ETV Bharat / international

ಕಾಬೂಲ್‌ನಲ್ಲಿ ಅಫ್ಘಾನ್​ ಮಾಜಿ ಸಂಸದೆ ಮುರ್ಸದ್​ ನಬಿಜಾದಾ ಹತ್ಯೆ: ಸೂಕ್ತ ತನಿಖೆಗೆ ವಿಶ್ವಸಂಸ್ಥೆ ಆಗ್ರಹ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಆಡಳಿತ ನಡೆಸುತ್ತಿದ್ದಾರೆ. ಮಾನವ ಹಕ್ಕುಗಳನ್ನು ಅದರಲ್ಲೂ ಪ್ರಮುಖವಾಗಿ ಮಹಿಳೆಯರ ಹಕ್ಕುಗಳನ್ನು ಎಲ್ಲ ರೀತಿಯಿಂದಲೂ ಕಸಿದುಕೊಳ್ಳಲಾಗುತ್ತಿದೆ. ಇದೀಗ ಮಾಜಿ ಸಂಸದೆ ಮುರ್ಸಲ್​ ನಬಿಜಾದಾ ಅವರ ಹತ್ಯೆ ನಡೆದಿದೆ.

Afghan MP Nabizada
ಅಪ್ಘಾನ್​ ಮಾಜಿ ಸಂಸದೆ ಮುರ್ಸದ್​ ನಬಿಜಾದಾ
author img

By

Published : Jan 17, 2023, 8:10 AM IST

Updated : Jan 17, 2023, 10:01 AM IST

ಕಾಬೂಲ್​ (ಅಫ್ಘಾನಿಸ್ತಾನ) : ಅಫ್ಘಾನಿಸ್ತಾನದ ಮಾಜಿ ಸಂಸದೆ ಮುರ್ಸಲ್​ ನಬಿಜಾದಾ (32) ಮತ್ತು ಅವರ ಭದ್ರತಾ ಸಿಬ್ಬಂದಿಯನ್ನು ಉಗ್ರರು ಶನಿವಾರ ಅವರ ನಿವಾಸದಲ್ಲಿಯೇ ಗುಂಡಿಕ್ಕಿ ಕೊಂದಿರುವುದಾಗಿ ಕಾಬೂಲ್‌ ಪೊಲೀಸರು ತಿಳಿಸಿದ್ದಾರೆ. ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ನಿವಾಸದ ಮೊದಲ ಮಹಡಿಯ ಕೊಠಡಿಯಲ್ಲಿ ಘಟನೆ ನಡೆದಿದೆ. ಮುರ್ಸಲ್‌ ಅವರ ಸಹೋದರ ಮತ್ತು ಎರಡನೇ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುರ್ಸಲ್​ ನಬಿಜಾದಾ ಯಾರು?: 2021ರ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಉಗ್ರರು ಅಧಿಕಾರ ವಶಪಡಿಸಿಕೊಂಡ ನಂತರ ಕಾಬೂಲ್​ನಲ್ಲಿ ಉಳಿದುಕೊಂಡ ಕೆಲವು ಮಹಿಳಾ ಸಂಸದರಲ್ಲಿ ಮುರ್ಸಲ್​ ನಬಿಜಾದಾ ಕೂಡ ಒಬ್ಬರು. ಅಫ್ಘಾನಿಸ್ತಾನ ತೊರೆಯುವ ಅವಕಾಶವನ್ನು ಇವರಿಗೆ ನೀಡಲಾಗಿದ್ದರೂ, ತನ್ನ ಜನರಿಗಾಗಿ ಹೋರಾಡಲು ನಿರ್ಧರಿಸಿ ಅಲ್ಲಿಯೇ ಉಳಿದುಕೊಂಡಿದ್ದರು. ನಬಿಜಾದಾ ಅವರು ನಂಗರ್​ಹಾರ್​ನ ಪೂರ್ವ ಪ್ರಾಂತ್ಯದ ನಿವಾಸಿಯಾಗಿದ್ದು, 2019 ರಲ್ಲಿ ಚುನಾಯಿತರಾಗಿದ್ದರು. ತಾಲಿಬಾನ್ ಕಾಬೂಲ್ ಅ​ನ್ನು ವಶಕ್ಕೆ ಪಡೆದುಕೊಳ್ಳುವವರೆಗೂ ಇವರು ಅಧಿಕಾರದಲ್ಲಿದ್ದರು. ಸಂಸದೀಯ ರಕ್ಷಣಾ ಆಯೋಗದ ಸದಸ್ಯರೂ ಹೌದು. ಖಾಸಗಿ ಸರ್ಕಾರೇತರ ಗುಂಪಿನ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು.

ಸೂಕ್ತ ತನಿಖೆಗೆ ವಿಶ್ವಸಂಸ್ಥೆ ಆಗ್ರಹ: ಅಫ್ಘಾನ್​ ಮಾಜಿ ಶಾಸಕಿ ಮರಿಯಮ್​ ಸೊಲೈಮಂಖಿಲ್​, ಮಾಜಿ ಪಾಶ್ಚಿಮಾತ್ಯ ಬೆಂಬಲಿತ ಸರ್ಕಾರದಲ್ಲಿ ಉನ್ನತ ಅಧಿಕಾರಿಯಾಗಿದ್ದ ಅಬ್ದುಲ್​ ಅಬ್ದುಲ್ಲಾ, ಮಾಜಿ ಸಂಸದೆ ಮಲಾಲೈ ಇಶಾಕ್​ಝೈ ಸೇರಿದಂತೆ ಅಫ್ಘಾನಿಸ್ತಾನದ ಪ್ರಮುಖರು ಸಂತಾಪ ಸೂಚಿಸಿದ್ದಾರೆ. ಮಿರ್ಸಲ್​ ನಬಿಜಾದಾ ಹತ್ಯೆ ಕುರಿತು ತನಿಖೆ ನಡೆಸುವಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೇರಸ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಆರ್ಥಿಕ ದಿವಾಳಿ ಸನಿಹದಲ್ಲಿ ನೆರೆಯ ಪಾಕಿಸ್ತಾನ.. ಶ್ರೀಲಂಕಾಗೆ ಬಂದ ಪರಿಸ್ಥಿತಿ ಪಾಕಿಸ್ತಾನಕ್ಕೂ ಬರಬಹುದು ವಿಶ್ಲೇಷಕರ ಸುಳಿವು..

ಅಫ್ಘಾನ್​ ಮಹಿಳೆಯರಿಗೆ ತಾಲಿಬಾನ್​ ನಿರ್ಬಂಧ: ಮಹಿಳೆಯರ ಹಕ್ಕು ಮತ್ತು ಸ್ವಾತಂತ್ರ್ಯಕ್ಕೆ ಗೌರವ ಕೊಡುವುದಾಗಿ ಅಧಿಕಾರಕ್ಕೆ ಬಂದ ಆರಂಭದಲ್ಲಿ ಹೇಳಿದ್ದ ತಾಲಿಬಾನ್ ಸರ್ಕಾರ ಮಾತು ಉಳಿಸಿಕೊಂಡಿಲ್ಲ. ಅಫ್ಘಾನ್ ಮಹಿಳೆಯರನ್ನು ನಾಲ್ಕು ಗೋಡೆಯೊಳಗೆ ಬಂಧಿಸಲು ತಾಲಿಬಾನ್ ಇನ್ನಿಲ್ಲದ ಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತಲೇ ಇದೆ. ಅದರಂತೆ,​ ಅಫ್ಘಾನಿಸ್ತಾನದ ಮಹಿಳೆಯರ ಶಿಕ್ಷಣಕ್ಕೆ ತಾಲಿಬಾನ್​ ತಡೆಯೊಡ್ಡಿದೆ. ಉನ್ನತ ಶಿಕ್ಷಣ ಸೇರಿದಂತೆ 6ನೇ ತರಗತಿಯ ನಂತರ ಎಲ್ಲಾ ಶಾಲೆಗಳನ್ನು ಬಂದ್​ ಮಾಡಿಸಿ, ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿದೆ. ಅಲ್ಲದೇ ತಾಲಿಬಾನ್ ಸರ್ಕಾರ ದೇಶೀಯ ಮತ್ತು ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆಗಳಲ್ಲಿ (ಎನ್​ಜಿಒ) ಮಹಿಳೆಯರು ಕೆಲಸಕ್ಕೆ ಹೋಗುವುದನ್ನೂ ನಿಷೇಧಿಸಿದೆ.

ಕ್ರಿಕೆಟ್‌ ಸರಣಿ ಕೈಬಿಟ್ಟ ಆಸ್ಟ್ರೇಲಿಯಾ: ಮಾರ್ಚ್‌ನಲ್ಲಿ ಯುಎಇಯಲ್ಲಿ ನಡೆಯಬೇಕಿದ್ದ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಆಸ್ಟ್ರೇಲಿಯಾ ಹಿಂದೆ ಸರಿದು, ತಾಲಿಬಾನ್​ ಆಡಳಿತದ ಅಫ್ಘಾನಿಸ್ತಾನಕ್ಕೆ ಶಾಕ್​ ನೀಡಿತ್ತು. ಮಹಿಳೆಯರ ಮೇಲೆ ತಾಲಿಬಾನ್​ ಹೇರಿರುವ ನಿರ್ಬಂಧಗಳ ನಡುವೆ ಕ್ರಿಕೆಟ್​ ಪಂದ್ಯಾವಳಿಯಲ್ಲಿ ಮುಂದುವರೆಯಲು ಇಚ್ಛಿಸದೆ ಏಕದಿನ ಸರಣಿಯನ್ನು ಕೈ ಬಿಟ್ಟಿತ್ತು. ಅಲ್ಲದೇ ಜನವರಿ 14ರಿಂದ ಪ್ರಾರಂಭವಾಗಿರುವ ಮಹಿಳಾ ಅಂಡರ್​ 19 ಟಿ20 ವಿಶ್ವಕಪ್​ನಲ್ಲಿ ಅಫ್ಘಾನಿಸ್ತಾನದ ತಂಡವಿಲ್ಲ.​ ಹೀಗಾಗಿ, ಮಹಿಳಾ ತಂಡವನ್ನು ಹೊಂದಿರದ ಏಕೈಕ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ಐಸಿಸಿ) ಸದಸ್ಯ ರಾಷ್ಟ್ರ ಅಫ್ಘಾನಿಸ್ತಾನವಾಗಿದೆ.

ಇದನ್ನೂ ಓದಿ: ಎನ್​ಜಿಒ ಕೆಲಸ, ಮಸೀದಿ ಬೋಧನೆಯಲ್ಲಿ ಪಾಲ್ಗೊಳ್ಳಬೇಡಿ: ಮಹಿಳೆಯರಿಗೆ ತಾಲಿಬಾನ್​ ನಿಷೇಧ

Last Updated : Jan 17, 2023, 10:01 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.