ETV Bharat / international

ಮಾಂಟೆನೆಗ್ರೋದಲ್ಲಿ ಶೂಟೌಟ್​: ಬೇಟೆ ಬಂದೂಕಿನಿಂದ 10 ಮಂದಿ ಗುಂಡಿಕ್ಕಿ ಕೊಂದ ಹಂತಕ

Montenegro shootout ವ್ಯಕ್ತಿಯೊಬ್ಬನಿಂದ ಹತನಾಗುವ ಮೊದಲು ದಾಳಿಕೋರನೊಬ್ಬ ಇಬ್ಬರು ಮಕ್ಕಳು ಸೇರಿದಂತೆ 10 ಮಂದಿಯನ್ನು ಗುಂಡಿಕ್ಕಿ ಕೊಂದ ಭೀಕರ ಘಟನೆ ಮಾಂಟೆನೆಗ್ರೋದ ಸೆಟಿಂಜೆಯಲ್ಲಿ ನಡೆದಿದೆ.

gunman-kills-10-peoples-in-montenegro
ಮಾಂಟೆನೆಗ್ರೋದಲ್ಲಿ ಶೂಟೌಟ್​
author img

By

Published : Aug 13, 2022, 7:28 AM IST

ಸೆಟಿಂಜೆ (ಮಾಂಟೆನೆಗ್ರೊ): ಪಶ್ಚಿಮ ಮಾಂಟೆನೆಗ್ರೊ ನಗರದಲ್ಲಿ ವ್ಯಕ್ತಿಯೊಬ್ಬ ಪ್ರಾಣಿಗಳ ಬೇಟೆಯಾಡುವ ಬಂದೂಕಿನಿಂದ ಇಬ್ಬರು ಮಕ್ಕಳು ಸೇರಿದಂತೆ 10 ಮಂದಿ ಅಮಾಯಕರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ ಆಘಾತಕಾರಿ (Montenegro shootout) ಘಟನೆ ನಡೆದಿದೆ. ದಾಳಿಯನ್ನು ತಡೆಯಲು ದಾರಿಹೋಕನೊಬ್ಬ ಹಂತಕನ ಮೇಲೆ ಫೈರಿಂಗ್​ ಮಾಡಿ ಕೊಂದಿದ್ದಾನೆ. ಜೊತೆಗೆ ಶೂಟೌಟ್​ನಲ್ಲಿ ಪೊಲೀಸ್​ ಸೇರಿ ಮೂವರು ಗಾಯಗೊಂಡಿದ್ದಾರೆ.

ಮಾಂಟೆನೆಗ್ರೋದಲ್ಲಿ ಶೂಟೌಟ್​: ದಾಳಿಕೋರ 34 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ. ಶೂಟೌಟ್​ ಮಾಡಲು ಕಾರಣ ಏನೆಂಬುದು ತಿಳಿದುಬಂದಿಲ್ಲ. ಸೆಟಿಂಜೆಯ ಮೆಡೋವಿನಾ ಪ್ರದೇಶದಲ್ಲಿ ದಾಳಿಕೋರ ವಾಸವಾಗಿದ್ದ. ದಾಳಿಕೋರ ಮೊದಲು ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದ ಕುಟುಂಬದ 8 ಮತ್ತು 11 ವರ್ಷದ ಮಕ್ಕಳು ಮತ್ತು ತಾಯಿಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ.

ಬಳಿಕ ಅದೇ ರೈಫಲ್​ ತೆಗೆದುಕೊಂಡು ರಸ್ತೆಗೆ ಬಂದ ಹಂತಕ ದಾರಿಯಲ್ಲಿ ಹೋಗುತ್ತಿದ್ದ ಜನರ ಮೇಲೆ ಮನಸೋಇಚ್ಚೆ ಫೈರಿಂಗ್​ ಮಾಡಿದ್ದಾನೆ. ಇದರಿಂದ ಸ್ಥಳದಲ್ಲೇ 7 ಮಂದಿ ಗುಂಡೇಟಿಗೆ ಬಲಿಯಾಗಿದ್ದಾರೆ. ದಾಳಿಯಲ್ಲಿ ಪೊಲೀಸ್​ ಅಧಿಕಾರಿ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.

ಇನ್ನು ಇದೇ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ದಾಳಿಕೋರನ ಮೇಲೆ ಪ್ರತಿದಾಳಿ ನಡೆಸಿ ಹತ್ಯೆ ಮಾಡಿದ್ದಾನೆ. ಇದರಿಂದ ಮುಂದಾಗುತ್ತಿದ್ದ ಅನಾಹುತವನ್ನು ತಡೆದಿದ್ದಾನೆ. ಬಾಡಿಗೆದಾರರು ಮತ್ತು ಜನರ ಮೇಲೆ ದಾಳಿಕೋರ ಫೈರಿಂಗ್​ ಮಾಡಿದ ಕಾರಣದ ಬಗ್ಗೆ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನು ಭೀಕರ ಘಟನೆಯ ಬಗ್ಗೆ ಪ್ರಧಾನಿ ಡ್ರಿಟನ್​​ ಅಬಾಜೋವಿಕ್​ ಆಘಾತ ವ್ಯಕ್ತಪಡಿಸಿದ್ದಾರೆ. ಇದೊಂದು ಅನಿರೀಕ್ಷಿತ ದುರಂತ ಎಂದು ಹೇಳಿದ್ದಾರೆ. ಅಮಾಯಕರ ಮೇಲೆ ಗುಂಡಿನ ದಾಳಿ ನಡೆಸಿರುವುದು ಕುಕೃತ್ಯ ಎಂದು ಟೀಕಿಸಿದ್ದಾರೆ. ಅಧ್ಯಕ್ಷ ಮಿಲೋ ಜುಕಾನೋವಿಕ್ ಅವರು ಕೂಡ ಟ್ವೀಟ್​ ಮಾಡಿ ಆಘಾತದೊಂದಿಗೆ ಸಂತಾಪ ಸೂಚಿಸಿದ್ದಾರೆ.

ಓದಿ: ಸಾವಿನ ಸೂತಕ ಬಿಡಲು ನದಿಗಿಳಿದ ಐವರು ಮತ್ತೆ ಬರಲಿಲ್ಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.