ETV Bharat / international

ಬಲೂಚಿಸ್ತಾನ: ಐವರು ಪಾಕಿಸ್ತಾನ ಸೈನಿಕರ ಹತ್ಯೆ - ಭಯೋತ್ಪಾದಕ

ಪಾಕಿಸ್ತಾನ ಸೇನಾ ಪಡೆಗಳು ಮತ್ತು ಭಯೋತ್ಪಾದಕರ ಮಧ್ಯೆ ಬಲೂಚಿಸ್ತಾನದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಪಾಕಿಸ್ತಾನ ಸೈನಿಕರು ಮತ್ತು ಮೂವರು ಉಗ್ರರು ಹತ್ಯೆಯಾಗಿದ್ದಾರೆ.

Five Pakistan army personnel killed
Five Pakistan army personnel killed
author img

By PTI

Published : Jan 14, 2024, 12:29 PM IST

ಪೇಶಾವರ: ನೈಋತ್ಯ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಐವರು ಪಾಕಿಸ್ತಾನಿ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಕೆಚ್ ಜಿಲ್ಲೆಯ ಬುಲೆಡಾ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಭಯೋತ್ಪಾದಕರು ಭದ್ರತಾ ಪಡೆಗಳ ವಾಹನದ ಮೇಲೆ ಸುಧಾರಿತ ಸ್ಫೋಟಕಗಳ ಮೂಲಕ ದಾಳಿ ನಡೆಸಿದರು. ಇದು ತೀವ್ರ ಗುಂಡಿನ ಚಕಮಕಿಗೆ ಕಾರಣವಾಯಿತು ಎಂದು ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್​ಪಿಆರ್) ತಿಳಿಸಿದೆ.

ದಾಳಿಗೆ ತಕ್ಷಣ ಪ್ರತಿಕ್ರಿಯೆ ಆರಂಭಿಸಿದ ಪಾಕಿಸ್ತಾನದ ಭದ್ರತಾ ಪಡೆ ಯೋಧರು ಮೂವರು ಭಯೋತ್ಪಾದಕರನ್ನು ಕೊಂದರು. ಆದಾಗ್ಯೂ ಕಾರ್ಯಾಚರಣೆಯಲ್ಲಿ ಐವರು ಸೈನಿಕರು ಸಾವನ್ನಪ್ಪಿದ್ದಾರೆ. ಪ್ರದೇಶದಲ್ಲಿ ಅಡಗಿರುವ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಮಿಲಿಟರಿ ಕಾರ್ಯಾಚರಣೆ ತೀವ್ರವಾಗಿ ನಡೆಯುತ್ತಿದೆ.

ಈ ವಾರದ ಆರಂಭದಲ್ಲಿ 10 ರಿಂದ 12 ಶಸ್ತ್ರಸಜ್ಜಿತ ಉಗ್ರರು ವಾಯುವ್ಯ ಹೆದ್ದಾರಿಯಲ್ಲಿರುವ ಪೊಲೀಸ್ ಚೆಕ್ ಪಾಯಿಂಟ್ ಮೇಲೆ ದಾಳಿ ನಡೆಸಿ, ಮೂವರು ಪೊಲೀಸ್ ಅಧಿಕಾರಿಗಳು ಮತ್ತು ಒಬ್ಬ ನಾಗರಿಕನನ್ನು ಕೊಂದು ಸ್ಥಳದಿಂದ ಪರಾರಿಯಾಗಿದ್ದರು. ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್ ಪಖ್ತುನಖ್ವಾ ಪ್ರಾಂತ್ಯದ ಕೋಹತ್ ಜಿಲ್ಲೆಯಲ್ಲಿ ಈ ದಾಳಿ ನಡೆದಿದೆ. ಮತ್ತೊಂದು ಘಟನೆಯಲ್ಲಿ, ಖೈಬರ್​ನ ಲಕ್ಕಿ ಮಾರ್ವತ್​ನಲ್ಲಿ ಈ ವಾರ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರು ಮತ್ತು ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.

ಹತ್ಯೆಗೀಡಾದ ಉಗ್ರರು ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ ಅಥವಾ ಟಿಟಿಪಿ ಎಂದು ಕರೆಯಲ್ಪಡುವ ಪಾಕಿಸ್ತಾನಿ ತಾಲಿಬಾನ್​ಗೆ ಸೇರಿದವರಾಗಿದ್ದಾರೆ. ಟಿಟಿಪಿ ಪ್ರತ್ಯೇಕ ಉಗ್ರಗಾಮಿಗಳ ಗುಂಪಾಗಿದ್ದು, ಯುಎಸ್ ಮತ್ತು ನ್ಯಾಟೋ ಪಡೆಗಳು ಆಗಸ್ಟ್​ 2021ರಲ್ಲಿ ಅಫ್ಘಾನಿಸ್ತಾನದಿಂದ ಹೊರಹೋದ ನಂತರ ಇವರು ಅಫ್ಘಾನ್ ತಾಲಿಬಾನ್​ನೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ.

ಅಫ್ಘಾನ್ ತಾಲಿಬಾನ್​ನೊಂದಿಗಿನ ಮೈತ್ರಿಯಿಂದ ಶಕ್ತಿಶಾಲಿಯಾದ ಟಿಟಿಪಿ ಅಫ್ಘಾನ್ ಗಡಿಯ ಬಳಿ ಮತ್ತು ಪಾಕಿಸ್ತಾನದ ಹಲವಾರು ಭಾಗಗಳಲ್ಲಿ ನಿರಂತರವಾಗಿ ದಾಳಿ ನಡೆಸುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಟಿಟಿಪಿ ದಕ್ಷಿಣಕ್ಕೆ ಬಲೂಚಿಸ್ತಾನದಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಂಡಿದ್ದು, ಆಗಾಗ ಘರ್ಷಣೆಗಳು ನಡೆಯುತ್ತಿವೆ. ಪಾಕಿಸ್ತಾನ ಭದ್ರತಾ ಪಡೆಗಳ ಮೇಲೆ ಟಿಟಿಪಿ ಉಗ್ರರು ಸತತವಾಗಿ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರ ಟಿಟಿಪಿ ವಿರುದ್ಧ ಸಮರ ಸಾರಿದೆ. ಕಳೆದೊಂದು ವರ್ಷದಲ್ಲಿ ಪಾಕಿಸ್ತಾನದಲ್ಲಿ ಉಗ್ರಗಾಮಿಗಳ ದಾಳಿಗಳು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿವೆ.

ಇದನ್ನೂ ಓದಿ: 'ಖಲಿಸ್ತಾನ್​ಗಾಗಿ ಭಾರತದಲ್ಲಿ ಜನಾಭಿಪ್ರಾಯ' ಗಣರಾಜ್ಯೋತ್ಸವಕ್ಕೆ ಬೆದರಿಕೆ ಹಾಕಿದ ಎಸ್​ಎಫ್​ಜೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.