ETV Bharat / international

ಚೀನಾದಲ್ಲಿ ತೀವ್ರ ಬಿಸಿಗಾಳಿ: ಜನಜೀವನ ಅಸ್ತವ್ಯಸ್ತ

ಚೀನಾದಲ್ಲಿ ಈ ವರ್ಷ ಬಿಸಿಲಿನ ತಾಪ ತೀವ್ರ ಹೆಚ್ಚಾಗಿದೆ. ಇದರ ಜೊತೆಗೆ ವಿದ್ಯುತ್ ಕೊರತೆ ಸಹ ತೀವ್ರವಾಗುತ್ತಿರುವುದರಿಂದ ಚೀನಾದ ಹಲವಾರು ಪ್ರಾಂತ್ಯಗಳಲ್ಲಿ ಕಾರ್ಖಾನೆಗಳನ್ನು ಮುಚ್ಚಲಾಗುತ್ತಿದೆ.

Worst April heatwave in Asian history
Worst April heatwave in Asian history
author img

By

Published : Apr 19, 2023, 5:14 PM IST

ಹಾಂಕಾಂಗ್: ಚೀನಾ ಈ ಬಾರಿ 60 ವರ್ಷಗಳಲ್ಲಿಯೇ ಅತ್ಯಧಿಕ ಬಿಸಿಲಿನ ತಾಪವನ್ನು ಎದುರಿಸುತ್ತಿದೆ. ಚೀನಾದ ಹಲವಾರು ನಗರಗಳಲ್ಲಿನ ತಾಪಮಾನದ ಮಟ್ಟ 40 ಡಿಗ್ರಿ ಸೆಲ್ಸಿಯಸ್ (104 ಡಿಗ್ರಿ ಫ್ಯಾರನ್‌ಹೀಟ್) ದಾಟಿದ್ದು, ಅನಿವಾರ್ಯವಾಗಿ ಹಲವಾರು ಕಾರ್ಖಾನೆಗಳನ್ನು ಮುಚ್ಚಲಾಗುತ್ತಿದೆ. ದೇಶಾದ್ಯಂತ ಮೈಸುಡುವ ಗಾಳಿ ಬೀಸುತ್ತಿರುವ ಮಧ್ಯೆ ವಿದ್ಯುಚ್ಛಕ್ತಿ ಕೊರತೆ ಎದುರಾಗಿರುವುದರಿಂದ ಸಿಚುವಾನ್ ಪ್ರಾಂತ್ಯದಲ್ಲಿ ಆರು ದಿನಗಳ ಕಾಲ ಎಲ್ಲ ಕಾರ್ಖಾನೆಗಳನ್ನು ಮುಚ್ಚಲು ಆದೇಶಿಸಲಾಗಿದೆ. ಸಿಚುವಾನ್ ಸೆಮಿಕಂಡಕ್ಟರ್ ಮತ್ತು ಸೋಲಾರ್ ಪ್ಯಾನಲ್ ಉದ್ಯಮಗಳಿಗೆ ಪ್ರಮುಖ ಉತ್ಪಾದನಾ ಸ್ಥಳವಾಗಿದೆ. ಆ್ಯಪಲ್ ಕಂಪನಿಗೆ (AAPL) ಪೂರೈಕೆದಾರರಾದ ಫಾಕ್ಸ್‌ಕಾನ್ ಮತ್ತು ಇಂಟೆಲ್ (INTC) ಸೇರಿದಂತೆ ವಿಶ್ವದ ಕೆಲವು ದೊಡ್ಡ ಎಲೆಕ್ಟ್ರಾನಿಕ್ಸ್ ಕಂಪನಿಗಳಿಗೆ ಸೇರಿದ ಕಾರ್ಖಾನೆಗಳಿಗೆ ವಿದ್ಯುತ್ ಕಡಿತವು ತೀವ್ರ ಹೊಡೆತ ನೀಡಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.

ಸಿಚುವಾನ್ ಪ್ರಾಂತ್ಯವು ಚೀನಾದ ಲಿಥಿಯಂ ಗಣಿಗಾರಿಕೆ ಕೇಂದ್ರವಾಗಿದೆ. ಎಲೆಕ್ಟ್ರಿಕ್ ಕಾರ್ ಬ್ಯಾಟರಿಗಳ ತಯಾರಿಕೆಯಲ್ಲಿ ಲಿಥಿಯಂ ಪ್ರಮುಖವಾಗಿ ಬೇಕಾಗುತ್ತದೆ. ಹೀಗಾಗಿ ಲಿಥಿಯಂ ಕೊರತೆಯಾದಲ್ಲಿ ಕಚ್ಚಾ ವಸ್ತುಗಳ ಬೆಲೆ ಕೂಡ ಹೆಚ್ಚಾಗಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ. ವಿಪರೀತ ಶಾಖದ ಕಾರಣದಿಂದ ಕಚೇರಿಗಳು ಮತ್ತು ಮನೆಗಳಲ್ಲಿ ಹವಾನಿಯಂತ್ರಕ ಯಂತ್ರಗಳ ಬಳಕೆ ಹೆಚ್ಚಾಗಿದೆ. ಇದರಿಮದ ವಿದ್ಯುತ್ ಜಾಲದ ಮೇಲೆ ತೀವ್ರ ಒತ್ತಡ ಉಂಟಾಗುತ್ತಿದೆ. ಇನ್ನು ಜಲಕ್ಷಾಮದಿಂದ ನದಿ ನೀರಿನ ಮಟ್ಟ ಕಡಿಮೆಯಾಗಿದ್ದು, ಜಲವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆಯ ಪ್ರಮಾಣ ಕಡಿಮೆಯಾಗಿದೆ.

ದೇಶದ ಹಲವು ಪ್ರಾಂತ್ಯಗಳಲ್ಲೂ ಬಿಸಿಗಾಳಿಯ ಅಬ್ಬರ: ಸಿಚುವಾನ್ ಹೊರತುಪಡಿಸಿ ಜಿಯಾಂಗ್ಸು, ಅನ್ಹುಯಿ ಮತ್ತು ಝೆಜಿಯಾಂಗ್ ಸೇರಿದಂತೆ ಚೀನಾದ ಇತರ ಪ್ರಮುಖ ಪ್ರಾಂತ್ಯಗಳಲ್ಲಿ ಬಿಸಿಗಾಳಿಯ ಹೊಡೆತ ಎದುರಾಗಿದೆ. ಈ ಎಲ್ಲ ಪ್ರಾಂತ್ಯಗಳಲ್ಲಿ ವಿದ್ಯುತ್ ಕೊರತೆ ಎದುರಾಗಿರುವುದರಿಂದ ವಿದ್ಯುತ್ ಉಳಿತಾಯದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಉಳಿತಾಯ ಮಾಡುವ ಸಲುವಾಗಿ ಕಚೇರಿಗಳು ತಮ್ಮ AC ತಾಪಮಾನವನ್ನು 26 ಡಿಗ್ರಿ ಸೆಲ್ಸಿಯಸ್‌ಗೆ ಹೆಚ್ಚಿಸುವಂತೆ ಅಥವಾ ಮೊದಲ ಮೂರು ಮಹಡಿಗಳಿಗೆ ಲಿಫ್ಟ್ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸಲಾಗಿದೆ.

84 ಮಿಲಿಯನ್ ಜನರನ್ನು ಹೊಂದಿರುವ ಚೀನಾದ ಅತಿದೊಡ್ಡ ಪ್ರಾಂತ್ಯಗಳಲ್ಲಿ ಒಂದಾದ ಸಿಚುವಾನ್, ಪ್ರಾಂತೀಯ ಸರ್ಕಾರ ಮತ್ತು ರಾಜ್ಯ ಗ್ರಿಡ್ ಭಾನುವಾರ ತುರ್ತು ಸೂಚನೆಯನ್ನು ಹೊರಡಿಸಿದೆ. ಇದರ ಪ್ರಕಾರ ಈ ಪ್ರಾಂತ್ಯದ 21ರ ಪೈಕಿ 19 ನಗರಗಳಲ್ಲಿ ಸೋಮವಾರದಿಂದ ಶನಿವಾರದವರೆಗೆ ಎಲ್ಲಾ ಕಾರ್ಖಾನೆಗಳಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸುವಂತೆ ಆದೇಶಿಸಲಾಗಿದೆ.

ನಾಗರಿಕರ ಅಗತ್ಯ ಬಳಕೆಗೆ ಬೇಕಾಗುವಷ್ಟು ವಿದ್ಯುತ್​ ಲಭ್ಯವಾಗುವಂತೆ ನೋಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಹಲವು ಸ್ಥಳಗಳಲ್ಲಿ ನಿರಂತರವಾದ ಹೆಚ್ಚಿನ ತಾಪಮಾನದಿಂದ ತಾಜಾ ತರಕಾರಿಗಳ ಬೆಲೆ ವರ್ಷದಿಂದ ವರ್ಷಕ್ಕೆ ಶೇ 12.9 ರಷ್ಟು ಏರಿಕೆಯಾಗಿದೆ. ವಿಪರೀತ ಶಾಖದ ಕಾರಣದಿಂದ ದಕ್ಷಿಣದ ಕೆಲವು ಕೃಷಿ ಪ್ರದೇಶಗಳಲ್ಲಿ ಬರ ಉಂಟಾಗಿದೆ ಎಂದು ಅಂಕಿ - ಅಂಶಗಳ ನ್ಯಾಷನಲ್ ಬ್ಯೂರೋದ ವಕ್ತಾರ ಫು ಲಿಂಗುಯಿ ತಿಳಿಸಿದರು.

ಇದನ್ನೂ ಓದಿ : ನಿರೀಕ್ಷೆ ಮೀರಿ ಬೆಳೆದ ಚೀನಾ ಆರ್ಥಿಕತೆ: ಕೊರೊನಾ ಬಿಕ್ಕಟ್ಟಿನಿಂದ ಹೊರಬಂದ ಡ್ರ್ಯಾಗನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.