ETV Bharat / international

ರಷ್ಯಾಗೆ ಶಸ್ತ್ರಾಸ್ತ್ರ ಕಳುಹಿಸಿದರೆ ಚೀನಾ ಪರಿಣಾಮ ಎದುರಿಸಬೇಕಾಗುತ್ತದೆ: ಜರ್ಮನಿ ವಾರ್ನಿಂಗ್ - ಚೀನಾ ರಷ್ಯಾಕ್ಕೆ ಶಸ್ತ್ರಾಸ್ತ್ರಗಳನ್ನು ಕಳುಹಿಸಿದರೆ

ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವ ರಷ್ಯಾದ ಸಹಾಯಕ್ಕೆ ಚೀನಾ ಶಸ್ತ್ರಾಸ್ತ್ರಗಳನ್ನು ಕಳುಹಿಸಲಾರದು ಎಂದು ಜರ್ಮನಿ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಹೇಳಿದ್ದಾರೆ.

German Chancellor Scholz warns of 'consequences' if China sends arms to Russia

author img

By

Published : Mar 6, 2023, 7:08 PM IST

ಬರ್ಲಿನ್( ಜರ್ಮನಿ): ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧಕ್ಕಾಗಿ ಚೀನಾ ರಷ್ಯಾಕ್ಕೆ ಶಸ್ತ್ರಾಸ್ತ್ರಗಳನ್ನು ಕಳುಹಿಸಿದರೆ ಅದಕ್ಕೆ ತಕ್ಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಹೇಳಿದ್ದಾರೆ. ರಷ್ಯಾಗೆ ಬೀಜಿಂಗ್ ಶಸ್ತ್ರಾಸ್ತ್ರಗಳನ್ನು ಕಳುಹಿಸಲಾರದು ಎಂದು ನಾವು ಭಾವಿಸುತ್ತೇವೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ. ವಾಷಿಂಗ್ಟನ್‌ನಲ್ಲಿ ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರನ್ನು ಭೇಟಿಯಾದ ಎರಡು ದಿನಗಳ ನಂತರ ಭಾನುವಾರ ಪ್ರಸಾರವಾದ ಮಾಧ್ಯಮ ಸಂದರ್ಶನದಲ್ಲಿ ಸ್ಕೋಲ್ಜ್ ಈ ಹೇಳಿಕೆಗಳನ್ನು ನೀಡಿದ್ದಾರೆ.

ಒಂದು ವೇಳೆ ಚೀನಾ ರಷ್ಯಾಗೆ ಸಹಾಯ ಮಾಡಿದಲ್ಲಿ ಅದರ ಮೇಲೆ ನಿರ್ಬಂಧಗಳನ್ನು ಹೇರುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸ್ಕೋಲ್ಜ್, ಇದಕ್ಕೆ ಅದರದೇ ಆದ ಪರಿಣಾಮಗಳಿರುತ್ತವೆ ಎಂದು ನಾನು ಭಾವಿಸುತ್ತೇನೆ. ಆದರೆ, ಇದು ಸಂಭವಿಸಬಾರದು ಎಂದು ನಾವು ಸ್ಪಷ್ಟಪಡಿಸುವ ಹಂತದಲ್ಲಿ ನಾವು ಈಗ ಇದ್ದೇವೆ. ಹಾಗೆಯೇ ಈ ವಿಷಯದಲ್ಲಿ ನಮ್ಮ ಮನವಿಯನ್ನು ಪರಿಗಣಿಸಲಾಗುತ್ತದೆ ಎಂಬ ಬಗ್ಗೆ ನಾವು ಆಶಾವಾದಿಯಾಗಿದ್ದೇವೆ. ಆದಾಗ್ಯೂ ಈ ವಿಷಯದ ಬಗ್ಗೆ ನಾವು ಗಮನವಿಟ್ಟಿರಬೇಕು ಹಾಗೂ ಸಾಕಷ್ಟು ಎಚ್ಚರಿಕೆಯಿಂದಿರಬೇಕು ಎಂದು ಹೇಳಿದರು.

ಇಷ್ಟಾದರೂ ಸ್ಕೋಲ್ಜ್​ ಪರಿಣಾಮಗಳ ಬಗ್ಗೆ ವಿವರಣೆ ನೀಡಲಿಲ್ಲ. ಜರ್ಮನಿ ಯುರೋಪಿನ ಅತಿದೊಡ್ಡ ಆರ್ಥಿಕತೆಯಾಗಿದೆ ಹಾಗೂ ಅದೇ ಸಮಯದಲ್ಲಿ ಜರ್ಮನಿ ಚೀನಾದ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ. ಇನ್ನು ಭಾನುವಾರ ಜರ್ಮನಿಯಲ್ಲಿ ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಅವರನ್ನು ಸ್ಕೋಲ್ಜ್ ಭೇಟಿಯಾಗಿದ್ದರು. ರಷ್ಯಾಗೆ ಚೀನಾ ಶಸ್ತ್ರಾಸ್ತ್ರಗಳನ್ನು ಕಳುಹಿಸಲಿದೆ ಎಂದು ಅಮೆರಿಕದಿಂದ ನಿಮಗೆ ವಿಶ್ವಾಸಾರ್ಹ ಮಾಹಿತಿ ಏನಾದರೂ ಬಂದಿದೆಯಾ ಹಾಗೂ ಒಂದು ವೇಳೆ ಚೀನಾ ರಷ್ಯಾಗೆ ಸಹಾಯ ಮಾಡಿದಲ್ಲಿ ನೀವು ಚೀನಾ ವಿರುದ್ಧ ಆರ್ಥಿಕ ನಿರ್ಬಂಧ ಹೇರುವ ಕ್ರಮಗಳನ್ನು ಬೆಂಬಲಿಸುವಿರಾ ಎಂದು ಈ ಸಂದರ್ಭದಲ್ಲಿ ಸ್ಕೋಲ್ಜ್ ಅವರಿಗೆ ಪ್ರಶ್ನಿಸಲಾಯಿತು.

ಇದಕ್ಕುತ್ತರಿಸಿದ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಚೀನಾ ಯಾವುದೇ ಶಸ್ತ್ರಾಸ್ತ್ರಗಳನ್ನು ಕಳುಹಿಸಕೂಡದು ಎಂದು ನಾವೆಲ್ಲರೂ ಒಪ್ಪುತ್ತೇವೆ ಮತ್ತು ಚೀನಾ ಸರ್ಕಾರ ಹಾಗೆ ಮಾಡುವುದಿಲ್ಲ ಎಂದು ಹೇಳಿಕೊಂಡಿದೆ ಎಂದು ಚಾನ್ಸಲರ್ ತಿಳಿಸಿದರು.

ಪೂರ್ವ ಉಕ್ರೇನ್​ನ ಬಖಮುತ್​ ನಗರದ ಮೇಲೆ ರಷ್ಯಾ ನಿಯಂತ್ರಣ: ಪೂರ್ವ ಉಕ್ರೇನ್‌ನಲ್ಲಿ ರಷ್ಯಾ ದಾಳಿಗೆ ಒಳಗಾಗಿರುವ ಬಖ್‌ಮುತ್​ನ ಸ್ಥಿತಿಯು ವಾರಾಂತ್ಯದಲ್ಲಿ ಹೇಗಿದೆ ಎಂಬುದು ಸ್ಪಷ್ಟವಾಗಿಲ್ಲ. ನಗರದ ಎಷ್ಟು ಭಾಗವನ್ನು ರಷ್ಯಾದ ಪಡೆಗಳು ನಿಯಂತ್ರಣ ಪಡೆದಿವೆ ಎಂಬುದು ಸಹ ತಿಳಿದಿಲ್ಲ. ಬಖ್‌ಮುತ್‌ನಲ್ಲಿರುವ ಉಕ್ರೇನಿಯನ್ ಕಮಾಂಡರ್ ಭಾನುವಾರ ಟೆಲಿಗ್ರಾಮ್ ಆ್ಯಪ್ ಸಂದೇಶ ಕಳುಹಿಸಿದ್ದು, ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಬಗ್ಗೆ ಯಾವುದೇ ಆದೇಶ ಈವರೆಗೂ ಬಂದಿಲ್ಲ ಎಂದಿದ್ದಾರೆ.

ಬಖ್‌ಮುತ್‌ ನಗರವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವ ಯೋಜನೆಯನ್ನು ರಷ್ಯಾ ಹೊಂದಿದ್ದು, ಶುಕ್ರವಾರ ರಷ್ಯಾ ಸೇನೆಯು ಬಖ್​ಮುತ್ ನಗರಕ್ಕೆ ಹೋಗುವ ಮತ್ತು ಹೊರಬರುವ ಎಲ್ಲ ಮಾರ್ಗಗಳನ್ನು ನಾಶಪಡಿಸಿದೆ. ಸ್ಫೋಟದಿಂದ ಸಂಪೂರ್ಣ ಹಾಳಾಗಿರುವ ಈ ನಗರವನ್ನು ರಷ್ಯಾ ಪಡೆಗಳು ಸಂಪೂರ್ಣವಾಗಿ ಸುತ್ತುವರೆದಿವೆ ರಷ್ಯಾದ ವ್ಯಾಗ್ನರ್ ಖಾಸಗಿ ಸೇನೆಯ ಮುಖ್ಯಸ್ಥರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ : ದೆಹಲಿಯಲ್ಲಿಂದು ಜಿ20 ವಿದೇಶಾಂಗ ಸಚಿವರ ಸಭೆ: ರಷ್ಯಾ-ಉಕ್ರೇನ್‌ ಬಿಕ್ಕಟ್ಟು ಶಮನಕ್ಕೆ ಸಿಗುತ್ತಾ ಪರಿಹಾರ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.