ನ್ಯೂಯಾರ್ಕ್: ನ್ಯೂಯಾರ್ಕ್‌ನಲ್ಲಿ ಭಾರತ ಮೂಲದ ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ನಡೆದ ದಾಳಿಯನ್ನು ಟೀಕಿಸಿದ್ದಕ್ಕಾಗಿ ಹ್ಯಾರಿ ಪಾಟರ್ ಸರಣಿಯ ಪ್ರಸಿದ್ಧ ಲೇಖಕಿ ಜೆ ಕೆ ರೌಲಿಂಗ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಟ್ವೀಟ್ನಲ್ಲಿ ಬಂದ ಬೆದರಿಕೆ ಸಂದೇಶದ ಸ್ಕ್ರೀನ್ಶಾಟ್ ಅನ್ನು ಅವರು ಹಂಚಿಕೊಂಡಿದ್ದಾರೆ.
-
.@TwitterSupport These are your guidelines, right?
— J.K. Rowling (@jk_rowling) August 13, 2022 " class="align-text-top noRightClick twitterSection" data="
"Violence: You may not threaten violence against an individual or a group of people. We also prohibit the glorification of violence...
"Terrorism/violent extremism: You may not threaten or promote terrorism..." pic.twitter.com/BzM6WopzHa
">.@TwitterSupport These are your guidelines, right?
— J.K. Rowling (@jk_rowling) August 13, 2022
"Violence: You may not threaten violence against an individual or a group of people. We also prohibit the glorification of violence...
"Terrorism/violent extremism: You may not threaten or promote terrorism..." pic.twitter.com/BzM6WopzHa.@TwitterSupport These are your guidelines, right?
— J.K. Rowling (@jk_rowling) August 13, 2022
"Violence: You may not threaten violence against an individual or a group of people. We also prohibit the glorification of violence...
"Terrorism/violent extremism: You may not threaten or promote terrorism..." pic.twitter.com/BzM6WopzHa
ರೌಲಿಂಗ್ ಅವರು, ಲೇಖಕ ರಶ್ದಿ ಅವರನ್ನು ಚಾಕುವಿನಿಂದ ಇರಿದ ಆರೋಪಿಯ ಚಿತ್ರವನ್ನು ಟ್ವೀಟ್ ಮಾಡಿ ಭಯೋತ್ಪಾದನೆ, ರಕ್ತಪಾತವನ್ನು ಬೆಳೆಸಲಾಗದು. ರಶ್ದಿ ಮೇಲಾದ ದಾಳಿ ನೋವಿನ ಸಂಗತಿ ಎಂದು ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಮೀರ್ ಅಸಿಫ್ ಅಜಿಜ್ ಹೆಸರಿನ ಟ್ವಿಟರ್ ಬಳಕೆದಾರ, ಚಿಂತಿಸಬೇಡಿ ಮುಂದಿನ ಸರದಿ ನಿಮ್ಮದೇ ಎಂದಿದ್ದಾನೆ.
ಈ ಬೆದರಿಕೆ ಸಂದೇಶದ ಸ್ಕ್ರೀನ್ಶಾಟ್ ಟ್ವೀಟ್ ಮಾಡಿರುವ ರೌಲಿಂಗ್, ಭಯೋತ್ಪಾದನೆ, ಉಗ್ರವಾದ ಹಿಂಸೆಯ ವೈಭವೀಕರಣವೇ ನಿಮ್ಮ ಮಾರ್ಗಸೂಚಿಗಳೇ ಎಂದು ಪ್ರಶ್ನಿಸಿ, ಇವನ್ನು ನಾವು ಬಯಸುದಿಲ್ಲ. ಒಬ್ಬ ವ್ಯಕ್ತಿ, ಗುಂಪನ್ನು ಇದರಿಂದ ಬೆದರಿಸಬಾರದು. ಹಿಂಸೆಯನ್ನು ವೈಭವೀಕರಣ ಮಾಡಬಾರದು ಎಂದು ಹೇಳಿದ್ದಾರೆ.
ಶುಕ್ರವಾರದಂದು ಪಶ್ಚಿಮ ನ್ಯೂಯಾರ್ಕ್‌ನಲ್ಲಿ ನಡೆದ ಸಾಹಿತ್ಯಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸಲ್ಮಾನ್ ರಶ್ದಿ ಅವರ ಮೇಲೆ ನ್ಯೂಜೆರ್ಸಿಯ ಹದಿ ಮಾತರ್ ಎಂಬಾತ ಚಾಕುವಿನಿಂದ 14 ಬಾರಿ ಇರಿದಿದ್ದಾನೆ.
ಇದನ್ನೂ ಓದಿ: ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಸ್ಥಿತಿ ಗಂಭೀರ.. ಕಣ್ಣು ಯಕೃತ್ಗೆ ತೀವ್ರ ಹಾನಿ