ETV Bharat / international

ಲಾಹೋರ್‌ನ ಯಾವುದೇ ಬಂಕ್‌ನಲ್ಲಿ ಪೆಟ್ರೋಲ್ ಇಲ್ಲ, ATM ಯಂತ್ರಗಳಲ್ಲಿ ಹಣವಿಲ್ಲ: ಕ್ರಿಕೆಟರ್​ ಹಫೀಜ್ ಟ್ವೀಟ್

ಪಾಕಿಸ್ತಾನದಲ್ಲೂ ಜನರು ಮೂಲ ಸೌಕರ್ಯಗಳಿಂದ ತೊಂದರೆ ಅನುಭವಿಸುತ್ತಿದ್ದು, ಲಾಹೋರ್​ ಯಾವುದೇ ಪೆಟ್ರೋಲ್ ಬಂಕ್​​ಗಳಲ್ಲಿ ತೈಲ ಲಭ್ಯವಾಗುತ್ತಿಲ್ಲವೇ? ಎಂದು ಪ್ರಶ್ನೆ ಮಾಡುವ ಮೂಲಕ ಮಾಜಿ ಕ್ರಿಕೆಟರ್ ಮೊಹಮ್ಮದ್ ಹಫೀಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

author img

By

Published : May 25, 2022, 5:25 PM IST

Ex-Pakistan Cricketer Mohammad Hafeez
Ex-Pakistan Cricketer Mohammad Hafeez

ಇಸ್ಲಾಮಾಬಾದ್​: ಪಾಕಿಸ್ತಾನದಲ್ಲಿ ರಾಜಕೀಯ ಅರಾಜಕತೆ ಉಂಟಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕಳೆದ ಕೆಲ ದಿನಗಳ ಹಿಂದೆ ಇಮ್ರಾನ್ ಖಾನ್​​ ಅವರನ್ನ ಪ್ರಧಾನಿ ಹುದ್ದೆಯಿಂದ ಪದಚ್ಯುತಿಗೊಳಿಸಿ, ಶೆಹಬಾಜ್ ಷರೀಫ್ ಆ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಇದರ ಮಧ್ಯೆ, ಜನಸಾಮಾನ್ಯರು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಇದೇ ವಿಷಯವನ್ನಿಟ್ಟುಕೊಂಡು ಪಾಕ್​ ಮಾಜಿ ಕ್ರಿಕೆಟರ್​ ಟ್ವೀಟ್ ಮಾಡಿದ್ದಾರೆ.

ಮೂರು ಮಾದರಿ ಕ್ರಿಕೆಟ್​​ನಲ್ಲಿ ಪಾಕ್​ ತಂಡ ಪ್ರತಿನಿಧಿಸಿರುವ ಮೊಹಮ್ಮದ್ ಹಫೀಜ್ ಟ್ವೀಟ್ ಮಾಡಿದ್ದು, ಲಾಹೋರ್​ನ ಯಾವುದೇ ಪೆಟ್ರೋಲ್ ಪಂಪ್​​​ನಲ್ಲಿ ತೈಲ ಇಲ್ಲ, ಎಟಿಎಂಗಳಲ್ಲಿ ಹಣ ಸಿಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಪಾಕಿಸ್ತಾನದಲ್ಲಿ ಸಾಮಾನ್ಯ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದು, ಪ್ರಮುಖ ರಾಜಕಾರಣಿಗಳಿಗೆ ಟ್ಯಾಗ್ ಮಾಡಿದ್ದಾರೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾಕ್​ ​ಆಲ್‌ರೌಂಡರ್ ಮೊಹಮ್ಮದ್ ಹಫೀಜ್ ಗುಡ್​ ಬೈ

ಹಫೀಜ್ ಮಾಡಿರುವ ಟ್ವೀಟ್: ಲಾಹೋರ್​ನ ಯಾವುದೇ ಪೆಟ್ರೋಲ್ ಬಂಕ್​ನಲ್ಲಿ ಪೆಟ್ರೋಲ್ ಹಾಗೂ ಎಟಿಎಂಗಳಲ್ಲಿ ನಗದು ಲಭ್ಯ ಇಲ್ಲವೇ? ಜನಸಾಮಾನ್ಯರು ರಾಜಕೀಯ ನಿರ್ಧಾರಗಳಿಂದ ಬಳಲುತ್ತಿರುವುದು ಯಾಕೆ? ಎಂದು ತಿಳಿಸಿದ್ದಾರೆ. ಈ ಟ್ವೀಟ್​ ಅನ್ನು ಮಾಜಿ ಪ್ರಧಾನಿ ಇಮ್ರಾನ್ ಖಾನ್​, ಹಾಲಿ ಪ್ರಧಾನಿ ಶೆಹಬಾಜ್​ ಷರೀಫ್​​​ ಸೇರಿದಂತೆ ಅನೇಕ ರಾಜಕಾರಣಿಗಳಿಗೆ ಟ್ಯಾಗ್ ಮಾಡಿದ್ದಾರೆ.

ಇಮ್ರಾನ್ ಖಾನ್​ ಅವರನ್ನ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಿದ ಬಳಿಕ ಶೆಹಬಾಜ್ ಷರೀಫ್ ಕಳೆದ ಏಪ್ರಿಲ್ ತಿಂಗಳಲ್ಲಿ​ ಪಾಕ್​ನ 23ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಪಾಕ್ ತಂಡದ ಪರ ಮೂರು ಮಾದರಿ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಹಫೀಜ್​​ 12,000ಕ್ಕೂ ಹೆಚ್ಚು ರನ್​​ಗಳಿಸಿದ್ದು, 250ಕ್ಕೂ ಅಧಿಕ ವಿಕೆಟ್ ಪಡೆದಿದ್ದಾರೆ. ಹಫೀಜ್​ 55 ಟೆಸ್ಟ್‌, 218 ಏಕದಿನ ಹಾಗೂ 119 ಟಿ - 20 ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ.

ಪಾಕಿಸ್ತಾನದ ನಾಯಕನಾಗಿ ಸಹ ಅವರು ಸೇವೆ ಸಲ್ಲಿಸಿದ್ದಾರೆ. 2003ರಲ್ಲಿ ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಪದಾರ್ಪಣೆ ಮಾಡಿದ್ದ ಮೊಹಮ್ಮದ್ ಹಫೀಜ್ 2022ರ ಜನವರಿ ತಿಂಗಳಲ್ಲಿ ಕ್ರಿಕೆಟ್‌ನಿಂದ ನಿವೃತ್ತಿ ಪಡೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.