ಜೆರುಸಲೇಂ: ಇಸ್ರೇಲ್ನಲ್ಲಿ ಹಮಾಸ್ ಉಗ್ರರ ಅಟ್ಟಹಾಸದ ವರದಿಗಳು ಬೆಚ್ಚಿಬೀಳಿಸುತ್ತಿವೆ. ಮಹಿಳೆಯರು, ಮಕ್ಕಳೆನ್ನದೇ ಕ್ರೌರ್ಯ ಮೆರೆಯುತ್ತಿದ್ದಾರೆ. ಯುವತಿಯರನ್ನು ಅಪಹರಿಸುತ್ತಿದ್ದರೆ, ಮಕ್ಕಳನ್ನು ಕೊಂದು ದೇವರಲ್ಲಿಗೆ ಹೋಗಿದ್ದಾರೆ ಎಂದು ಘೋಷಣೆ ಕೂಗುತ್ತಿರುವ ಅಮಾನವೀಯ ವಿಡಿಯೋಗಳು ಹೊರಬಿದ್ದಿವೆ.
-
Aftermath of the Supernova music festival in Israel, where Hamas gunmen killed 260 people. #IsraelUnderAttack #Palestine #Hamas #hamasattack #RocketAttack #Gaza #GazaUnderAttack #Israel #savas #Iran #Palestinian #Hezbollah #Lebanon #IsraelPalestineWar #Israel_under_attack pic.twitter.com/wlINq3gDiK
— Tom Kopca (@t0mk0pca) October 8, 2023 " class="align-text-top noRightClick twitterSection" data="
">Aftermath of the Supernova music festival in Israel, where Hamas gunmen killed 260 people. #IsraelUnderAttack #Palestine #Hamas #hamasattack #RocketAttack #Gaza #GazaUnderAttack #Israel #savas #Iran #Palestinian #Hezbollah #Lebanon #IsraelPalestineWar #Israel_under_attack pic.twitter.com/wlINq3gDiK
— Tom Kopca (@t0mk0pca) October 8, 2023Aftermath of the Supernova music festival in Israel, where Hamas gunmen killed 260 people. #IsraelUnderAttack #Palestine #Hamas #hamasattack #RocketAttack #Gaza #GazaUnderAttack #Israel #savas #Iran #Palestinian #Hezbollah #Lebanon #IsraelPalestineWar #Israel_under_attack pic.twitter.com/wlINq3gDiK
— Tom Kopca (@t0mk0pca) October 8, 2023
ಗಾಜಾ-ಇಸ್ರೇಲ್ ಗಡಿ ಸಮೀಪದ ಗ್ರಾಮವೊಂದರಲ್ಲಿ ಹಮ್ಮಿಕೊಂಡಿದ್ದ ಸಂಗೀತ ಕಾರ್ಯಕ್ರಮದ (ಫೆಸ್ಟಿವಲ್ ಆಫ್ ಪೀಸ್) ಮೇಲೆ ದಾಳಿ ನಡೆಸಿದ ಉಗ್ರರು 260 ಜನರನ್ನು ಹತ್ಯೆ ಮಾಡಿದ್ದಾರೆ. ಏಕಾಏಕಿ ದಾಳಿಗೊಳಗಾದ ಜನರು ಎದ್ನೋ ಬಿದ್ನೋ ಎಂಬಂತೆ ಓಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ತಪ್ಪಿಸಿಕೊಂಡ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ಹೆಣಗಳು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಕಾಣಬಹುದು.
ಸಂಗೀತ ಕಾರ್ಯಕ್ರಮದಲ್ಲಿ ರಕ್ತಪಾತ: ಹೊರಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಕಾರ್ಯಕ್ರಮದಲ್ಲಿ ಇಸ್ರೇಲಿಗರು ಸೇರಿದಂತೆ ಪ್ರವಾಸಿಗರೂ ಭಾಗವಹಿಸಿದ್ದರು. ರಾತ್ರಿಯಿಡೀ ನೃತ್ಯ ಕೂಟ ನಡೆಯುತ್ತಿತ್ತು. ಸಾವಿರಾರು ಯುವಕ, ಯುತಿಯರು ರಜಾದಿನವನ್ನು ಆಚರಿಸುತ್ತಿದ್ದರು. ಹಮಾಸ್ ಉಗ್ರರು ದಿಢೀರ್ ಬಯಲು ಪ್ರದೇಶಕ್ಕೆ ದಾಂಗುಡಿಯಿಟ್ಟು ಅಲ್ಲಿ ನಡೆಯುತ್ತಿದ್ದ ಉತ್ಸವದ ಮೇಲೆ ದಾಳಿ ನಡೆಸಿದ್ದು, ರಕ್ತದ ಹೊಳೆ ಹರಿದಿದೆ.
ಗುಂಡಿನ ದಾಳಿಯಲ್ಲಿ 260 ಕ್ಕೂ ಅಧಿಕ ಜನರನ್ನು ಕೊಲ್ಲಲಾಗಿದೆ. ರಸ್ತೆ ಮಧ್ಯೆ ಎಲ್ಲಿ ಬೇಕಾದಲ್ಲಿ ಹೆಣಗಳು ಬಿದ್ದಿವೆ. ವಾಹನಗಳು ಚೆಲ್ಲಾಪಿಲ್ಲಿಯಾಗಿವೆ. ಗುಂಡಿನ ದಾಳಿಗೆ ಭಯಭೀತರಾದ ಜನರು ತಪ್ಪಿಸಿಕೊಳ್ಳುವ ವೇಳೆಯೂ ಹತರಾಗಿದ್ದಾರೆ.
ಘಟನಾ ಸ್ಥಳದಲ್ಲಿ ಸದ್ಯಕ್ಕೆ ನೂರಾರು ಶವಗಳನ್ನು ಇಸ್ರೇಲಿ ರಕ್ಷಣಾ ಪಡೆಗಳು ಹೊರತೆಗೆದಿದ್ದಾರೆ. ದುರಂತ ಪ್ರದೇಶವನ್ನು ತೆರವುಗೊಳಿಸಲಾಗುತ್ತಿದೆ. ಇನ್ನಷ್ಟು ಶವಗಳು ಪತ್ತೆಯಾಗುವ ಸಾಧ್ಯತೆ ಇದೆ. ದಾಳಿ ವೇಳೆ ನಾಪತ್ತೆಯಾದವರನ್ನೂ ಪತ್ತೆ ಹಚ್ಚು ಕಾರ್ಯವನ್ನು ಭದ್ರತಾ ಪಡೆಗಳು ಮಾಡುತ್ತಿವೆ ಎಂದು ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.
ಜೆಸಿಬಿ ಬಳಸಿ ಗಡಿ ಬೇಲಿ ನಾಶ: ಹಮಾಸ್ ಉಗ್ರರು ಇಸ್ರೇಲ್ ಗಡಿಯನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಿದ್ದಾರೆ. ವಿಮಾನಗಳ ಮೂಲಕ ಪ್ಯಾರಾಚೂಟ್ ಬಳಸಿ ಹಾರಿ ಬಂದು ಗುಂಡಿನ ಮಳೆಗರೆದಿದ್ದಾರೆ. ಇದರ ವಿಡಿಯೋಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಕಾಣಬಹುದು.
ಯುವತಿಯರ ಅಪಹರಣ: ಸಂಗೀತೋತ್ಸವದ ಮೇಲೆ ದಾಳಿ ಮಾಡಿ, ನೂರಾರು ಜನರನ್ನು ಕೊಂದ ಬಳಿಕ, ಕೈಗೆ ಸಿಕ್ಕ ಯುವತಿಯರನ್ನು ಅಪಹರಿಸಲಾಗಿದೆ. ಅವರ ಗೆಳೆಯರ ಮೇಲೆ ಹಲ್ಲೆ ಮಾಡಿ ಯುವತಿಯನ್ನು ಕಾರು, ಬೈಕ್ಗಳ ಮೇಲೆ ಹೊತ್ತೊಯ್ಯಲಾಗಿದೆ. ಕೈಗಳಿಗೆ ಹಗ್ಗ ಕಟ್ಟಿ ಮಿಸುಕಾಡದಂತೆ ಹಿಡಿದುಕೊಂಡು ಯುದ್ಧಕೈದಿಗಳಂತೆ ಒತ್ತೆಯಾಗಿಟ್ಟುಕೊಂಡಿದ್ದಾರೆ.
"ಸಂಗೀತ ಉತ್ಸವ ನಡೆಯುತ್ತಿದ್ದಾಗ 20 ಜನರ ಗುಂಪೊಂದು ಅಲ್ಲಿಗೆ ಬಂದು ಗುಂಡಿನ ದಾಳಿ ನಡೆಸಿತು. ನಾವೆಲ್ಲರೂ ಅಲ್ಲಿಂದ ಓಡಿ ಹೋದೆವು. ಸುಮಾರು 6 ಗಂಟೆಗಳ ಕಾಲ ಪೊದೆಗಳಲ್ಲಿ ಅಡಗಿಕೊಂಡಿದ್ದೆವು. ಗುಂಡಿನ ಮೊರೆತ ಕೇಳಿ ಬರುತ್ತಿತ್ತು. ಪೊದೆಗಳಲ್ಲಿ ನಾವು ಮೌನವಾಗಿ ಅಡಗಿದ್ದೆವು. ಜನರು ಓಡಿ ಹೋಗುತ್ತಿದ್ದಾಗಲೂ ಅವರ ಮೇಲೆ ದಾಳಿ ಮಾಡಿದ್ದನ್ನು ನೋಡಿದೆವು. ಮಹಿಳೆಯನ್ನು ಉಗ್ರನೊಬ್ಬ ಚಾಕುವಿನಿಂದ ಇರಿದಿದ್ದನ್ನು ನಾನು ನೋಡಿದೆ" ಎಂದು ದಾಳಿಯಲ್ಲಿ ತಪ್ಪಿಸಿಕೊಂಡ ವ್ಯಕ್ತಿಯೊಬ್ಬರು ಭಯಾನಕ ದೃಶ್ಯವನ್ನು ವಿವರಿಸಿದ್ದಾರೆ.
ಇದನ್ನೂ ಓದಿ : ಇಸ್ರೇಲ್‌ಗೆ ಬೆಂಬಲ ನೀಡಲು ವಿಮಾನವಾಹಕ ನೌಕೆ ಕಳುಹಿಸಲು ನಿರ್ಧರಿಸಿದ ಅಮೆರಿಕ..