ETV Bharat / international

ಕೀನ್ಯಾದ ಭೀಕರ ಬರಗಾಲಕ್ಕೆ ತುತ್ತಾದ ನೂರಾರು ಆನೆಗಳು, ಜೀಬ್ರಾ

author img

By

Published : Nov 5, 2022, 7:27 PM IST

ಕೀನ್ಯಾ ವೈಲ್ಡ್​ಲೈಫ್​ ಸರ್ವಿಸ್​ ಮತ್ತು ಇತರ ಸಂಸ್ಥೆಗಳ ನೀಡಿರುವ ವರದಿ ಪ್ರಕಾರ, ಕಳೆದ ಒಂಬತ್ತು ತಿಂಗಳಲ್ಲಿ 205 ಆನೆಗಳು, 512 ಕಾಡಾನೆಗಳು, 381 ಸಾಮಾನ್ಯ ಜೀಬ್ರಾಗಳು, 51 ಎಮ್ಮೆಗಳು, 49 ಗ್ರೆವಿಯ ಜೀಬ್ರಾಗಳು ಮತ್ತು 12 ಜಿರಾಫೆಗಳು ಸಾವನ್ನಪ್ಪಿವೆ.

Hundreds of elephants zebras died from Kenyas terrible drought
ಕೀನ್ಯಾದ ಭೀಕರ ಬರಗಾಲಕ್ಕೆ ತುತ್ತಾದ ನೂರಾರು ಆನೆಗಳು, ಜೀಬ್ರಾ

ನೈರೋಬಿ (ಕೀನ್ಯಾ): ಕಳೆದ ಹತ್ತು ವರ್ಷಗಳಲ್ಲೇ ಕಂಡು ಕೇಳರಿಯದ ಭೀಕರ ಬರಗಾಲಕ್ಕೆ ಈ ವರ್ಷ ಪೂರ್ವ ಆಫ್ರಿಕಾ ತುತ್ತಾಗಿದ್ದು, ತೀವ್ರ ಬರಗಾಲದ ಪರಿಣಾಮದಿಂದಾಗಿ ಕೀನ್ಯಾದ ವನ್ಯಜೀವಿ ಸಂರಕ್ಷಣಾ ವಲಯದಲ್ಲಿ ಆನೆಗಳು, ಅಳಿವಿನಂಚಿನಲ್ಲಿರುವ ಗ್ರೆವಿ ಜೀಬ್ರಾಗಳು ಸೇರಿದಂತೆ ನೂರಾರು ಪ್ರಾಣಿಗಳು ಜೀವ ಕಳೆದುಕೊಂಡಿವೆ ಎಂದು ಶುಕ್ರವಾರ ಬಿಡುಗಡೆಯಾದ ವರದಿಯೊಂದು ತಿಳಿಸಿದೆ.

ಕೀನ್ಯಾ ವೈಲ್ಡ್​ಲೈಫ್​ ಸರ್ವಿಸ್​ ಮತ್ತು ಇತರ ಸಂಸ್ಥೆಗಳ ನೀಡಿರುವ ವರದಿ ಪ್ರಕಾರ, ಕಳೆದ ಒಂಬತ್ತು ತಿಂಗಳಲ್ಲಿ 205 ಆನೆಗಳು, 512 ಕಾಡಾನೆಗಳು, 381 ಸಾಮಾನ್ಯ ಜೀಬ್ರಾಗಳು, 51 ಎಮ್ಮೆಗಳು, 49 ಗ್ರೆವಿಯ ಜೀಬ್ರಾಗಳು ಮತ್ತು 12 ಜಿರಾಫೆಗಳು ಸಾವನ್ನಪ್ಪಿವೆ.

ಕಳೆದ ಎರಡು ವರ್ಷಗಳಲ್ಲಿ ಕೀನ್ಯಾದ ಬಹುತೇಕ ಭಾಗಗಳಲ್ಲಿ ನಾಲ್ಕೂ ಋತುಗಳಲ್ಲಿಯು ಸಮರ್ಪಕವಾಗಿ ಮಳೆಯಾಗಿಲ್ಲ. ಮಳೆ ಇಲ್ಲದೇ ನೀರಿಲ್ಲ. ಬರಗಾಲ ಬಂದು ಉಂಟಾದ ನೀರಿನ ಅಭಾವದಿಂದಾಗಿ ಜಾನುವಾರುಗಳು ಸೇರಿದಂತೆ ಪ್ರಾಣಿಗಳು ಮತ್ತು ಜನರು ಭೀಕರ ಪರಿಣಾಮಗಳನ್ನು ಎದುರಿಸುವಂತಾಗಿದೆ.

ಕೀನ್ಯಾದ ಕೆಲವು ಅತಿ ಹೆಚ್ಚು ಭೇಟಿ ನೀಡುವಂತಹ ರಾಷ್ಟ್ರೀಯ ಉದ್ಯಾನಗಳು, ಅಂಬೋಸೆಲಿ, ಟ್ಸಾವೊ ಮತ್ತು ಲೈಕಿಪಿಯಾ - ಸಂಬೂರು ಪ್ರದೇಶಗಳನ್ನು ಒಳಗೊಂಡ ಸಂರಕ್ಷಿತಾರಣ್ಯ ಪ್ರದೇಶಗಳು ಬರಗಾಲದಿಂದಾಗಿ ಕೆಟ್ಟ ಪರಿಸರ ವ್ಯವಸ್ಥೆ ನಿರ್ಮಾಣವಾಗಿ ಪ್ರವಾಸಿತಾಣದ ಕಳೆಯನ್ನೇ ಕಳೆದು ಕೊಂಡಿದೆ ಎಂದು ವರದಿ ಪ್ರಸ್ತುತಪಡಿಸಿದ ಲೇಖಕರು ಅಭಿಪ್ರಾಯಪಟ್ಟಿದ್ದಾರೆ.

ಅಂಬೋಸೆಲಿಯಲ್ಲಿ ವನ್ಯಜೀವಿಗಳ ಮೇಲೆ ಬರಗಾಲ ಯಾವ ರೀತಿ ಪರಿಣಾಮ ಬೀರಿದೆ ಎಂಬುದರ ಕುರಿತು ವಿವರವಾದ ಮಾಹಿತಿ ಕಲೆ ಹಾಕಲು ಅಲ್ಲಿನ ವನ್ಯಜೀವಿಗಳ ತುರ್ತು ವೈಮಾನಿಕ ಗಣತಿ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ. ಇನ್ನೂ ಕೆಲವು ತಜ್ಞರು ಬರ ಪೀಡಿತ ಪ್ರದೇಶಗಳಲ್ಲಿ ತಕ್ಷಣವೇ ನೀರು ಮತ್ತು ಸಾಲ್ಟ್​ ಲಿಕ್ಸ್​ಗಳ ವ್ಯವಸ್ಥೆ ಮಾಡಬೇಕು ಎಂದು ಶಿಫಾರಸು ಮಾಡಿದ್ದಾರೆ.

ಇದನ್ನೂ ಓದಿ: ವಿಡಿಯೋ: ಬರಗಾಲದಿಂದ ಅನ್ನದಾತನ ಕಣ್ಣೀರು.. ಬೆಳೆಯ ಮಧ್ಯೆ ಬಿದ್ದು ಗೊಳಾಡಿದ ರೈತ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.