ETV Bharat / international

ಮೆಕ್ಸಿಕೋದಲ್ಲಿ ಕಾರ್​ ರೇಸಿಂಗ್​ ಮೇಲೆ ಗುಂಡಿನ ದಾಳಿ​: 10 ರೇಸರ್​ಗಳ ಸಾವು, 9 ಮಂದಿಗೆ ಗಾಯ - racers death in Mexico Shootout

ಥ್ರಿಲ್ಲರ್​ ಕಾರ್​ ರೇಸಿಂಗ್​ ವೇಳೆ ಆಗಂತುಕರು ಗುಂಡಿನ ದಾಳಿ ನಡೆಸಿದ್ದು, 10 ಮಂದಿ ರೇಸರ್​ಗಳು ಸಾವನ್ನಪ್ಪಿದ್ದಾರೆ. ಇನ್ನೂ 9 ಮಂದಿ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಕಾರ್​ ರೇಸಿಂಗ್​ ಮೇಲೆ ಗುಂಡಿನ ದಾಳಿ
ಕಾರ್​ ರೇಸಿಂಗ್​ ಮೇಲೆ ಗುಂಡಿನ ದಾಳಿ
author img

By

Published : May 21, 2023, 12:48 PM IST

ಮೆಕ್ಸಿಕೋ: ಇಲ್ಲಿನ ಬಾಜಾ ಕ್ಯಾಲಿಫೋರ್ನಿಯಾದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಾರ್​ ರೇಸ್​ನಲ್ಲಿ ಭೀಕರ ಶೂಟೌಟ್​ ಘಟನೆ ವರದಿಯಾಗಿದೆ. ಆಗಂತುಕರ ಗುಂಡಿನ ದಾಳಿಗೆ 10 ಮಂದಿ ಕಾರ್​ ರೇಸರ್​ಗಳು ಪ್ರಾಣ ಕಳೆದುಕೊಂಡಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೇ 20 ರಂದು ಉತ್ತರ ಮೆಕ್ಸಿಕೋದ ಬಾಜಾ ಕ್ಯಾಲಿಫೋರ್ನಿಯಾದಲ್ಲಿ ಕಾರ್‌ ರೇಸಿಂಗ್​ ನಡೆಯುತ್ತಿತ್ತು. ಈ ವೇಳೆ ವ್ಯಾನ್​ವೊಂದರಲ್ಲಿ ಬಂದ ಬಂದೂಕುಧಾರಿಗಳು ಕಾರ್‌ ರೇಸ್​ನಲ್ಲಿ ಭಾಗವಹಿಸಿದವರ ಮೇಲೆ ಏಕಾಏಕಿ ಗುಂಡಿನ ಸುರಿಮಳೆಗೈದಿದ್ದಾರೆ. ಇದರಿಂದ ಕನಿಷ್ಠ 10 ಮಂದಿ ರೇಸರ್​ಗಳು ಪ್ರಾಣ ಕಳೆದುಕೊಂಡಿದ್ದಾರೆ. 9 ಮಂದಿಗೆ ತೀವ್ರ ಗಾಯಗಳಾಗಿವೆ ಎಂದು ಬಾಜಾ ಕ್ಯಾಲಿಫೋರ್ನಿಯಾ ಸ್ಟೇಟ್ ಅಟಾರ್ನಿ ಜನರಲ್ ಕಚೇರಿ ತಿಳಿಸಿದೆ.

ಥ್ರಿಲ್ಲಿಂಗ್​ ನೀಡಬೇಕಿದ್ದ ಕಾರ್​ ರೇಸಿಂಗ್​ನಲ್ಲಿ ಗುಂಡಿನ ಮೊರೆತದಿಂದ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಯಾವ ಕಾರಣಕ್ಕಾಗಿ ಶೂಟೌಟ್​ ನಡೆಸಲಾಗಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಸುದ್ದಿ ತಿಳಿದ ರಾಜ್ಯ ಪೊಲೀಸ್, ಮೆರೀನ್, ಅಗ್ನಿಶಾಮಕ ಇಲಾಖೆ ಮತ್ತು ಮೆಕ್ಸಿಕನ್ ರೆಡ್ ಕ್ರಾಸ್ ಮತ್ತು ಇತರ ಏಜೆನ್ಸಿಗಳು ಘಟನಾ ಸ್ಥಳಕ್ಕೆ ಆಗಮಿಸಿ, ಬಿಗಿ ಬಂದೋಬಸ್ತ್​ ನೀಡಿದ್ದಾರೆ.

ರಾಜ್ಯ ಅಟಾರ್ನಿ ಜನರಲ್ ರಿಕಾರ್ಡೊ ಇವಾನ್ ಕಾರ್ಪಿಯೊ ಸ್ಯಾಂಚೆಝ್ ಪ್ರಕಾರ, ಆಗಂತುಕರು ಕಾರ್​ ರೇಸ್​ ಅಂಕಣ ಪ್ರವೇಶಿಸಿ ದಾಳಿ ನಡೆಸಿದ್ದಾರೆ. ಇದರ ಹಿಂದಿನ ಕಾರಣದ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸಲಾಗಿದೆ. ಗುಂಡಿನ ದಾಳಿಯಲ್ಲಿ ಕಾರ್​ ರೇಸರ್​ಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.

ಘಟನೆಯಲ್ಲಿ ಸಾವನ್ನಪ್ಪಿದವರ ಗುರುತು ಮತ್ತು ರಾಷ್ಟ್ರೀಯತೆಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಗಾಯಗೊಂಡ ರೇಸರ್​ಗಳನ್ನು ಉತ್ತರ ಬಾಜಾ ಕ್ಯಾಲಿಫೋರ್ನಿಯಾದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಡ್ರಗ್ಸ್​ ಗ್ಯಾಂಗ್​ನಿಂದ ದಾಳಿ: ಮೆಕ್ಸಿಕೋದ ಗ್ವಾನಾಜುವಾಟೊ ನಗರದ ಬಾರ್​ವೊಂದರಲ್ಲಿ ದರೋಡೆಕೋರರು ಗುಂಡಿನ ದಾಳಿ ನಡೆಸಿದ ಘಟನೆ ನಡೆದಿತ್ತು. ಮುಸುಕುಧಾರಿಗಳಾಗಿ ನುಗ್ಗಿದ ಬಂದೂಕುಧಾರಿಗಳು ಮನಬಂದಂತೆ ಗುಂಡು ಹಾರಿಸಿ ವೇಟರ್‌ಗಳು ಸೇರಿದಂತೆ ಒಟ್ಟು 9 ಜನರನ್ನು ಬಲಿ ಪಡೆದಿದ್ದರು. ಸಾವನ್ನಪ್ಪಿದವರಲ್ಲಿ ನಾಲ್ವರು ಮಹಿಳೆಯರು ಕೂಡ ಇದ್ದರು.

ಡ್ರಗ್ ಗ್ಯಾಂಗ್‌ಗಳ ನಡುವಿನ ಘರ್ಷಣೆ ಕಾರಣಕ್ಕಾಗಿ ಈ ದಾಳಿ ನಡೆದಿತ್ತು. ಘಟನೆಯ ಬಳಿಕ ಬಾರ್‌ನಲ್ಲಿ ರಕ್ತದಲ್ಲಿ ಬರೆದ ಕೆಲವು ಪೋಸ್ಟರ್‌ಗಳು ಪತ್ತೆಯಾಗಿದ್ದವು. ಈ ದಾಳಿಯ ಹೊಣೆಯನ್ನು ಸಾಂಟಾ ರೋಸಾ ಡಿ ಲಿಮಾ ಗ್ಯಾಂಗ್ ಹೊತ್ತುಕೊಂಡಿತ್ತು.

ಜೂಜು ತಡೆಗಾಗಿ ಶೂಟೌಟ್​: ಇದಲ್ಲದೇ, ಕೇಂದ್ರ ಮೆಕ್ಸಿಕೋದಲ್ಲಿ ಬೆಟ್ಟಿಂಗ್​ ಅಡ್ಡೆಯ ಮೇಲೆ ನಡೆದ ದಾಳಿಯ ವೇಳೆ ಶೂಟೌಟ್​ನಲ್ಲಿ 19 ಮಂದಿ ಸಾವಿಗೀಡಾದ ಘಟನೆ ನಡೆದಿತ್ತು. ಈ ಪೈಕಿ ಮೂವರು ಮಹಿಳೆಯರೂ ಹತರಾಗಿ ಹಲವರು ಗಾಯಗೊಂಡಿದ್ದರು ಎಂದು ಅಲ್ಲಿನ ಸ್ಟೇಟ್ ಅಟಾರ್ನಿ ಜನರಲ್ ಕಚೇರಿ ತಿಳಿಸಿತ್ತು.

ಮೈಕ್ರೋಕಾನ್​ ರಾಜ್ಯದ ಲಾಸ್​ ಟಿನಾಜಾಸ್​ ಪಟ್ಟಣದಲ್ಲಿ ಹಬ್ಬದ ಸಂದರ್ಭ ಅಕ್ರಮ ಕೋಳಿ ಅಂಕಣದಂತಹ ಬೆಟ್ಟಿಂಗ್​ ದಂಧೆ ನಡೆಸಲಾಗುತ್ತಿತ್ತು. ಇದಲ್ಲದೇ ಜೂಜಾಡುತ್ತಿದ್ದ ಜನರನ್ನು ಬಂಧಿಸುವ ವೇಳೆ ಗುಂಡಿನ ದಾಳಿ ನಡೆಸಲಾಗಿತ್ತು. ಇದರಲ್ಲಿ 19 ಮಂದಿ ಪ್ರಾಣ ಕಳೆದುಕೊಂಡರು ಎಂದು ಮೈಕೋಕಾನ್​ನ ಸಾರ್ವಜನಿಕ ಭದ್ರತಾ ಕಾರ್ಯದರ್ಶಿ ತಿಳಿಸಿದ್ದರು.

ಇದನ್ನೂ ಓದಿ: ಉಕ್ರೇನ್‌ನ ಬಖ್ಮುತ್ ನಗರ ವ್ಯಾಗ್ನರ್ ಖಾಸಗಿ ಸೇನೆಯ ವಶಕ್ಕೆ: ರಷ್ಯಾಧ್ಯಕ್ಷ ಪುಟಿನ್ ಅಭಿನಂದನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.