ETV Bharat / international

ಅಧಿಕಾರ ಸಿಕ್ಕರೆ ಭಾರತದ ಸರಕುಗಳ ಮೇಲೆ ಪ್ರತೀಕಾರಾತ್ಮಕ ಸುಂಕ: ಟ್ರಂಪ್​

author img

By

Published : Aug 21, 2023, 4:01 PM IST

ತಾವು 2024ರಲ್ಲಿ ಮರಳಿ ಅಧಿಕಾರಕ್ಕೆ ಬಂದಲ್ಲಿ ಭಾರತದ ಸರಕುಗಳ ವಿರುದ್ಧ ಪ್ರತೀಕಾರಾತ್ಮಕ ತೆರಿಗೆ ವಿಧಿಸುವುದಾಗಿ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹೇಳಿದ್ದಾರೆ.

Trump says will slap reciprocal tax on India if voted to power

ವಾಷಿಂಗ್ಟನ್ : ಮೋಟಾರ್ ಸೈಕಲ್ ಮತ್ತು ಕಾರುಗಳನ್ನು ತಯಾರಿಸುವ ಅಮೆರಿಕದ ಕಂಪನಿಗಳ ಮೇಲೆ ಭಾರತವು ಹೆಚ್ಚಿನ ಸುಂಕಗಳನ್ನು ವಿಧಿಸುತ್ತಿದ್ದು, ತಾವು 2024ರಲ್ಲಿ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಭಾರತದ ವಿರುದ್ಧ ಅದೇ ರೀತಿಯ ಪ್ರತೀಕಾರಾತ್ಮಕ ತೆರಿಗೆಗಳನ್ನು ವಿಧಿಸುವುದಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್ ಹೇಳಿದ್ದಾರೆ. ಹಾರ್ಲೆ ಡೇವಿಡ್ಸನ್ ಮೋಟಾರ್ ಸೈಕಲ್​​ಗಳ ಮೇಲಿನ ಆಮದು ಸುಂಕವನ್ನು ಟ್ರಂಪ್ ಉಲ್ಲೇಖಿಸಿದ್ದಾರೆ. 2019 ರಲ್ಲಿ ಅಧ್ಯಕ್ಷರಾಗಿದ್ದಾಗಿನಿಂದ ಭಾರತವು ರಫ್ತು ಸುಂಕವನ್ನು ಶೂನ್ಯಕ್ಕೆ ಇಳಿಸಬೇಕೆಂದು ಅವರು ಬಯಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, "ಯುಎಸ್​ಗೆ ಬರುವ ಭಾರತೀಯ ಉತ್ಪನ್ನಗಳ ಮೇಲೆ ಅಮೆರಿಕ ಇದೇ ರೀತಿಯ ತೆರಿಗೆಯನ್ನು ವಿಧಿಸಿದರೆ ಏನಾಗುತ್ತದೆ? ಭಾರತವು ನಮ್ಮ ದೇಶದ ಸಾಮಗ್ರಿಗಳ ವಿರುದ್ಧ ಸುಂಕ ವಿಧಿಸಿದರೆ ನಾನೂ ಸಹ ಅಂಥದೇ ಸುಂಕ ವಿಧಿಸುವ ಪರವಾಗಿದ್ದೇನೆ. ಭಾರತ ಭಾರಿ ಪ್ರಮಾಣದ ಸುಂಕ ವಿಧಿಸುತ್ತಿದೆ. ಹಾರ್ಲೆ-ಡೇವಿಡ್ಸನ್ ವಿಷಯದಲ್ಲಿ ಇದು ನನ್ನ ಗಮನಕ್ಕೆ ಬಂದಿದೆ" ಎಂದು ಹೇಳಿದರು.

ಭಾರತದವರು ಕೂಡ ಮೋಟರ್​ ಬೈಕ್​ಗಳನ್ನು ತಯಾರಿಸುತ್ತಿದ್ದಾರೆ. ಅವನ್ನು ಅವರು ಅಮೆರಿಕಕ್ಕೆ ಕಳುಹಿಸಿದಾಗ ಇಲ್ಲಿ ಅವರು ಯಾವುದೇ ತೆರಿಗೆ ಪಾವತಿಸಬೇಕಿಲ್ಲ. ಆದರೆ ನಮ್ಮ ಬೈಕ್​ಗಳು ಅಲ್ಲಿಗೆ ಹೋದರೆ ಶೇ 100, ಶೇ 150 ಅಥವಾ ಶೇ 200 ರಷ್ಟು ತೆರಿಗೆ ಪಾವತಿಸಬೇಕಿದೆ. ಯಾಕೆ ಹೀಗೆ? ಭಾರತದವರು ಕೂಡ ವ್ಯಾಪಾರವನ್ನೇ ಮಾಡುತ್ತಿದ್ದಾರೆ ಅಲ್ಲವೇ? ಎಂದು ಟ್ರಂಪ್ ಪ್ರಶ್ನಿಸಿದರು. ನೀವೇನೇ ಹೇಳಿ, ಅವರು ನಮಗೆ ಸುಂಕ ವಿಧಿಸುತ್ತಿದ್ದರೆ ನಾವೂ ಅವರ ಮೇಲೆ ಸುಂಕ ವಿಧಿಸಬೇಕು ಅಷ್ಟೇ ಎಂದು ಟ್ರಂಪ್ ಅಭಿಪ್ರಾಯ ವ್ಯಕ್ತಪಡಿಸಿದರು.

"ನಮ್ಮದು ಅಷ್ಟೊಂದು ಮೂರ್ಖ ದೇಶವಲ್ಲ. ನೀವು ಭಾರತವನ್ನು ನೋಡಿ. ಪ್ರಧಾನಿ ನರೇಂದ್ರ ಮೋದಿ ನನ್ನ ಉತ್ತಮ ಸ್ನೇಹಿತರಾಗಿದ್ದಾರೆ. ಅವರು ಮೋಟರ್​ ಸೈಕಲ್ ಮೇಲೆ ಶೇ 100 ರಷ್ಟು ತೆರಿಗೆ ವಿಧಿಸಿದ್ದಾರೆ. ಆದರೆ ನಾವು ಅವರಿಗೆ ಯಾವುದೇ ತೆರಿಗೆ ವಿಧಿಸುತ್ತಿಲ್ಲ" ಎಂದರು ಟ್ರಂಪ್. ಶೇ 100 ರಷ್ಟು ತೆರಿಗೆ ವಿಧಿಸುವ ಕ್ರಮವನ್ನು ಅನ್ಯಾಯಕರ ಎಂದು ಟ್ರಂಪ್ ಹೇಳಿದ್ದರು. ಅಲ್ಲದೆ ಭಾರತೀಯ ಬೈಕುಗಳ ಆಮದಿನ ಮೇಲಿನ ಸುಂಕ ಹೆಚ್ಚಿಸುವುದಾಗಿ ಅಮೆರಿಕ ಬೆದರಿಕೆ ಹಾಕಿದ ನಂತರ ಭಾರತವು 2018 ರಲ್ಲಿ ವಿಸ್ಕಾನ್ಸಿನ್ ಮೂಲದ ಮೋಟರ್​ ಸೈಕಲ್ ತಯಾರಕ ಹಾರ್ಲೆ ಡೇವಿಡ್ಸನ್​ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 50 ಕ್ಕೆ ಇಳಿಸಿತ್ತು.

ಭಾರತದ ಕ್ರಮಕ್ಕೆ ತೃಪ್ತರಾಗದ ಟ್ರಂಪ್​, ಅಮೆರಿಕವು ಪ್ರತಿಯೊಬ್ಬರೂ ಲೂಟಿ ಮಾಡಲು ಬಯಸುವ ಬ್ಯಾಂಕ್ ಆಗಿದೆ ಎಂದು ಟೀಕಿಸಿದ್ದರು. ಭಾರತದ ಮಾವು ರಫ್ತಿನ ಮೇಲಿನ ನಿಷೇಧವನ್ನು ತೆಗೆದುಹಾಕಲು ಅಮೆರಿಕ ಒಪ್ಪಿಕೊಂಡ ನಂತರ ಹಾರ್ಲೆ ಡೇವಿಡ್ಸನ್ ಬ್ರಾಂಡ್ 2007 ರಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತ್ತು.

ಇದನ್ನೂ ಓದಿ : ದೇಶದಲ್ಲಿ ಎಲೆಕ್ಟ್ರಿಕ್ ವಾಹನ ಮಾರಾಟ ಶೇ 120ರಷ್ಟು ಹೆಚ್ಚಳ; ಹೈಬ್ರಿಡ್​ ವಾಹನಗಳಿಗೂ ಬೇಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.