ಲಂಡನ್: ಬ್ರಿಟಿಷ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ತಮ್ಮ ಲಾರ್ಡ್ ಜೊ ಜಾನ್ಸನ್ ಅದಾನಿ, ಎಂಟರ್‌ಪ್ರೈಸಸ್ ಷೇರು ವಿಕ್ರಯ(ಎಫ್‌ಪಿಒ)ದೊಂದಿಗೆ ಸಂಬಂಧ ಹೊಂದಿರುವ ಯುಕೆ ಮೂಲದ ಹೂಡಿಕೆ ಸಂಸ್ಥೆಯ ಕಾರ್ಯ ನಿರ್ವಾಹಕೇತರ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ಜೂನ್ನಲ್ಲಿ ಎಲರಾ ಕ್ಯಾಪಿಟಲ್ ಪಿಎಲ್ಸಿ ನಿರ್ದೇಶಕ ಸ್ಥಾನಕ್ಕೆ 51 ವರ್ಷದ ಲಾರ್ಡ್ ಜಾನ್ಸನ್ ನೇಮಕ ಗೊಂಡಿದ್ದರು. ಬುಧವಾರ ಅದಾನಿ ಸಮೂಹ ಸಂಸ್ಥೆ ಷೇರು ವಿಕ್ರಯ ಹಿಂಪಡೆಯುವ ಘೋಷಣೆ ನಡೆಸಿದ ದಿನದಂದು ಅವರು ರಾಜೀನಾಮೆ ನೀಡಿದ್ದಾರೆ ಎಂದು ದಿ ಫೈನಾನ್ಸ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಎಲರಾ ಸಂಸ್ಥೆ, ಭಾರತೀಯ ಕಾರ್ಪೊರೇಟ್ ಸಂಸ್ಥೆಗಳಿಂದ ಬಂಡವಾಳ ಮಾರುಕಟ್ಟೆಯ ಉದ್ಯಮಕ್ಕೆ ಹಣ ಸಂಗ್ರಹಿಸುವ ತರುವ ಸಂಸ್ಥೆಯಾಗಿದ್ದು, ಎಫ್‌ಪಿಒ ಬುಕ್ ರನ್ನರ್ಗಳಲ್ಲಿ ಒಬ್ಬರಾಗಿದೆ.ಇನ್ನು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕುರಿತು ಮಾತನಾಡಿರುವ ಜಾನ್ಸನ್ ಕಂಪನಿಯು ಉತ್ತಮ ಸ್ಥಾನಮಾನ ಹೊಂದಿದ್ದು, ತಮ್ಮ ವೈಯಕ್ತಿಕ ಡೊಮೇನ್ ಪರಿಣಿತಿಯ ಕೊರತೆಯಿಂದಾಗಿ ಈ ಹುದ್ದೆ ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ.
ಲಂಡನ್ ಮೂಲದ ಭಾರತ ಕೇಂದ್ರಿತ ಹೂಡಿಕೆ ಸಂಸ್ಥೆ ಎಲರಾ ಕ್ಯಾಪಿಟಲ್ಗೆ ನಾನು ಸ್ವತಂತ್ರ ಕಾರ್ಯ ನಿರ್ವಾಹಕೇತರ ನಿರ್ದೇಶಕರಾಗಿ ಕಳೆದ ಜೂನ್ನಲ್ಲಿ ಸೇರಿದೆ. ಈ ಮೂಲಕ ಬ್ರಿಟನ್- ಭಾರತ ಉದ್ಯಮ ಮತ್ತು ಹೂಡಿಕೆ ಸಂಬಂಧಗಳಿಗೆ ಕೊಡುಗೆ ನೀಡುವ ಭರವಸೆ ಹೊಂದಿದೆ. ಇದಕ್ಕಾಗಿ ಸುದೀರ್ಘ ಸಂಬಂಧವನ್ನು ಹೊಂದಿದ್ದು, ಬುಕ್ ಕೂಡ ಬರೆದಿದ್ದೇನೆ ಎಂದು ಜಾನ್ಸನ್ ರಾಜೀನಾಮೆ ಬಳಿಕ ತಿಳಿಸಿದ್ದಾರೆ.
ನಾನು ಎಲಾರಾ ಕ್ಯಾಪಿಟಲ್‌ನಿಂದ ತನ್ನ ಕಾನೂನು ಬಾಧ್ಯತೆಗಳಿಗೆ ಅನುಸಾರವಾಗಿದೆ. ನಿಯಂತ್ರಕ ಸಂಸ್ಥೆಗಳೊಂದಿಗೆ ಉತ್ತಮ ಸ್ಥಿತಿಯಲ್ಲಿದೆ ಎಂಬ ಭರವಸೆಯನ್ನು ನಾನು ಪಡೆದಿದ್ದೇನೆ. ಇದೇ ವೇಳೆ, ಹಣಕಾಸು ನಿಯಂತ್ರಣದಲ್ಲಿ ಅತ್ಯತ್ತಮ ಮಟ್ಟದ ಡೊಮೈನ್ ಪರಿಣಿತಿಯನ್ನು ಈ ಸ್ಥಾನ ಬೇಡುತ್ತದೆ ಎಂಬ ಅರಿವು ನನಗೆ ಆಗಿದೆ. ಅದರ ನಿರೀಕ್ಷೆಯಂತೆ ನಾನು ಮಂಡಳಿಗೆ ರಾಜೀನಾಮೆ ಪಡೆದಿದ್ದೇನೆ ಎಂದಿದ್ದಾರೆ.
ಅದಾನಿ ಗ್ರೂಪ್ ಕಂಪನಿಗಳೊಂದಿಗೆ ಲಂಡನ್ ಸಂಸ್ಥೆ ನಡೆಸುತ್ತಿರುವ ಮಾರಿಷಸ್ ಮೂಲದ ನಿಧಿಗಳನ್ನು ಆಸ್ತಿ ನಿರ್ವಹಣೆ ವ್ಯವಹಾರವಾಗಿ ಎಲರಾ ಕಾರ್ಯ ನಿರ್ವಹಿಸುತ್ತಿದೆ ಎಂದು ಹಿಡಂನ್ ಬರ್ಗ್ ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಅದಾನಿ ಗ್ರೂಪ್ ಹಿಡಂನ್ ಬರ್ಗ್ ಆರೋಪವನ್ನು ತಳ್ಳಿ ಹಾಕಿದೆ. ಅಲ್ಲದೇ ಇದು ಆಧಾರ ರಹಿತ ಮತ್ತು ಅಪಖ್ಯಾತಿಗೊಳಿಸುವ ಆರೋಪವಾಗಿದೆ ಎಂದು ದೂರಿದೆ.
ಇನ್ನು ಈ ಆರೋಪಗಳ ಕುರಿತು ಎಲರಾ ಕ್ಯಾಪಿಟನ್ ಮುಖ್ಯ ಕಾರ್ಯ ನಿರ್ವಹಾಕ ಮತ್ತು ಸಂಸ್ಥಾಪಕ ರಾಜ್ ಭಟ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಏತನ್ಮಥ್ಯೆ, ಕಂಪನಿಯ ವೈಬ್ಸೈಟ್ನಲ್ಲಿ ಭಟ್ ಎಲರಾ ಕ್ಯಾಪಿಟಲ್ ಪಿಎಲ್ಸಿ ಯನ್ನು 2002ರಲ್ಲಿ ಸ್ಥಾಪಿಸಿದ್ದು, ಇದು ಹೂಡಿಕೆ ಮಾರುಕಟ್ಟೆ ವ್ಯವಹಾರವಾಗಿದ್ದು, ಜಿಡಿಆರ್, ಎಫ್ಸಿಸಿಬು ಮತ್ತು ಲಂಡನ್ ಎಐಎಂ ಮಾರುಕಟ್ಟೆ ಮೂಲಜ ಭಾರತ ಕಾರ್ಪೊರೇಟ್ಗೆ ಹಣ ಸಂಗ್ರಹಿಸುವ ಸಂಸ್ಥೆಯಾಗಿದೆ ಎನ್ನಲಾಗಿದೆ.
2003ರಲ್ಲಿ ಮೊದಲ ಜಿಡಿಆರ್ ಅನ್ನು ಅನೇಕ ಭಾರತೀಯ ಕಾರ್ಪೊರೇಟ್ಸ್ಗಳಿಗೆ ಎಲರಾ ಮೊದಲ ನಿಧಿ ಸಂಗ್ರಹ ಮಾಡಿತು. ಇದಾದ ಬಳಿಕ ಗುಂಪು ಕಾರ್ಪೊರೇಟ್ ಸಲಹಾ, ಆಸ್ತಿ ನಿರ್ವಹಣೆ, ಬ್ರೋಕಿಂಗ್, ವಿಲೀನಗಳು ಮತ್ತು ಸ್ವಾಧೀನಗಳು ಮತ್ತು ಖಾಸಗಿ ಇಕ್ವಿಟಿಯಲ್ಲಿ ಮತ್ತಷ್ಟು ವೈವಿಧ್ಯಗೊಳಿಸಿದೆ
ಇದನ್ನೂ ಓದಿ: ವಾಲ್ಸ್ಟ್ರೀಟ್ನಲ್ಲಿ ಮುಂದುವರಿದ ಏರಿಳಿತ.. ಟೆಕ್ ಷೇರುಗಳ ಅಬ್ಬರ..ನಾಸ್ಡಾಕ್ನಲ್ಲಿ ಉತ್ಸಾಹ