ಇಸ್ಲಾಮಾಬಾದ್ (ಪಾಕಿಸ್ತಾನ): ಬಲೂಚ್ ನಾಗರಿಕರ ಬಲವಂತದ ಕಣ್ಮರೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ 50ನೇ ದಿನ ದಾಟಿ ಮುಂದುವರೆದಿರುವ ಮಧ್ಯೆ ಬಲೂಚ್ ಕಾರ್ಯಕರ್ತರಾದ ಮಹರಂಗ್ ಬಲೂಚ್ ಮತ್ತು ಸಮ್ಮಿ ದೀನ್ ಬಲೂಚ್ ಅವರು ವಿಶ್ವಸಂಸ್ಥೆಯ ಅಧಿಕಾರಿಗಳನ್ನು ಭೇಟಿಯಾಗಿ ಬಲೂಚಿಸ್ತಾನದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು ಎಂದು ಬಲೂಚಿಸ್ತಾನ್ ಪೋಸ್ಟ್ ವರದಿ ಮಾಡಿದೆ.
-
Today, we met the UN's Resident Coordinator officer Mr. Shah Nasir Khan at the UN office in Islamabad. In the meeting Dr. Mariam Shaikh, a communications advisor in the UN and Ms. Mio Sato, the former Chief Mission of the United Nations Mission to Pakistan were also present.
— Sammi Deen Baloch (@SammiBaluch) January 15, 2024 " class="align-text-top noRightClick twitterSection" data="
We… pic.twitter.com/zNs3tbR09z
">Today, we met the UN's Resident Coordinator officer Mr. Shah Nasir Khan at the UN office in Islamabad. In the meeting Dr. Mariam Shaikh, a communications advisor in the UN and Ms. Mio Sato, the former Chief Mission of the United Nations Mission to Pakistan were also present.
— Sammi Deen Baloch (@SammiBaluch) January 15, 2024
We… pic.twitter.com/zNs3tbR09zToday, we met the UN's Resident Coordinator officer Mr. Shah Nasir Khan at the UN office in Islamabad. In the meeting Dr. Mariam Shaikh, a communications advisor in the UN and Ms. Mio Sato, the former Chief Mission of the United Nations Mission to Pakistan were also present.
— Sammi Deen Baloch (@SammiBaluch) January 15, 2024
We… pic.twitter.com/zNs3tbR09z
ವಿಶ್ವಸಂಸ್ಥೆಯ ನಿಯೋಗದಲ್ಲಿ ಪಾಕಿಸ್ತಾನದಲ್ಲಿನ ವಿಶ್ವಸಂಸ್ಥೆ ಮಿಷನ್ನ ಉನ್ನತ ಅಧಿಕಾರಿಗಳು, ಯುಎನ್ ಮಿಷನ್ ಮತ್ತು ಪಾಕಿಸ್ತಾನದ ಅಂತಾರಾಷ್ಟ್ರೀಯ ವಲಸೆ ಸಂಸ್ಥೆ (ಐಒಎಂ) ಮಾಜಿ ಮುಖ್ಯಸ್ಥ ಮಿಯೋ ಸಾಟೊ, ವಿಶ್ವಸಂಸ್ಥೆಯ ಸ್ಥಾನಿಕ ಸಂಯೋಜಕ ಅಧಿಕಾರಿ ಶಾ ನಾಸಿರ್ ಖಾನ್ ಮತ್ತು ವಿಶ್ವಸಂಸ್ಥೆಯ ಸಂವಹನ ಸಲಹೆಗಾರ ಮರಿಯಮ್ ಶೇಖ್ ಭಾಗಿಯಾಗಿದ್ದರು.
ಬಲವಂತದ ಕಣ್ಮರೆ, ಕಾನೂನುಬಾಹಿರ ಹತ್ಯೆಗಳು ಮತ್ತು ಬಲೂಚ್ ಹಕ್ಕುಗಳಿಗಾಗಿ ಪ್ರತಿಪಾದಿಸುವ ಶಾಂತಿಯುತ ಪ್ರತಿಭಟನಾಕಾರರನ್ನು ದಮನಿಸುವುದು ಸೇರಿದಂತೆ ಬಲೂಚಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ವಿವರಗಳನ್ನು ಬಲೂಚ್ ಕಾರ್ಯಕರ್ತರು ವಿಶ್ವಸಂಸ್ಥೆಯ ಮುಂದೆ ಪ್ರಸ್ತುತಪಡಿಸಿದರು. ಬಲೂಚಿಸ್ತಾನ್ ಪೋಸ್ಟ್ ಪ್ರಕಾರ, ಪ್ರತಿಭಟನೆಗಳು ಮತ್ತು ಧರಣಿಗಳ ಸಮಯದಲ್ಲಿ ಬಲೂಚ್ ಪ್ರತಿಭಟನಾಕಾರರು ಎದುರಿಸುತ್ತಿರುವ ಬೆದರಿಕೆಗಳನ್ನು ಪ್ರಮುಖವಾಗಿ ಎತ್ತಿ ತೋರಿಸಲಾಗಿದೆ. ಮಹರಂಗ್ ಬಲೂಚ್ ಮತ್ತು ಸಮ್ಮಿ ದೀನ್ ಬಲೂಚ್ ಅವರು ಮಾಡಿದ ಆರೋಪಗಳನ್ನು ವಿಶ್ವಸಂಸ್ಥೆ ಅಧಿಕಾರಿಗಳು ಒಪ್ಪಿಕೊಂಡರು ಎಂದು ವರದಿಯಾಗಿದೆ.
ಮುಂದಿನ ಕ್ರಮಕ್ಕಾಗಿ ವಿಶ್ವಸಂಸ್ಥೆ ಸಂಬಂಧಿತ ಇಲಾಖೆಗಳೊಂದಿಗೆ ಸಮಸ್ಯೆಗಳನ್ನು ಚರ್ಚಿಸಲಾಗುವುದು ಎಂದು ಅಧಿಕಾರಿಗಳು ಕಾರ್ಯಕರ್ತರಿಗೆ ಭರವಸೆ ನೀಡಿದ್ದಾರೆ. ಯುಎನ್ ಅಧಿಕಾರಿಗಳು ಮತ್ತು ಬಲೂಚ್ ಕಾರ್ಯಕರ್ತರ ನಡುವೆ ನಡೆದ ಸಭೆ ಬಲೂಚಿಸ್ತಾನದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿಯನ್ನು ಪರಿಹರಿಸುವಲ್ಲಿ ಅಂತರರಾಷ್ಟ್ರೀಯ ಸಂಸ್ಥೆಗಳನ್ನು ತೊಡಗಿಸಿಕೊಳ್ಳಲು ಬಲೂಚ್ ಯಕ್ ಜೆಹ್ತಿ ಸಮಿತಿ (ಬಿವೈಸಿ) ಕೈಗೊಂಡ ಉಪಕ್ರಮವಾಗಿದೆ ಎಂದು ಬಲೂಚಿಸ್ತಾನ್ ಪೋಸ್ಟ್ ವರದಿ ಮಾಡಿದೆ.
ಏತನ್ಮಧ್ಯೆ, ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ಬಗ್ಗೆ ಸ್ವತಂತ್ರ ತನಿಖೆಗಾಗಿ ವಿಶ್ವಸಂಸ್ಥೆ ಸತ್ಯಶೋಧನಾ ನಿಯೋಗವನ್ನು ಈ ಪ್ರದೇಶಕ್ಕೆ ಕಳುಹಿಸಬೇಕೆಂದು ಬಿವೈಸಿ ಪ್ರತಿಪಾದಿಸುತ್ತಿದೆ. ಇದಕ್ಕೂ ಮುನ್ನ ಭಾನುವಾರ, ಕೆಚ್ನ ತುಂಪ್ ಪ್ರದೇಶದ ಕೊಹಾರ್ ಗ್ರಾಮದ ಬಾಲಕನನ್ನು ಮಧ್ಯರಾತ್ರಿಯಲ್ಲಿ ಪಾಕಿಸ್ತಾನಿ ಪಡೆಗಳು ವಶಕ್ಕೆ ತೆಗೆದುಕೊಂಡಿವೆ ಎಂದು ಆರೋಪಿಸಲಾಗಿದೆ ಮತ್ತು ಅಂದಿನಿಂದ ಬಾಲಕ ಎಲ್ಲಿದ್ದಾನೆ ಎಂಬುದು ನಿಗೂಢವಾಗಿದೆ.
ಬಲೂಚಿಸ್ತಾನದಲ್ಲಿ ಬಲವಂತದ ಕಣ್ಮರೆಗಳು ಪ್ರತಿದಿನವೂ ನಡೆಯುತ್ತಿರುವುದು ಗಮನಾರ್ಹ. ಇಂಥ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳನ್ನು ಜಗತ್ತಿಗೆ ತೋರಿಸಲು ಬಲೂಚ್ ಯಕ್ ಜೆಹ್ತಿ ಸಮಿತಿ (ಬಿವೈಸಿ) ಕಳೆದ ಎರಡು ತಿಂಗಳಿನಿಂದ ಬಲೂಚಿಸ್ತಾನ ಮತ್ತು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನಲ್ಲಿ ಧರಣಿಗಳನ್ನು ನಡೆಸುತ್ತಿದೆ.
ಬಲೂಚ್ ಜನರ ಬಲವಂತದ ಕಣ್ಮರೆಗಳ ವಿರುದ್ಧ ವಿಶ್ವದಾದ್ಯಂತ ತಮ್ಮ ಆಂದೋಲನಕ್ಕೆ ಬೆಂಬಲ ಪಡೆಯಲು ಬಲೂಚ್ ಯಕ್ ಜೆಹ್ತಿ ಸಮಿತಿ (ಬಿವೈಸಿ) ಶನಿವಾರ ಸಾಮಾಜಿಕ ಮಾಧ್ಯಮ ಅಭಿಯಾನ #IStandWithBalochMarch ಪ್ರಾರಂಭಿಸಿದೆ. ಬಲೂಚಿಸ್ತಾನದ ಪರಿಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ನ್ಯಾಯವನ್ನು ಬೆಂಬಲಿಸುವ ಧ್ವನಿಗಳನ್ನು ಒಟ್ಟುಗೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ಬಲೂಚಿಸ್ತಾನ್ ಪೋಸ್ಟ್ ವರದಿ ಮಾಡಿದೆ.
ಇದನ್ನೂ ಓದಿ : ಮಾರ್ಚ್ 15ರೊಳಗೆ ಮಿಲಿಟರಿ ಹಿಂಪಡೆಯಿರಿ: ಭಾರತಕ್ಕೆ ಮಾಲ್ಡೀವ್ಸ್ ಕೋರಿಕೆ