ETV Bharat / international

ಹಾಟ್​ ಏರ್​ ಬಲೂನ್​ನಲ್ಲಿ ಬೆಂಕಿ ಹೊತ್ತಿಕೊಂಡು ಇಬ್ಬರು ಸಾವು- ವಿಡಿಯೋ - ಮೆಕ್ಸಿಕೋ ಸಿಟಿ ಬಳಿಯ ಪ್ರಸಿದ್ಧ ಟಿಯೋಟಿಹುಕಾನ್ ಪ್ರದೇಶ

ಹಾಟ್​ ಏರ್​ ಬಲೂನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಇಬ್ಬರು ಪ್ರಯಾಣಿಕರು ಪ್ರಾಣ ಕಳೆದುಕೊಂಡ ಘಟನೆ ಮೆಕ್ಸಿಕೋ ಸಿಟಿ ಬಳಿಯ ಪ್ರಸಿದ್ಧ ಟಿಯೋಟಿಹುಕಾನ್ ಪ್ರದೇಶದಲ್ಲಿ ನಡೆದಿದೆ.

Hot Air Balloon
ಹಾಟ್​ ಏರ್​ ಬಲೂನ್
author img

By

Published : Apr 2, 2023, 10:49 AM IST

ಮೆಕ್ಸಿಕೋ ನಗರ : ಮೆಕ್ಸಿಕೋ ಸಿಟಿ ಸಮೀಪದ ಪ್ರಸಿದ್ಧ ಟಿಯೋಟಿಹುಕಾನ್ ಪುರಾತತ್ವ ಸ್ಥಳದಲ್ಲಿ ಹಾರಾಡುತ್ತಿದ್ದ ಹಾಟ್​ ಏರ್​ ಬಲೂನ್​ನಲ್ಲಿ ​(Hot Air Balloon) ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಇಬ್ಬರು ಸಾವನ್ನಪ್ಪಿದರು ಎಂದು ಅಲ್ಲಿನ ಸರ್ಕಾರದ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ಬಲೂನ್‌ನಿಂದ ಜಿಗಿದಿದ್ದರು.

ಮೃತರನ್ನು 39 ವರ್ಷದ ಮಹಿಳೆ ಮತ್ತು 50 ವರ್ಷದ ಪುರುಷ ಎಂದು ಗುರುತಿಸಲಾಗಿದೆ. ಪುರುಷನ ದೇಹದಲ್ಲಿ ಸುಟ್ಟ ಗಾಯಗಳಾಗಿದ್ದು, ಆತನ ಬಲ ತೊಡೆ ಎಲುಬು ಮುರಿದಿದೆ. ಬಲೂನ್‌ನಲ್ಲಿದ್ದ ಇತರೆ ಪ್ರಯಾಣಿಕರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತಾದ ವಿಡಿಯೋವೊಂದನ್ನು ಪೋಸ್ಟ್ ಮಾಡಲಾಗಿದ್ದು, ಬಲೂನ್​ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವುದನ್ನು ನೋಡಬಹುದು.

  • Mexico 🇲🇽

    ! Breaking news!🚨🚨

    Saturday, April 01, 2023, in the morning hours.

    a hot air balloon catches fire and collapses in Teotihuacan, 2 people are reportedly dead.

    The events occurred this morning in the vicinity of the Pyramid of the Sun and the area was cordoned off. pic.twitter.com/DlzJdv2oHH

    — Lenar (@Lerpc75) April 1, 2023 " class="align-text-top noRightClick twitterSection" data=" ">

ಟಿಯೋಟಿಹುಕಾನ್ ಬಗ್ಗೆ..: ಟಿಯೋಟಿಹುಕಾನ್ ಎಂಬುದು ಒಂದು ಜನಪ್ರಿಯ ಪ್ರವಾಸಿ ತಾಣ. ಹಿಸ್ಪಾನಿಕ್ ಪೂರ್ವದ ನಗರ ಟಿಯೋಟಿಹುವಾಕಾನ್ ಅನ್ನು 1987 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿದೆ. ಮೆಕ್ಸಿಕೋ ನಗರದ ಈಶಾನ್ಯಕ್ಕೆ ಸುಮಾರು 45 ಮೈಲುಗಳಷ್ಟು (70 ಕಿಲೋಮೀಟರ್) ದೂರದಲ್ಲಿದೆ. ಇಲ್ಲಿನ ಸಂಸ್ಕೃತಿ ಮತ್ತು ವಾಸ್ತುಶಿಲ್ಪವು ಓಲ್ಮೆಕ್ ನಾಗರಿಕತೆಯಿಂದ ಹೆಚ್ಚು ಪ್ರಭಾವಿತವಾಗಿದೆ. ಅಷ್ಟೇ ಅಲ್ಲದೇ, ಇಲ್ಲಿ ಸೂರ್ಯನ ಪಿರಮಿಡ್ ಅನ್ನು ನಿರ್ಮಿಸಲಾಗಿದೆ.

ಇದನ್ನೂ ಓದಿ: ಹಾಟ್​​ ಏರ್​ ಬಲೂನ್​ ಏರಿ ಆಗಸದಲ್ಲಿ ಹಾರ ಬದಲಾಯಿಸಿದ ನವಜೋಡಿ.. ವಿಡಿಯೋ

ಜನನಿಬಿಡ ಪ್ರದೇಶಕ್ಕೆ ಬಂದಿಳಿದ ಹಾಟ್ ಏರ್ ಬಲೂನ್: ಕಳೆದ ಫೆ. 3 ರಂದು ಉತ್ತರ ಪ್ರದೇಶದ ಕಾಶಿಯಲ್ಲಿ ನಡೆದ ಹಾಟ್ ಏರ್ ಬಲೂನ್ ಉತ್ಸವದ ವಿಡಿಯೋವೊಂದು ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿಡಿಯೋದಲ್ಲಿ ಏರ್ ಬಲೂನ್ ಸಿಗ್ರಾ ಪ್ರದೇಶದಲ್ಲಿ ಇಳಿಯುವುದನ್ನು ಕಾಣಬಹುದು. ಜನನಿಬಿಡ ಪ್ರದೇಶಕ್ಕೆ ಏಕಾಏಕಿ ಬಲೂನ್ ಬಂದಿರುವುದನ್ನು ನೋಡಿ ಮಕ್ಕಳು ಜೋರಾಗಿ ಕೂಗಲಾರಂಭಿಸಿದ್ದರು. ವಾರಣಾಸಿಯ ಸಿಗ್ರಾದಲ್ಲಿರುವ ಲಜಪತ್ ನಗರದ ಉದ್ಯಾನವನದಲ್ಲಿ ಬಲೂನ್​​ ಬಿದ್ದಿತ್ತು. ಜನವರಿ 17 ರಿಂದ 20 ರವರೆಗೆ ವಾರಣಾಸಿಯಲ್ಲಿ 4 ದಿನಗಳ ಹಾಟ್ ಏರ್ ಬಲೂನ್ ಉತ್ಸವ ಆಯೋಜಿಸಲಾಗಿತ್ತು.

ಇದನ್ನೂ ಓದಿ: ವಾರಣಾಸಿಯಲ್ಲಿ ಬಿದ್ದ ಹಾಟ್ ಏರ್ ಬಲೂನ್: ವಿಡಿಯೋ ವೈರಲ್

ಹಾಟ್​ ಏರ್ ​ಬಲೂನ್​ ಏರಿದ ದಂಪತಿ: ಅಷ್ಟೇ ಅಲ್ಲದೇ, ಛತ್ತೀಸ್​ಗಢದ ಮದುವೆ ಸಮಾರಂಭದ ಬಳಿಕ ನಡೆದ ವರಮಲಾ ಎಂಬ ಕಾರ್ಯಕ್ರಮದಲ್ಲಿ ದಂಪತಿಗಳಿಬ್ಬರು ಹಾಟ್​ ಏರ್ ​ಬಲೂನ್​ ಏರಿ ಆಗಸದಲ್ಲಿ ಹಾರವನ್ನು ಬದಲಾವಣೆ ಮಾಡಿಕೊಳ್ಳುವ ಮೂಲಕ ಗಮನ ಸೆಳೆದ ಘಟನೆ ಸಹ ಫೆಬ್ರವರಿ ತಿಂಗಳಲ್ಲಿ ನಡೆದಿತ್ತು. ಮದುವೆ ಬಳಿಕ ರಾತ್ರಿ ನಡೆದ ವರಮಾಲ ಕಾರ್ಯಕ್ರಮದಲ್ಲಿ ನವದಂಪತಿಗಳಾದ ಪ್ರೀತಿ ಮತ್ತು ರವಿ ಹಾಟ್​ ಏರ್​ ಬಲೂನ್​ ಹತ್ತಿ 100 ಅಡಿ ಎತ್ತರಕ್ಕೆ ಹೋಗಿ ಹೂವಿನ ಹಾರ ಬದಲಾವಣೆ ಮಾಡಿಕೊಂಡಿದ್ದರು.

ಇದನ್ನೂ ಓದಿ: ಕೀನ್ಯಾದ ಕಾಡಿನಲ್ಲಿ ಏರ್ ಬಲೂನ್​​ ಹತ್ತಿ ಫೊಟೋಗ್ರಫಿ ಮಾಡುತ್ತಿರುವ ದರ್ಶನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.