ETV Bharat / international

ಗಾಜಾದ ಆಸ್ಪತ್ರೆಗಳಲ್ಲಿ ಆಶ್ರಯ ಪಡೆದ ಹಮಾಸ್ ಉಗ್ರರು: ಅಮೆರಿಕ ಗುಪ್ತಚರ ಮಾಹಿತಿ - ಇಸ್ರೇಲಿ ಪಡೆಗಳಿಂದ ದಾಳಿ

ಹಮಾಸ್ ಮತ್ತು ಇತರೆ ಉಗ್ರಗಾಮಿಗಳು ಗಾಜಾ ಆಸ್ಪತ್ರೆಗಳಲ್ಲಿ ಆಶ್ರಯ ಪಡೆದಿರುವ ಕುರಿತು ಗುಪ್ತಚರ ಮಾಹಿತಿಯಿದೆ ಎಂದು ವೈಟ್ ಹೌಸ್ ಹೇಳಿದೆ.

hamas
ಗಾಜಾ ಪಟ್ಟಿ
author img

By PTI

Published : Nov 15, 2023, 1:27 PM IST

ಖಾನ್ ಯೂನಿಸ್(ಪ್ಯಾಲೆಸ್ಟೈನ್): ಹಮಾಸ್ ಮತ್ತು ಪ್ಯಾಲೆಸ್ಟೈನ್ ಉಗ್ರಗಾಮಿ ಗುಂಪು ಗಾಜಾ ಪಟ್ಟಿಯಲ್ಲಿರುವ ಶಿಫಾ ಸೇರಿದಂತೆ ಕೆಲವು ಆಸ್ಪತ್ರೆಗಳನ್ನು ಮತ್ತು ಅವುಗಳ ಕೆಳಗಿರುವ ಸುರಂಗಗಳಲ್ಲಿ ಆಶ್ರಯ ಪಡೆದಿರುವ ಬಗ್ಗೆ ಗುಪ್ತಚರ ಮಾಹಿತಿಯಿದೆ ಎಂದು ವೈಟ್ ಹೌಸ್ ಮಂಗಳವಾರ ಹೇಳಿದೆ.

ಏಷ್ಯಾ-ಪೆಸಿಫಿಕ್ ನಾಯಕರೊಂದಿಗಿನ ಶೃಂಗಸಭೆಯಲ್ಲಿ ಭಾಗಿಯಾಗಲು ಸ್ಯಾನ್ ಫ್ರಾನ್ಸಿಸ್ಕೋಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ, "ಆಸ್ಪತ್ರೆಗಳ ವಿರುದ್ಧದ ಮುಷ್ಕರಗಳನ್ನು ಯುಎಸ್ ಬೆಂಬಲಿಸುವುದಿಲ್ಲ. ಆಸ್ಪತ್ರೆಗಳು ಮತ್ತು ರೋಗಿಗಳಿಗೆ ರಕ್ಷಣೆ ನೀಡಬೇಕು. ಅಮಾಯಕ ಜನರು, ಅಸಹಾಯಕರು, ಅನಾರೋಗ್ಯ ಪೀಡಿತರ ಆರೈಕೆ ಮಾಡುವ ಆಸ್ಪತ್ರೆಗಳಲ್ಲಿ ಗುಂಡಿನ ಚಕಮಕಿ ನೋಡಲು ಯುಎಸ್ ಬಯಸುವುದಿಲ್ಲ" ಎಂದು ಹೇಳಿದರು.

ಇನ್ನೊಂದೆಡೆ, ಇಸ್ರೇಲಿ ಸೈನಿಕರು ಇಂದು ಮುಂಜಾನೆ ಶಿಫಾ ಆಸ್ಪತ್ರೆಯನ್ನು ವಶಪಡಿಸಿಕೊಂಡಿರುವುದಾಗಿ ಇಸ್ರೇಲಿ ರಕ್ಷಣಾ ಪಡೆಗಳು ತಿಳಿಸಿವೆ. ಗುಪ್ತಚರ ಮಾಹಿತಿಯನ್ನು ಆಧರಿಸಿ IDF ಪಡೆಗಳು ಶಿಫಾ ಆಸ್ಪತ್ರೆಯ ನಿರ್ದಿಷ್ಟ ಪ್ರದೇಶದಲ್ಲಿ ಹಮಾಸ್ ವಿರುದ್ಧ ನಿಖರವಾದ ಮತ್ತು ಉದ್ದೇಶಿತ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಈ ಐಡಿಎಫ್​ ಪಡೆಯು ವೈದ್ಯಕೀಯ ತಂಡಗಳು ಮತ್ತು ಅರೇಬಿಕ್ ಮಾತನಾಡುವವರನ್ನು ಒಳಗೊಂಡಿವೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.

ಇದನ್ನೂ ಓದಿ: ವಿಶ್ವಸಂಸ್ಥೆ : ಪ್ಯಾಲೆಸ್ಟೈನ್​ನಲ್ಲಿ ಇಸ್ರೇಲಿ ವಸಾಹತುಗಳ ವಿರುದ್ಧದ ಕರಡು ನಿರ್ಣಯದ ಪರ ಮತ ಚಲಾಯಿಸಿದ ಭಾರತ

ಮಂಗಳವಾರ ರಾತ್ರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ IDF ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಅವರು, ಇತ್ತೀಚಿನ ವಾರಗಳಲ್ಲಿ ನಾವು ಹಮಾಸ್ ಆಸ್ಪತ್ರೆಗಳನ್ನು ಮಿಲಿಟರಿ ಉದ್ದೇಶಗಳಿಗಾಗಿ ಬಳಸುವುದರಿಂದ ಅದು ಕಾನೂನಿನಡಿ ತನ್ನ ವಿಶೇಷ ರಕ್ಷಣೆಯನ್ನು ಕಳೆದುಕೊಳ್ಳುತ್ತಿದೆ. ಹಮಾಸ್ ಚಟುವಟಿಕೆಗಳಿಂದಾಗಿ ಗಾಜಾದ ವೈದ್ಯಕೀಯ ಸೌಲಭ್ಯಗಳು ತಮ್ಮ ಸ್ಥಾನಮಾನವನ್ನು ಕಳೆದುಕೊಳ್ಳುತ್ತಿವೆ. ಆಸ್ಪತ್ರೆಗಳಲ್ಲಿನ ಹಮಾಸ್‌ನ ಭಯೋತ್ಪಾದಕ ಮೂಲಸೌಕರ್ಯಗಳ ವಿರುದ್ಧ ನಾವು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಆಸ್ಪತ್ರೆಗಳಲ್ಲಿ ಅಡಗಿರುವ ಹಮಾಸ್ ಉಗ್ರರಿಗೆ ಶರಣಾಗುವಂತೆ ನಾವು ಕರೆ ನೀಡುತ್ತೇವೆ. ಆದ್ದರಿಂದ, ಆಸ್ಪತ್ರೆಗಳಲ್ಲಿ ಇರುವ ಜನರು ಅಪಾಯಕ್ಕೆ ಒಳಗಾಗುವುದಿಲ್ಲ ಎಂದರು.

ಇದನ್ನೂ ಓದಿ: ಇಸ್ರೇಲ್ ಮೇಲೆ ಹಿಜ್ಬುಲ್ಲಾ ದಾಳಿ : ಏಳು ಸೈನಿಕರು ಸೇರಿದಂತೆ 17 ಜನರಿಗೆ ಗಾಯ

'ಹಮಾಸ್ ಮತ್ತು ಪ್ಯಾಲೆಸ್ತೈನ್ ಇಸ್ಲಾಮಿಕ್ ಜಿಹಾದಿಗಳು ತಮ್ಮ ಮಿಲಿಟರಿ ಕಾರ್ಯಾಚರಣೆಗಳನ್ನು ಮರೆಮಾಚಲು ಮತ್ತು ಬೆಂಬಲಿಸಲು ಗಾಜಾ ಪಟ್ಟಿಯಲ್ಲಿರುವ ಅಲ್-ಶಿಫಾ ಸೇರಿದಂತೆ ಕೆಲವು ಆಸ್ಪತ್ರೆಗಳು ಮತ್ತು ಅವುಗಳ ಕೆಳಗಿರುವ ಸುರಂಗಗಳನ್ನು ಬಳಸುತ್ತಿದ್ದಾರೆ ಎಂದು ನಮಗೆ ಮಾಹಿತಿ ಇದೆ. ಅವರು ಅಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ. ಯುದ್ಧದ ಸಮಯದಲ್ಲಿ ಇಸ್ರೇಲ್ ಆಸ್ಪತ್ರೆಯ ಮೇಲೆ ದಾಳಿ ಮಾಡುವುದಿಲ್ಲ ಎಂದು ನಂಬಿದ ಹಮಾಸ್ ನಾಯಕರು ಅಲ್ಲಿ ಅಡಗಿಕೊಳ್ಳುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ಶಿಫಾ ಸುತ್ತ ಇಸ್ರೇಲ್​ ಭೀಕರ ಬಾಂಬ್​ ದಾಳಿ : ಆಸ್ಪತ್ರೆಯೊಳಗೆ ಸಿಕ್ಕಿಬಿದ್ದ 20 ಸಾವಿರ ಜನರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.