ETV Bharat / international

ವಿದ್ಯುತ್​​, ಇಂಧನವಿಲ್ಲದೇ ಅಂಧಕಾರದಲ್ಲಿ ಗಾಜಾದ ಆಸ್ಪತ್ರೆಗಳು: ಆಸ್ಪತ್ರೆಗಳೇ ಹಮಾಸ್​ ಬಂಕರ್​ಗಳು - ಇಸ್ರೇಲ್​ ಸೇನೆ

author img

By ETV Bharat Karnataka Team

Published : Nov 11, 2023, 6:16 PM IST

ಗಾಜಾಪಟ್ಟಿಯಲ್ಲಿನ ಆಸ್ಪತ್ರೆಗಳ ಕೆಳಗೆ ಹಮಾಸ್​ ಉಗ್ರರು ಬಂಕರ್​ ರಚಿಸಿಕೊಂಡಿದ್ದಾರೆ ಎಂದು ಇಸ್ರೇಲ್​ ಆರೋಪಿಸಿದರೆ, ರೋಗಿಗಳು ವೈದ್ಯಕೀಯ ಸೌಕರ್ಯಗಳಿಲ್ಲದೇ ಸಾವಿಗೀಡಾಗುತ್ತಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳುತ್ತಿದೆ.

ಇಸ್ರೇಲ್​ ಸೇನೆ
ಇಸ್ರೇಲ್​ ಸೇನೆ

ಗಾಜಾ ಪಟ್ಟಿ: ಇಸ್ರೇಲ್​ನ ಸತತ ದಾಳಿಯಿಂದ ಗಾಜಾಪಟ್ಟಿ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ. ಮೂಲಸೌಕರ್ಯಗಳ ಕೊರತೆಯಿಂದ ನಿರಾಶ್ರಿತರ ಶಿಬಿರಗಳು, ಆಸ್ಪತ್ರೆಗಳು ನಲುಗುತ್ತಿವೆ. ಇಲ್ಲಿನ ಪ್ರಮುಖ ಆಸ್ಪತ್ರೆಗಳು ಸೇರಿದಂತೆ ಹಲವೆಡೆ ಇಂಧನ, ವಿದ್ಯುತ್​ ಸಂಪರ್ಕ ಕಡಿತಗೊಂಡಿದ್ದು, ಗಾಯಾಳುಗಳು, ರೋಗಿಗಳು ಸಾವಿಗೀಡಾಗುತ್ತಿದ್ದಾರೆ.

ಪ್ಯಾಲೆಸ್ಟೈನಿಯನ್ ನಾಗರಿಕರನ್ನು ರಕ್ಷಿಸಲು ಸೌಕರ್ಯಗಳನ್ನು ಸರಬರಾಜಿಗೆ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳ ಸಲಹೆಯನ್ನು ಇಸ್ರೇಲ್​ ತಿರಸ್ಕರಿಸಿದ್ದು, ಅದರ ಸೇನಾ ಪಡೆಗಳು ಗಾಜಾದ ಅತಿದೊಡ್ಡ ಆಸ್ಪತ್ರೆಯನ್ನು ಸುತ್ತುವರೆದಿವೆ. ಹಮಾಸ್​ ಉಗ್ರರು ಆಸ್ಪತ್ರೆಯನ್ನು ಬಂಕರ್​ ಆಗಿ ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಿ ಅದರ ಸುತ್ತಲೂ ದಾಳಿ ನಡೆಸಲಾಗಿದೆ. ಆದರೆ, ಅಲ್ಲಿನ ವೈದ್ಯರು ಹೇಳುವಂತೆ ವಿದ್ಯುತ್​ ಸಂಪರ್ಕ ಇಲ್ಲವಾಗಿದೆ. ಇದ್ದ ಕೊನೆಯ ಜನರೇಟರ್ ಕೂಡ ಖಾಲಿಯಾಗಿದ್ದು, ಜನಿಸಿದ ಮಗು ಸೇರಿದಂತೆ 5 ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.

ಆಸ್ಪತ್ರೆತ ಕೆಳಗೆ ಹಮಾಸ್​ ಬಂಕರ್​: ಗಾಜಾದ ಮುಖ್ಯ ಆಸ್ಪತ್ರೆಯಾದ ಶಿಫಾವನ್ನು ಹಮಾಸ್‌ ಸಂಘಟನೆಯ ಮುಖ್ಯ ಕಮಾಂಡ್ ಪೋಸ್ಟ್ ಆಗಿಸಿಕೊಳ್ಳಲಾಗಿದೆ. ಉಗ್ರಗಾಮಿಗಳು ರೋಗಿಗಳನ್ನು ಮಾನವ ಗುರಾಣಿಗಳಾಗಿ ಬಳಸುತ್ತಿದ್ದಾರೆ ಮತ್ತು ಅದರ ಕೆಳಗೆ ವಿಸ್ತಾರವಾದ ಬಂಕರ್‌ಗಳನ್ನು ಸ್ಥಾಪಿಸಿದ್ದಾರೆ ಎಂದು ಇಸ್ರೇಲ್​ ಹೇಳುತ್ತಿದೆ. ಉತ್ತರ ಗಾಜಾದಲ್ಲಿನ ಶಿಫಾ ಮತ್ತು ಇತರ ಆಸ್ಪತ್ರೆಗಳ ಸುತ್ತ ಇಸ್ರೇಲ್​ ಪಡೆಗಳು ದಾಳಿ ನಡೆಸುತ್ತಿವೆ. ಇದರಿಂದ ವೈದ್ಯಕೀಯ ಸಲಕರಣೆಗಳು ಸೇರಿದಂತೆ ಎಲ್ಲ ಸರಬರಾಜು ನಿಂತು ಹೋಗಿದೆ.

ವಿದ್ಯುತ್ ಸರಬರಾಜು ನಿಂತಿದೆ. ವೈದ್ಯಕೀಯ ಸಾಧನಗಳೂ ಇಲ್ಲವಾಗಿವೆ. ಸಾಮಾನ್ಯ ರೋಗಿಗಳ ಜೊತೆಗೆ ತೀವ್ರ ನಿಗಾ ಘಟಕದಲ್ಲಿದ್ದವರಿಗೆ ಸಾವಿನ ಭೀತಿ ಇದೆ. ಇಸ್ರೇಲ್​ ಪಡೆಗಳು ಸುತ್ತಲೂ ಗುಂಡಿನ ದಾಳಿ ನಡೆಸುತ್ತಿವೆ ಎಂದು ಶಿಫಾ ಆಸ್ಪತ್ರೆಯ ನಿರ್ದೇಶಕ ಮೊಹಮ್ಮದ್ ಅಬು ಸೆಲ್ಮಿಯಾ ತಿಳಿಸಿದರು.

ಆಸ್ಪತ್ರೆಯಲ್ಲಿದ್ದ ಕೊನೆಯ ಜನರೇಟರ್ ಸ್ಥಗಿತಗೊಂಡ ನಂತರ ಆಗಷ್ಟೇ ಜನಿಸಿದ್ದ ಶಿಶು ಸೇರಿದಂತೆ ಐವರು ರೋಗಿಗಳು ಸಾವನ್ನಪ್ಪಿದ್ದಾರೆ. ಇಲ್ಲಿ ಒಟ್ಟು 37 ಶಿಶುಗಳಿಗೆ ಆರೈಕೆ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯದ ವಕ್ತಾರ ಮೇಧತ್ ಅಬ್ಬಾಸ್ ತಿಳಿಸಿದ್ದಾರೆ.

ಆಸ್ಪತ್ರೆ ಸುತ್ತ ದಾಳಿ ನಡೆಸಿಲ್ಲ: ಇಸ್ರೇಲಿ ಪಡೆಗಳು ಆಸ್ಪತ್ರೆಯನ್ನು ಗುರಿಯಾಗಿಸಿ ದಾಳಿ ನಡೆಸಿಲ್ಲ. ಅದರಲ್ಲಿ ಹಮಾಸ್​ ಉಗ್ರರು ಅಡಗಿದ್ದು, ಅಲ್ಲಿ ಬಂಕರ್​ ಸ್ಥಾಪಿಸಲಾಗಿದೆ. ಮಾನವರನ್ನು ಗುರಾಣಿಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಇದರ ವಿರುದ್ಧ ನಮ್ಮ ಸೈನಿಕರು ಹೋರಾಡುತ್ತಿದ್ದಾರೆ ಎಂದು ಇಸ್ರೇಲ್​ ಸೇನಾಧಿಕಾರಿಗಳು ಹೇಳಿದ್ದಾರೆ.

ಇಸ್ರೇಲ್​ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ನಾಗರಿಕರಿಗೆ ಯಾವುದೇ ಹಾನಿ ಉಂಟು ಮಾಡಲಾಗುತ್ತಿಲ್ಲ. ಉಗ್ರಗಾಮಿಗಳು ಗಾಜಾದಲ್ಲಿ ನಾಗರಿಕರನ್ನು ಮಾನವ ಗುರಾಣಿಯಾಗಿ ಬಳಸುತ್ತಿದೆ. ಯುದ್ಧ ವಲಯಗಳನ್ನು ತೊರೆಯುವಂತೆ ಇಸ್ರೇಲ್ ನಾಗರಿಕರನ್ನು ಕೇಳಿಕೊಂಡಿದ್ದರೆ. ಹಮಾಸ್ ಅವರು ಅಲ್ಲಿಂದ ಹೊರಹೋಗದಂತೆ ತಡೆದು ನಿಲ್ಲಿಸಿದೆ ಎಂದು ಹೇಳಿದ್ದಾರೆ.

ಸಾವಿನ ಸಂಖ್ಯೆ ಏರಿಕೆ: ಯುದ್ಧದಲ್ಲಿ ಈವರೆಗೂ 11,070 ಕ್ಕೂ ಹೆಚ್ಚು ಪ್ಯಾಲೆಸ್ಟೈನಿಯನ್ನರು ಬಲಿಯಾಗಿದ್ದಾರೆ. ಅದರಲ್ಲಿ ಮೂರನೇ ಎರಡರಷ್ಟು ಮಹಿಳೆಯರು ಮತ್ತು ಅಪ್ರಾಪ್ತರು ಇದ್ದಾರೆ. ಸುಮಾರು 2,700 ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಇವರೆಲ್ಲಾ ಅವಶೇಷಗಳಡಿ ಸಿಲುಕಿರುವ ಅಥವಾ ಸಾವಿಗೀಡಾರುವ ಶಂಕೆ ಇದೆ. ಹಮಾಸ್​ ದಾಳಿಗೆ ಇಸ್ರೇಲ್‌ನಲ್ಲಿ ಕನಿಷ್ಠ 1,200 ಜನರು ಸಾವನ್ನಪ್ಪಿದ್ದಾರೆ. ಹಮಾಸ್‌ನಿಂದ 240 ಜನರು ಅಪಹರಿಸಲ್ಪಟ್ಟಿದ್ದಾರೆ.

ಇದನ್ನೂ ಓದಿ: ಹಮಾಸ್​ ದಾಳಿಯ ಬಗ್ಗೆ 4 ಮಾಧ್ಯಮ ಸಂಸ್ಥೆಗಳ ಪತ್ರಕರ್ತರಿಗೆ ಮೊದಲೇ ಅರಿವಿತ್ತು; ಇಸ್ರೇಲ್ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.