ETV Bharat / international

ಯುದ್ಧಕ್ಕೆ ಲೆಬನಾನ್‌ ಎಳೆಯುತ್ತಿರುವ ಹಿಜ್ಬುಲ್ಲಾ ಉಗ್ರರಿಂದ ಅಪಾಯಕಾರಿ ಆಟ: ಇಸ್ರೇಲ್

author img

By ANI

Published : Oct 22, 2023, 8:00 PM IST

ಹಮಾಸ್​ ಉಗ್ರರ ನಾಶಕ್ಕೆ ಗಾಜಾದ ಮೇಲೆ ಇಸ್ರೇಲ್ ಪಡೆಗಳು ದಾಳಿ ಮಾಡುತ್ತಿದ್ದರೆ, ಇತ್ತ ಲೆಬನಾನಿನ ಹಿಜ್ಬುಲ್ಲಾ ಬಂಡುಕೋರರು ಇಸ್ರೇಲ್​ ಮೇಲೆ ದಾಳಿ ನಡೆಸುತ್ತಿದ್ದಾರೆ.

ಇಸ್ರೇಲ್​ ಸೇನೆ
ಇಸ್ರೇಲ್​ ಸೇನೆ

ಟೆಲ್ ಅವಿವ್ (ಇಸ್ರೇಲ್): ಹಮಾಸ್​ ದಾಳಿ ಮಾಡಿದ್ದಕ್ಕೆ ಪ್ರತಿದಾಳಿ ಮಾಡಲಾಗುತ್ತಿದೆ. ಆದರೆ, ಇದರಲ್ಲಿ ಮೂಗು ತೂರಿಸುತ್ತಿರುವ ಹಿಜ್ಬುಲ್ಲಾ ಬಂಡುಕೋರ ಪಡೆಯು ಯುದ್ಧವನ್ನು ಇನ್ನಷ್ಟು ವಿಸ್ತರಿಸುವ ಅಪಾಯಕಾರಿ ಆಟ ಆಡುತ್ತಿದೆ. ಲೆಬನಾನ್​ ಯುದ್ಧದಲ್ಲಿ ಭಾಗಿಯಾಗುವಂತೆ ಮಾಡುತ್ತಿದೆ ಎಂದು ಇಸ್ರೇಲ್​ ಸೇನೆ ಆರೋಪಿಸಿದೆ.

ಹಿಜ್ಬುಲ್ಲಾ ಬಂಡುಕೋರರು ಇಸ್ರೇಲ್​ ಮೇಲೆ ದಾಳಿ ಹೆಚ್ಚಿಸಿದ್ದಾರೆ. ನಾವೂ ಪ್ರತಿದಾಳಿ ನಡೆಸುತ್ತಿದ್ದೇವೆ. ಇದರಿಂದ ಲೆಬನಾನ್​ ಕೂಡ ಯುದ್ಧದಲ್ಲಿ ಭಾಗಿಯಾಗುವಂತೆ ಹಿಜ್ಬುಲ್ಲಾ ಪ್ರೇರೇಪಿಸುವ ಮೂಲಕ ಅಪಾಯಕಾರಿ ಆಟವಾಡುತ್ತಿದೆ ಎಂದು ಇಸ್ರೇಲ್ ಭದ್ರತಾ ಪಡೆಗಳ ವಕ್ತಾರ ಜೊನಾಥನ್ ಕಾನ್ರಿಕಸ್ ಭಾನುವಾರ ಹೇಳಿದರು.

ಇಸ್ರೇಲ್​ ಮತ್ತು ಲೆಬನಾನ್​ ಗಡಿಯಾಚೆ ಗುಂಡಿನ ಚಕಮಕಿ ನಡೆಯುತ್ತಿದೆ. ಇದು ವ್ಯಾಪಕ ಸಂಘರ್ಷವನ್ನು ಹುಟ್ಟುಹಾಕುತ್ತಿದೆ. ಯುದ್ಧದಲ್ಲಿ ಭಾಗಿಯಾದಲ್ಲಿ ಲೆಬನಾನ್​ ಏನನ್ನೂ ಪಡೆಯುವುದಿಲ್ಲ. ಬದಲಾಗಿ ತುಂಬಾ ಕಳೆದುಕೊಳ್ಳಲಿದೆ. ಲೆಬನಾನಿನ ಗುಂಪು ಹಮಾಸ್​ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ಇದರಿಂದಾಗಿ ಹಿಂಸಾಚಾರ ಹೆಚ್ಚಾಗಿದೆ ಎಂದು ಇಸ್ರೇಲ್ ಸೇನಾಧಿಕಾರಿ ತಿಳಿಸಿದರು.

ಹಿಜ್ಬುಲ್ಲಾ ಯುದ್ಧಕ್ಕೆ ಪ್ರಚೋದನೆ ನೀಡಿ ದಾಳಿ ಮಾಡುತ್ತಿದ್ದರೂ, ನಾವು ಗಡಿಯ ಸಮೀಪವಿರುವ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿ ದಾಳಿ ಮಾಡುತ್ತಿದ್ದೇವೆ. ಹಿಜ್ಬುಲ್ಲಾ ಕ್ಷಿಪಣಿಗಳು, ರಾಕೆಟ್‌ಗಳು ಮತ್ತು ಯುಎವಿಗಳನ್ನು ಹಾರಿಸುತ್ತಿದೆ. ನಾವು ಟ್ಯಾಂಕ್‌ಗಳು, ಡ್ರೋನ್‌ಗಳು ಮಾತ್ರ ಬಳಸಿದ್ದೇವೆ. ಫಿರಂಗಿ ಮತ್ತು ಪದಾತಿದಳ ಸೇರಿದಂತೆ ಯಾವುದೇ ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಬಳಸಿಲ್ಲ ಎಂದು ಕಾನ್ರಿಕಸ್ ಹೇಳಿದರು.

ಗಾಜಾಕ್ಕಾಗಿ ಲೆಬನಾನ್,​ ಅಪಾಯಕ್ಕೆ ಆಹ್ವಾನ: ಹಮಾಸ್​ ಉಗ್ರರಿಗೆ ಬೆಂಬಲ ಘೋಷಿಸಿರುವ ಹಿಜ್ಬುಲ್ಲಾ ಬಂಡುಕೋರರು ಲೆಬನಾನಿನ ಸಾರ್ವಭೌಮತ್ವವನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆ. ಗಾಜಾಕ್ಕಾಗಿ ಲೆಬನಾನ್​ ಬಲಿಯಾಗಬೇಕು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಿದೆ. ಹಿಜ್ಬುಲ್ಲಾ ಆಕ್ರಮಣಕಾರಿಯಾಗಿ, ಯುದ್ಧದಲ್ಲಿ ಲೆಬನಾನ್ ಎಳೆದು ತರುತ್ತಿದೆ ಎಂದು ಅವರು ಟೀಕಿಸಿದರು.

ಹಿಜ್ಬುಲ್ಲಾ ಬಂಡುಕೋರರು ಇಸ್ರೇಲಿ ಸೇನಾ ನೆಲೆಗಳ ಮೇಲೆ ದಾಳಿ ನಡೆಸುತ್ತಿದೆ. ಅದು ದಾಳಿ ಮಾಡುತ್ತಿರುವ ಪ್ರದೇಶಗಳಲ್ಲಿ ಜನ ಸಮುದಾಯ ಇಲ್ಲ. ಇಸ್ರೇಲ್​ನೊಳಕ್ಕೆ ಯುದ್ಧ ಟ್ಯಾಂಕರ್​ಗಳನ್ನು ನುಗ್ಗಿಸಲು ವಿಫಲ ಪ್ರಯತ್ನ ಮಾಡುತ್ತಿದೆ. ಜೊತೆಗೆ ವಿಶ್ವಸಂಸ್ಥೆ ಕಟ್ಟಿಕೊಟ್ಟಿರುವ ಆಶ್ರಯ ತಾಣಗಳ ಮೇಲೂ ದಾಳಿ ಮಾಡುತ್ತಿದೆ. ಈ ಮೂಲಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ- 1701 ರ ನಿಯಮಗಳ್ನು ಉಲ್ಲಂಘನೆ ಮಾಡುತ್ತಿದೆ ಎಂದು ಆರೋಪಿಸಿದರು.

ಹಮಾಸ್ ಉಗ್ರ ನೆಲೆಗಳ ಮೇಲೆ ದಾಳಿ: ಗಾಜಾ ಮೇಲೆ ವೈಮಾನಿಕ ದಾಳಿ ಮುಂದುವರಿಸಿರುವ ಇಸ್ರೇಲ್​ ಪಡೆಗಳು, ಹಮಾಸ್​ ಉಗ್ರರ ನೆಲೆಗಳನ್ನು ಧ್ವಂಸ ಮಾಡುತ್ತಿದೆ. ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯದ ಪ್ರಕಾರ 4,300 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಸಾವಿಗೀಡಾಗಿದ್ದಾರೆ. ಉತ್ತರ ಗಾಜಾ ಗಡಿಯುದ್ದಕ್ಕೂ ಗುಂಡಿನ ಚಕಮಕಿ ನಡೆಯುತ್ತಿದೆ.

ಇದನ್ನೂ ಓದಿ: ಜೆನಿನ್ ಅಲ್ ಅನ್ಸರ್ ಮಸೀದಿ ಮೇಲೆ ಇಸ್ರೇಲ್ ವೈಮಾನಿಕ ದಾಳಿ: ಅಪಾರ ಪ್ರಮಾಣದ ಮದ್ದುಗುಂಡುಗಳು ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.