಾಗಿ ತಿಳಿಸಿದ್ದಾರೆ. ಯುರೋ ಬಾಂಡ್ಗಳ ಏರಿಳಿತ ಮತ್ತು ವಿದೇಶಿ ವಾಣಿಜ್ಯ ಬ್ಯಾಂಕ್ಗಳಲ್ಲಿ ಸಾಲ ಪಡೆಯುವಲ್ಲಿ ಸಮಸ್ಯೆ ಆಗಿದ್ದು, ಈ ನಡುವೆ ಐಎಫ್ಐ ಕೂಡ 3.7 ಬಿಲಿಯನ್ ಅಮೆರಿಕನ್ ಡಾಲರ್ ಕಡಿಮೆ ಮಾಡಿರುವುದು ಸರ್ಕಾರಕ್ಕೆ ಮತ್ತಷ್ಟು ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಪಾಕಿಸ್ತಾನ ಈ ಆರ್ಥಿಕ ವರ್ಷದಲ್ಲಿ ಆರಂಭದಲ್ಲಿ 6.5 ಬಿಲಿಯನ್ ಅಮೆರಿಕನ್ ಡಾಲರ್ ಚಾಲ್ತಿ ಕೊರತೆ ತೋರಿಸಿದೆ. ಇನ್ನು 4 ಬಿಲಿಯನ್ ಅಮೆರಿಕನ್ ಡಾಲರ್ ನಿಂದ 4.5 ಬಿಲಿಯನ್ ಅಮೆರಿಕನ್ ಡಾಲರ್ ಕೋರಿಕೆ ಇಟ್ಟಿತ್ತು. ಐಎಂಎಫ್ ಈ ಕೋರಿಕೆಯನ್ನು ಒಪ್ಪಲಿಲ್ಲ. ಇದೀಗ ಐಎಫ್ಎಫ್ 5.7 ಬಿಲಿಯನ್ ಯುಎಸ್ಡಿ ಕೊರತೆ ಯೋಜಿಸಿದ್ದು, ಹಳೆಯದಕ್ಕೆ ಹೋಲಿಸಿದೆ. ಚಾಲ್ತಿ ಖಾತೆ ಕೊರತೆ, ಆಮದುಗಳು, ಆರ್ಥಿಕ ಬೆಳವಣಿಗೆ, ಹಣದುಬ್ಬರ ಮತ್ತು ಒಟ್ಟು ಹಣಕಾಸು ಅಗತ್ಯಗಳಿಗಾಗಿ ಹಣಕಾಸು ಸಚಿವಾಲಯದ ಪ್ರಕ್ಷೇಪಣಗಳನ್ನು ಐಎಫ್ಎಫ್ ಸ್ವೀಕರಿಸುವುದಕ್ಕೆ ನಿರಾಕರಿಸಿದೆ . (ಪಿಟಿಐ)
ಇದನ್ನೂ ಓದಿ: 'ದಕ್ಷಿಣ ಗಾಜಾದಿಂದ ಪಲಾಯನ ಮಾಡಿ': ಪ್ಯಾಲೆಸ್ಟೈನಿಯರಿಗೆ ಎಚ್ಚರಿಕೆ ನೀಡಿದ ಇಸ್ರೇಲ್