ವಾಷಿಂಗ್ಟನ್ : ಅಮೆರಿಕಾ ಕಾನೂನುಸಭಾ ಸದಸ್ಯೆ ಇಲ್ಹಾನ್ ಒಮರ್ ಪಾಕ್ ಆಕ್ರಮಿತ ಕಾಶ್ಮೀರ್‌ನಲ್ಲಿ ಕೈಗೊಂಡ ಪ್ರವಾಸ ಈಗ ವಿವಾದಾಸ್ಪದವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಭಾರತ ಆಕ್ಷೇಪಣೆ ವ್ಯಕ್ತಪಡಿಸಿದಾಗ, ನಮಗೂ-ಇದಕ್ಕೂ ಸಂಬಂಧವಿಲ್ಲ. ಇದು ಅವರ ವ್ಯಕ್ತಿಗತ ಪ್ರವಾಸವಾಗಿದೆ ಎಂದು ಅಮೆರಿಕಾ ಹೇಳಿದೆ.
-
India condemns the visit of US congress women Ilhan Omar @Ilhan to Pakistan occupied Kashmir pic.twitter.com/fv89AmAIPY
— Sidhant Sibal (@sidhant) April 21, 2022 " class="align-text-top noRightClick twitterSection" data="
">India condemns the visit of US congress women Ilhan Omar @Ilhan to Pakistan occupied Kashmir pic.twitter.com/fv89AmAIPY
— Sidhant Sibal (@sidhant) April 21, 2022India condemns the visit of US congress women Ilhan Omar @Ilhan to Pakistan occupied Kashmir pic.twitter.com/fv89AmAIPY
— Sidhant Sibal (@sidhant) April 21, 2022
ಡೆಮೊಕ್ರಾಟಿಕ್ ಪಕ್ಷಕ್ಕೆ ಸೇರಿದ ಸೋಮಾಲಿ-ಅಮೆರಿಕನ್ ಆದ ಇಲ್ಹಾನ್ ಒಮರ್ ನಾಲ್ಕು ದಿನಗಳ ಪ್ರವಾಸದ ಭಾಗವಾಗಿ ಏಪ್ರಿಲ್ 20ರಂದು ಪಾಕಿಸ್ತಾನಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಆಕೆಯ ಪಾಕ್ ಪ್ರಧಾನಿ ಶಹಬಾಜ್ ಷರೀಫ್, ಮಾಜಿ ಪ್ರಧಾನಿ ಇಮ್ರಾನ್ ಖಾನ್‌ನನ್ನು ಭೇಟಿ ಮಾಡಿದ್ದಾರೆ. ಹಾಗೆಯೇ ಪಾಕ್ ಆಕ್ರಮಿತ ಕಾಶ್ಮೀರ್ಗೆ ಭೇಟಿ ನೀಡಿ ‘ಕಾಶ್ಮೀರ್ ಮೇಲೆ ಅಮೆರಿಕ ಹೆಚ್ಚು ಗಮನ ಕೊಡಬೇಕು’ ಎಂದು ವಿವಾದಾಸ್ಪದವಾಗಿ ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆಯನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ. ‘ಪ್ರಸ್ತುತ ಆಕೆ ಪಾಕ್ ಅಕ್ರಮವಾಗಿ ಆಕ್ರಮಿಸಿದ ಕಾಶ್ಮೀರ ಪ್ರದೇಶದಲ್ಲಿ ಪರ್ಯಾಟನೆ ಮಾಡಿದ್ದಾರೆ. ಅಂತಹ ರಾಜಕಾರಣಿ ಇಲ್ಲಿ ತನ್ನ ಸಂಕುಚಿತ ರಾಜಕಾರಣವನ್ನು ಮಾಡಲು ಬಯಸಿದರೆ ಅದು ಅವರಿಗೆ ಬಿಟ್ಟ ವಿಚಾರ. ಆದರೆ, ನಮ್ಮ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಉಲ್ಲಂಘಿಸುವುದರಿಂದ ಅದು ನಮ್ಮದಾಗುತ್ತದೆ. ಈ ಭೇಟಿ ಖಂಡನೀಯ ಎಂದು ಭಾರತ ವಿದೇಶಾಂಗ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ.
ಓದಿ: ಪ್ರಸ್ತುತ ನಮ್ಮಲ್ಲಿ ಮೂರು ಗೂಂಡಾಗಳ ಸರ್ಕಾರವಿದೆ.. ಮತ್ತೆ ಭಾರತವನ್ನು ಹೊಗಳಿದ ಇಮ್ರಾನ್ ಖಾನ್!
ಈ ಬಗ್ಗೆ ಪ್ರತಿಕ್ರಿಯಿಸಿದ ಅಮೆರಿಕ ವಿದೇಶಾಂಗ ಇಲಾಖೆ, ಇದೊಂದು ವೈಯಕ್ತಿಕ ಪ್ರವಾಸ. ಈ ಪ್ರವಾಸಕ್ಕೂ, ಅಮೆರಿಕಾಕ್ಕೂ ಯಾವುದೇ ಸಂಬಂಧವಿಲ್ಲ. ಸಂಸದೆ ಒಮರ್ ಅವರು ವೈಯಕ್ತಿಕ ಉದ್ದೇಶಕ್ಕೆ ತೆರಳಿದ್ದಾರೆ. ಇದನ್ನು ಆಯೋಜಿಸಲು ವಿದೇಶಾಂಗ ಇಲಾಖೆ ಸಹಾಯ ಮಾಡಿಲ್ಲ. ಹೀಗಾಗಿ, ಅದರ ಬಗ್ಗೆ ಹೆಚ್ಚು ಹೇಳುವುದಿಲ್ಲ. ಅದು ಅವರ ವೈಯಕ್ತಿಕ ಸಾಮರ್ಥ್ಯದ ಭೇಟಿ ಎಂದು ಹೇಳಿದೆ.
ಇಲ್ಹಾನ್ ಒಮರ್ ಯುಎಸ್ ಕಾಂಗ್ರೆಸ್‌ನ ಕೆಳಮನೆಯ ಸದಸ್ಯ. ಹೊಸ ಸರ್ಕಾರ ರಚನೆಯಾದ ನಂತರ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ ಮೊದಲ ಯುಎಸ್ ಶಾಸಕರಾಗಿದ್ದಾರೆ. ಅವರು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ರನ್ನ ಭೇಟಿ ಮಾಡಿ ಅನೇಕ ವಿಷಯಗಳನ್ನು ಚರ್ಚಿಸಿದ್ದಾರೆ.
ನಾನು ಅಧಿಕಾರದ ಗದ್ದುಗೆ ಇಳಿಯಲು ಅಮೆರಿಕನೇ ಕಾರಣ ಎಂದು ಇಮ್ರಾನ್ ಟೀಕಿಸಿದ್ದಾರೆ. ಈ ಕ್ರಮದಲ್ಲಿ ಇಮ್ರಾನ್ ಖಾನ್ರನ್ನು ಇಲ್ಹಾನ್ ಭೇಟಿ ಮಾಡಿದ್ದಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ. ಅಷ್ಟೇ ಅಲ್ಲ, ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಒಮರ್ ಯುಎಸ್ ಪವರ್ ಕಾರಿಡಾರ್‌ಗಳಲ್ಲಿ ಹೆಚ್ಚು ಮಹತ್ವದ್ದಾಗಿರದಿದ್ದರೂ, ಪಿಒಕೆಗೆ ಅವರ ಭೇಟಿ ಕುತೂಹಲಕಾರಿಯಾಗಿದೆ. ಏಕೆಂದರೆ, ಯುಎಸ್ ಶಾಸಕರು ಆ ಪ್ರದೇಶದಲ್ಲಿ ಕಾಲಿಡುವುದು ಅಪರೂಪ. ಈಗ ಒಮರ್ ಪಿಒಕೆಗೆ ಕಾಲಿಟ್ಟಿರುವುದು ವಿವಾದ ಸೃಷ್ಟಿಸುತ್ತಿದೆ.