ಅಮೆರಿಕ : ವೆಸ್ಟ್ ಸೆಂಟ್ರಲ್ ಇಂಡಿಯಾನಾದಲ್ಲಿನ ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಿಂದ 90 ರ ಹರೆಯದ ಇಬ್ಬರು ಧಾರುಣವಾಗಿ ಸಾವನ್ನಪ್ಪಿದ್ದು, ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರನ್ನು ಮಾಂಟ್ಗೊಮೆರಿ ಕೌಂಟಿ ಕರೋನರ್ ರಿಚರ್ಡ್ ಚಸ್ಟೈನ್ (90) ಮತ್ತು ಮರ್ಲಿನ್ ಫಾಕ್ಸ್ ( 91) ಎಂದು ಗುರುತಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕ್ರಾಫೋರ್ಡ್ಸ್‌ವಿಲ್ಲೆ ಅಗ್ನಿಶಾಮಕ ದಳದ ಮುಖ್ಯಸ್ಥ ಸ್ಕಾಟ್ ಬುಸೆನ್‌ಬಾರ್ಕ್, ಶನಿವಾರ ಬೆಳಗ್ಗೆ ಮನೆಗೆ ಬೆಂಕಿ ಬಿದ್ದಿರುವ ಕುರಿತು ಕರೆ ಬಂದಿತು. ಕೂಡಲೇ ಸಿಬ್ಬಂದಿ ಕಳುಹಿಸಿ ಕೊಡಲಾಯಿತು. ಸ್ಥಳಕ್ಕಾಗಮಿಸಿದಾಗ ಮನೆಯ ಮುಂಭಾಗದ ಹುಲ್ಲುಹಾಸಿನ ಮೇಲೆ ಒಬ್ಬ ವ್ಯಕ್ತಿ ಮಲಗಿರುವುದು ಕಂಡು ಬಂದಿತು. ಕೂಡಲೇ ಗಾಯಗೊಂಡ ವ್ಯಕ್ತಿಯನ್ನ ಹೆಲಿಕಾಪ್ಟರ್ ಮೂಲಕ ಇಂಡಿಯಾನಾಪೊಲಿಸ್ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಬೆಂಕಿ ನಂದಿಸಿದ ಬಳಿಕ ಮನೆಗೆ ಪ್ರವೇಶಿಸಿದಾಗ ಇಬ್ಬರು ಮೃತಪಟ್ಟಿರುವುದು ದೃಢಪಟ್ಟಿದ್ದು, ಮೃತ ದೇಹಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ.
ಶನಿವಾರ ಬೆಳಗ್ಗೆ ಸುಮಾರು 8:30 ರ ವೇಳೆಗೆ ಸ್ಫೋಟದ ಶಬ್ದ ಕೇಳಿಸಿತು. ಕೂಡಲೇ ನೆರೆಹೊರೆಯವರು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ ಎಂದು ಅಲ್ಲಿನ ಸ್ಥಳೀಯ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.
ಇದನ್ನೂ ಓದಿ : ಗಾಂಜಾ ಕಳ್ಳಸಾಗಣೆಯಲ್ಲಿ ಪೊಲೀಸರೇ ಭಾಗಿ ಆರೋಪ : ಠಾಣೆಗೆ ಬೆಂಕಿ, ಅಧಿಕಾರಿಗಳ ಬೆನ್ನಟ್ಟಿ ಹಲ್ಲೆ ನಡೆಸಿದ ಜನ
ಇನ್ನು ಮೃತ ಚಾಸ್ಟೈನ್, ಇಂಡಿಯಾನಾ ನ್ಯಾಷನಲ್ ಗಾರ್ಡ್ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ. ಸ್ಥಳೀಯ ಸಮುದಾಯ ಕೇಂದ್ರವೊಂದರಲ್ಲಿ ಶನಿವಾರ ನಿವೃತ್ತ ಚಸ್ಟೈನ್‌ಗೆ 90 ನೇ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ. ಹಾಗೆಯೇ, ಇಂಡಿಯಾನಾ ನ್ಯಾಷನಲ್ ಗಾರ್ಡ್‌ನ ನಿವೃತ್ತ ಮೇಜರ್ ಜನರಲ್ ಆರ್. ಮಾರ್ಟಿನ್ ಉಂಬರ್ಗರ್ ಸಹೊದ್ಯೋಗಿ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಹೊತ್ತಿ ಉರಿದ ಎಲೆಕ್ಟ್ರಿಕ್ ಬೈಕ್ : ಇನ್ನು ಚಾರ್ಜ್ ಮಾಡಿ ಮನೆ ಮುಂದೆ ನಿಲ್ಲಿಸಿದ್ದ ಎಲೆಕ್ಟ್ರಿಕ್ ಬೈಕ್ ಸ್ಟಾರ್ಟ್ ಮಾಡಿದ ವೇಳೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಧಗಧಗನೇ ಹೊತ್ತಿ ಉರಿದ ಘಟನೆ ನಿನ್ನೆ ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ನಡೆದಿತ್ತು. ಕೊತ್ತಲವಾಡಿಯ ಬಸವರಾಜಪ್ಪ ಎಂಬುವರಿಗೆ ಸೇರಿದ ಬೈಕ್ ಇದಾಗಿದ್ದು, ಚಾರ್ಜ್ ಆದ ಬಳಿಕ ಸ್ಟಾರ್ಟ್ ಮಾಡಿದ ವೇಳೆ ಹೊಗೆ ಕಾಣಿಸಿಕೊಂಡಿದೆ. ಬಳಿಕ ಅವರು ಆತಂಕದಿಂದ ಹಿಂದೆ ಸರಿದಿದ್ದು, ಕ್ಷಣಾರ್ಧದಲ್ಲೇ ದಿಢೀರ್ ಬೆಂಕಿಯ ಜ್ವಾಲೆ ಕಾಣಿಸಿಕೊಂಡು ಹೊತ್ತಿ ಉರಿದಿತ್ತು. ಅದೃಷ್ಟವಶಾತ್ ಪಕ್ಕದಲ್ಲೇ ನಿಲ್ಲಿಸಿದ್ದ ಮತ್ತೊಂದು ಬೈಕ್ ಹಾಗೂ ಮನೆಗೆ ಬೆಂಕಿ ವ್ಯಾಪಿಸಿಲ್ಲ. ಕೂಡಲೇ ಕೆಲ ಯುವಕರು ಸೇರಿ ಬೈಕ್ಗೆ ನೀರು ಹಾಯಿಸಿ ಬೆಂಕಿ ನಂದಿಸಿದ್ದಾರೆ.
ಇದನ್ನೂ ಓದಿ : ಚಾರ್ಜಿಂಗ್ ಬಳಿಕ ಸ್ಟಾರ್ಟ್ ಮಾಡುತ್ತಿದ್ದಂತೆ ಹೊತ್ತಿ ಉರಿದ ಎಲೆಕ್ಟ್ರಿಕ್ ಬೈಕ್ : ವಿಡಿಯೋ