ETV Bharat / international

ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೊ ಬೆರ್ಲುಸ್ಕೋನಿ ನಿಧನ - ಶ್ವಾಸಕೋಶದ ಸೋಂಕಿಗೆ ಬೆರ್ಲುಸ್ಕೋನಿ ಚಿಕಿತ್ಸೆ

ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೊ ಬೆರ್ಲುಸ್ಕೋನಿ ತಮ್ಮ 86ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

Ex-Italian PM Silvio Berlusconi passes away

author img

By

Published : Jun 12, 2023, 5:08 PM IST

ರೋಮ್ : ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೊ ಬೆರ್ಲುಸ್ಕೋನಿ ಮಿಲಾನ್​ನ ಸ್ಯಾನ್ ರಾಫೆಲ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಏಪ್ರಿಲ್‌ನಲ್ಲಿ ದೀರ್ಘಕಾಲದ ಲ್ಯುಕೇಮಿಯಾ ಪ್ರಕರಣಕ್ಕೆ ಸಂಬಂಧಿಸಿದ ಶ್ವಾಸಕೋಶದ ಸೋಂಕಿಗೆ ಬೆರ್ಲುಸ್ಕೋನಿ ಚಿಕಿತ್ಸೆ ಪಡೆದಿದ್ದಾರೆ ಎಂದು ಇಟಲಿಯ ಮಾಧ್ಯಮ ವರದಿಗಳು ತಿಳಿಸಿವೆ. ಪ್ರಖ್ಯಾತ ಬಿಲಿಯನೇರ್ ಮಾಧ್ಯಮ ಉದ್ಯಮಿ ಬರ್ಲುಸ್ಕೋನಿ 1994 ರಲ್ಲಿ ಪ್ರಥಮ ಬಾರಿಗೆ ಅಧಿಕಾರಕ್ಕೆ ಬಂದರು ಮತ್ತು 2011 ರವರೆಗೆ ನಾಲ್ಕು ಬಾರಿ ಪ್ರಧಾನಿಯಾಗಿದ್ದರು.

ಅವರು ಸೆಪ್ಟೆಂಬರ್‌ನಲ್ಲಿ ನಡೆದ ಚುನಾವಣೆಯ ನಂತರ ಹಾಲಿ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೋನಿ ನೇತೃತ್ವದಲ್ಲಿ ಒಕ್ಕೂಟಕ್ಕೆ ಸೇರಿ ಬಲಪಂಥೀಯ ಮಧ್ಯಮಮಾರ್ಗದ ಫೋರ್ಜಾ ಇಟಾಲಿಯಾ ಪಕ್ಷವನ್ನು ಮುನ್ನಡೆಸಿದರು. ಆವಾಗ ಅವರು ಇಟಲಿಯ ಮೇಲ್ಮನೆ ಸೆನೆಟ್‌ಗೆ ಆಯ್ಕೆಯಾಗಿದ್ದರು. ಮಾಜಿ ಪ್ರಧಾನಿ ನಿಧನಕ್ಕೆ ಪ್ರತಿಕ್ರಿಯಿಸಿದ ಇಟಲಿಯ ರಕ್ಷಣಾ ಸಚಿವ ಗಿಡೋ ಕ್ರೊಸೆಟ್ಟೊ ಸೋಮವಾರ ಬರ್ಲುಸ್ಕೋನಿಯ ಸಾವು ದೊಡ್ಡ ಶೂನ್ಯ ಸೃಷ್ಟಿಸಿದೆ ಎಂದಿದ್ದಾರೆ. ಒಂದು ಯುಗ ಮುಗಿದಿದೆ... ವಿದಾಯ ಸಿಲ್ವಿಯೊ ಎಂದು ಕ್ರೊಸೆಟ್ಟೊ ಟ್ವೀಟ್‌ನಲ್ಲಿ ಬರೆದಿದ್ದಾರೆ.

ಬೆರ್ಲುಸ್ಕೋನಿ 1994 ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದರು ಮತ್ತು ಲಕ್ಷಾಂತರ ಇಟಾಲಿಯನ್ನರಿಗೆ ಅವರು ಇಟಾಲಿಯನ್ ಆರ್ಥಿಕತೆಯ ಸುವರ್ಣ ಯುಗದ ಸೃಷ್ಟಿಕರ್ತರಾಗಿದ್ದರು. ತೆರಿಗೆ ವಂಚನೆಯ ಅಪರಾಧದ ನಂತರ ಆರು ವರ್ಷಗಳ ಕಾಲ ರಾಜಕೀಯದಿಂದ ನಿಷೇಧಕ್ಕೊಳಗಾಗುವ ಮೊದಲು ಅವರು ಇಟಲಿಯ ಪ್ರಧಾನ ಮಂತ್ರಿಯಾಗಿ ಮೂರು ಬಾರಿ ಸೇವೆ ಸಲ್ಲಿಸಿದರು.

ಅವರು ತಮ್ಮ 33 ವರ್ಷದ ಗೆಳತಿ ಮಾರ್ಟಾ ಫಾಸಿನಾ, ಇಬ್ಬರು ಮಾಜಿ ಪತ್ನಿಯರು ಮತ್ತು ಐದು ಮಕ್ಕಳನ್ನು ಅಗಲಿದ್ದಾರೆ. ಇವರಲ್ಲಿ ಕೆಲವರು ಅವರ ಉದ್ಯಮ ಸಾಮ್ರಾಜ್ಯವನ್ನು ನಡೆಸಲು ಸಹಾಯ ಮಾಡುತ್ತಿದ್ದಾರೆ. ಇತ್ತೀಚೆಗೆ ಫೋರ್ಬ್ಸ್ ಪ್ರಕಾರ ಅವರ ಸಂಪತ್ತಿನ ಮೌಲ್ಯ 6.3 ಶತಕೋಟಿ ಡಾಲರ್ ಆಗಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಸೆನೆಟ್‌ಗೆ ಮರು-ಚುನಾಯಿತರಾಗಿದ್ದರೂ ಬರ್ಲುಸ್ಕೋನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ವಿರಳ. ಆದರೆ ಅವರು ತಮ್ಮ ಬಲಪಂಥೀಯ ಫೋರ್ಜಾ ಇಟಾಲಿಯಾ ಪಕ್ಷದ ಅಧಿಕೃತ ಮುಖ್ಯಸ್ಥರಾಗಿ ಮುಂದುವರಿದರು.

ಫೋರ್ಬ್ಸ್ ಪ್ರಕಾರ ಬೆರ್ಲುಸ್ಕೋನಿ 1970 ರ ದಶಕದ ಉತ್ತರಾರ್ಧದಲ್ಲಿ 'ಬೇವಾಚ್' ನಂತಹ ಅಮೇರಿಕನ್ ಶೋಗಳನ್ನು ಇಟಲಿಗೆ ತಂದ ಮೀಡಿಯಾ ಗ್ರೂಪ್ ಫಿನ್‌ಇನ್‌ವೆಸ್ಟ್ ಅನ್ನು ಸ್ಥಾಪಿಸಿದರು. ಮಾಧ್ಯಮ, ಪಬ್ಲಿಶಿಂಗ್ ಉದ್ಯಮ ಮತ್ತು ಬ್ಯಾಂಕಿಂಗ್ ಉದ್ಯಮಗಳ ಪಾಲನ್ನು ಅವರು ತಮ್ಮ ಐವರು ಮಕ್ಕಳಿಗೆ ಹಂಚಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಅನಾರೋಗ್ಯದಿಂದ ಹಲವಾರು ಬಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಅವರು ಕೋವಿಡ್ -19 ನಿಂದ ಕೂಡ ಒಮ್ಮೆ ಸೋಂಕಿತರಾಗಿದ್ದರು.

ಸಿಲ್ವಿಯೊ ಬೆರ್ಲುಸ್ಕೋನಿ ಮಿಲಾನ್​ನಲ್ಲಿ 29 ಸೆಪ್ಟೆಂಬರ್ 1936 ರಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು ಮತ್ತು ಎರಡನೆಯ ಮಹಾಯುದ್ಧದ ಸಮಯದಲ್ಲಿ ನಗರದ ಹೊರಗಿನ ಹಳ್ಳಿಯಲ್ಲಿ ಬೆಳೆದರು. ತನ್ನ ವಿದ್ಯಾರ್ಥಿ ದಿನಗಳಿಂದಲೂ ಅವರು ಹಣ ಗಳಿಸುವ ಸಾಮರ್ಥ್ಯ ಪ್ರದರ್ಶಿಸಿದ್ದರು. ವಿಶ್ವವಿದ್ಯಾನಿಲಯದಲ್ಲಿ ಕಾನೂನು ಅಧ್ಯಯನ ಮಾಡುವಾಗ ಅವರು ವಿದ್ಯಾರ್ಥಿ ಬ್ಯಾಂಡ್‌ನಲ್ಲಿ ಡಬಲ್ ಬಾಸ್ ನುಡಿಸುತ್ತಿದ್ದರು ಮತ್ತು ಗಾಯಕರಾಗಿ ಪ್ರಖ್ಯಾತರಾದರು.

ಇದನ್ನೂ ಓದಿ : Cryptocurrency in India: ಕಾಯ್ದೆ ಜಾರಿಯ ನಂತರವೇ ಕ್ರಿಪ್ಟೊಕರೆನ್ಸಿಯಲ್ಲಿ ಹೂಡಿಕೆ ಮಾಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.