ಅಮೆರಿಕ: ಇಂಡಿಯಾನಾ ಮಾಲ್‌ನ ಫುಡ್ ಕೋರ್ಟ್‌ನಲ್ಲಿ ಭಾನುವಾರ ಸಂಜೆ (ಸ್ಥಳೀಯ ಕಾಲಮಾನ) ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಬಂದೂಕುಧಾರಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಗ್ರೀನ್‌ವುಡ್ ಪೊಲೀಸ್ ಇಲಾಖೆಯ ಮುಖ್ಯಸ್ಥ ಜಿಮ್ ಐಸನ್ ಹೇಳಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫುಡ್ ಕೋರ್ಟ್‌ನಲ್ಲಿ ಸಂಜೆ 6 ಗಂಟೆಗೆ (ಸ್ಥಳೀಯ ಕಾಲಮಾನ) ಘಟನೆ ಕುರಿತು ತುರ್ತು ಕರೆ ಕರೆಗಳು ಬಂದವು. ಬಂದೂಕುಧಾರಿಯೊಬ್ಬ ಪಾರ್ಕ್ ಮಾಲ್‌ಗೆ ಪ್ರವೇಶಿಸಿ ಗುಂಡು ಹಾರಿಸಲು ಪ್ರಾರಂಭಿಸಿದ್ದಾನೆ. ಆಗ ಶಸ್ತ್ರಸಜ್ಜಿತ ನಾಗರಿಕನೊಬ್ಬ ಆ ಬಂದೂಕುಧಾರಿಯನ್ನು ಕೊಂದಿದ್ದಾನೆ ಎಂದು ಅವರು ಹೇಳಿದರು.
ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಸಾಮೂಹಿಕ ಗುಂಡಿನ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅಧ್ಯಕ್ಷ ಜೋ ಬೈಡನ್, ಮಕ್ಕಳು ಮತ್ತು ಕುಟುಂಬಗಳನ್ನು ರಕ್ಷಿಸುವ ಸಲುವಾಗಿ ಆಕ್ರಮಣಕಾರಿ ಶಸ್ತ್ರಾಸ್ತ್ರಗಳನ್ನು ನಿಷೇಧಿಸುವ ಅಗತ್ಯವಿದೆ. ಶಸ್ತ್ರಾಸ್ತ್ರಗಳನ್ನು ಖರೀದಿಸಲು ಕನಿಷ್ಠ ವಯಸ್ಸನ್ನು 18 ರಿಂದ 21ಕ್ಕೆ ಹೆಚ್ಚಿಸಬೇಕು ಎಂದು ಹೇಳಿದ್ದರು. ಆದಾಗ್ಯೂ ದೇಶದಲ್ಲಿ ಗುಂಡಿನ ದಾಳಿ ಪ್ರಕರಣಗಳು ಮರುಕಳಿಸುತ್ತಿವೆ.
ಇದನ್ನೂ ಓದಿ: ಅಮೆರಿಕದ ಸ್ವಾತಂತ್ರ್ಯ ಸಂಭ್ರಮದ ಮೆರವಣಿಗೆ ಮೇಲೆ ಗುಂಡಿನ ದಾಳಿ: 6 ಸಾವು