ETV Bharat / international

ಅಗಾಥಾ ಚಂಡಮಾರುತಕ್ಕೆ 10 ಮಂದಿ ಬಲಿ, 20 ಜನ ನಾಪತ್ತೆ - ಅಗಾಥಾ ಚಂಡಮಾರುತ ಸುದ್ದಿ

ಮೆಕ್ಸಿಕೋದ ದಕ್ಷಿಣ ಭಾಗದ ಕರಾವಳಿ ಪ್ರದೇಶಗಳ ಮೇಲೆ ಅಪ್ಪಳಿಸಿದ ವಿನಾಶಕಾರಿ ಅಗಾಥಾ ಚಂಡ ಮಾರುತಕ್ಕೆ 10 ಮಂದಿ ಬಲಿಯಾಗಿ, ಅನೇಕರು ಕಣ್ಮರೆಯಾಗಿದ್ದಾರೆ. ಈ ಪ್ರಕೃತಿ ವಿಕೋಪದಲ್ಲಿ ಅನೇಕ ಮನೆಗಳು, ರೆಸ್ಟೋರೆಂಟ್‌ಗಳಿಗೆ ಹಾನಿಯಾಗಿವೆ.

Hurricane Agatha hit south Mexico, Hurricane Agatha news, Hurricane Agatha in Mexico, ದಕ್ಷಿಣ ಮೆಕ್ಸಿಕೋಗೆ ಅಪ್ಪಳಿಸಿದ ಅಗಾಥಾ ಚಂಡಮಾರುತ, ಅಗಾಥಾ ಚಂಡಮಾರುತ ಸುದ್ದಿ, ಮೆಕ್ಸಿಕೋದಲ್ಲಿ ಅಗಾಥ ಚಂಡಮಾರುತ,
ಕೃಪೆ : Twitter
author img

By

Published : Jun 1, 2022, 8:40 AM IST

ಓಕ್ಸಾಕಾ( ಮೆಕ್ಸಿಕೋ): ಅಗಾಥಾ ಚಂಡಮಾರುತಕ್ಕೆ ಮೆಕ್ಸಿಕೋದ ಜನರು ತತ್ತರಿಸಿ ಹೋಗಿದ್ದಾರೆ. ಪ್ರವಾಹ ಮತ್ತು ಗುಡ್ಡ ಕುಸಿತದಿಂದಾಗಿ ಕನಿಷ್ಠ 10 ಜನರು ಸಾವನ್ನಪ್ಪಿದ್ದು, 20 ಮಂದಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ದಕ್ಷಿಣ ರಾಜ್ಯ ಓಕ್ಸಾಕಾದ ಗವರ್ನರ್ ಮಂಗಳವಾರ ಮಾಹಿತಿ ನೀಡಿದ್ದಾರೆ.

ಅಗಾಥಾ ಚಂಡಮಾರುತದಿಂದಾಗಿ ಅಪಾರ ಹಾನಿಯುಂಟು ಮಾಡಿದೆ. ಈ ಪ್ರಕೃತಿ ವಿಕೋಪದಲ್ಲಿ ಅನೇಕ ಮನೆಗಳು, ರೆಸ್ಟೋರೆಂಟ್‌ಗಳು ನೆಲಸಮವಾಗಿವೆ. ವಸತಿ ಪ್ರದೇಶ ಮತ್ತು ರಸ್ತೆಗಳು ಜಲಾವೃತವಾಗಿದ್ದು, ಅನೇಕ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಜನ ಜೀವನಕ್ಕೆ ಅಡ್ಡಿಯಾಗಿದೆ ಎಂದು ಗವರ್ನರ್​ ಅಲೆಜಾಂಡೋ ಮುರಾತ್​ ಹೇಳಿದ್ದಾರೆ.

ವಿಪರೀತ ಮಳೆಯಿಂದಾಗಿ ನದಿಗಳು ತುಂಬಿ ತುಳುಕುತ್ತಿವೆ. ಅಷ್ಟೇ ಅಲ್ಲ ದಡಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದಾಗಿ ನದಿ ತೀರದ ವಾಸಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಹ ಮತ್ತು ಭೂ ಕುಸಿತದಿಂದಾಗಿ ಅನೇಕ ಜನರು ಮಣ್ಣಿನಡಿ ಸಿಲುಕಿದ್ದಾರೆ ಎಂದು ಗವರ್ನರ್​ ಹೇಳಿದ್ದಾರೆ.

ಹುವಾಟುಲ್ಕೊ ರೆಸಾರ್ಟ್ ಬಳಿ ಮೂವರು ಮಕ್ಕಳು ಕಾಣೆಯಾಗಿರುವ ಬಗ್ಗೆ ವರದಿಗಳಿವೆ. ಓಕ್ಸಾಕಾದಲ್ಲಿನ ಸಣ್ಣ ಕಡಲತೀರದ ಪಟ್ಟಣಗಳಲ್ಲಿ ಭೂಕುಸಿತವಾಗಿದೆ. ಇದು ಪ್ರಬಲವಾದ ವರ್ಗ 2 ಚಂಡಮಾರುತವಾಗಿದ್ದು, ಗರಿಷ್ಠ 105 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಅಗಾಥಾ ಚಂಡಮಾರುತ ಮಂಗಳವಾರ ಈಶಾನ್ಯಕ್ಕೆ ವೆರಾಕ್ರಜ್ ರಾಜ್ಯಕ್ಕೆ ಚಲಿಸುತ್ತಿವೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ಗವರ್ನರ್​ ಮಾಹಿತಿ ನೀಡಿದ್ದಾರೆ.

ಕರಾವಳಿಯ ಸಮೀಪವಿರುವ ಕೆಲವು ಸಮುದಾಯಗಳಿಗೆ ವಿದ್ಯುತ್ ಅನ್ನು ಮರುಸ್ಥಾಪಿಸಲಾಗಿದೆ. ಕೆಲವು ಸೇತುವೆಗಳು ಕೊಚ್ಚಿಹೋಗಿವೆ. ಮಣ್ಣಿನ ಕುಸಿತಗಳಿಂದಾಗಿ ಹಲವಾರು ಹೆದ್ದಾರಿಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿವೆ ಎಂದು ಮುರಾತ್ ಹೇಳಿದರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.