ETV Bharat / international

ಪ್ಲಾಟಿನಂ ಗಣಿಯಲ್ಲಿ ಎಲಿವೇಟರ್ ಕುಸಿತ: 11 ಕಾರ್ಮಿಕರ ಸಾವು, 75 ಜನರಿಗೆ ಗಾಯ - ಎಲಿವೇಟರ್ ಕುಸಿದು ಕಾರ್ಮಿಕರು ಸಾವು

Elevator Drop At Platinum Mine: ದಕ್ಷಿಣ ಆಫ್ರಿಕಾದ ರಸ್ಟೆನ್‌ಬರ್ಗ್‌ನಲ್ಲಿ ಪ್ಲಾಟಿನಂ ಗಣಿಯಲ್ಲಿ ಎಲಿವೇಟರ್ ಕುಸಿದು 11 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಜರುಗಿದೆ.

Elevator drop at platinum mine in South Africa kills 11 workers, injures 75
ಪ್ಲಾಟಿನಂ ಗಣಿಯಲ್ಲಿ ಎಲಿವೇಟರ್ ಕುಸಿತ: 11 ಕಾರ್ಮಿಕರ ಸಾವು, 75 ಜನರಿಗೆ ಗಾಯ
author img

By ETV Bharat Karnataka Team

Published : Nov 28, 2023, 4:33 PM IST

ಜೋಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕಾ): ಪ್ಲಾಟಿನಂ ಗಣಿಯಲ್ಲಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದಾಗ ಏಕಾಏಕಿ ಎಲಿವೇಟರ್ ಕುಸಿದು ಬಿದ್ದ ಪರಿಣಾಮ 11 ಮಂದಿ ಸಾವನ್ನಪ್ಪಿ, 75 ಜನ ಗಾಯಗೊಂಡ ಘಟನೆ ದಕ್ಷಿಣ ಆಫ್ರಿಕಾದಲ್ಲಿ ಸೋಮವಾರ ಸಂಜೆ ನಡೆದಿದೆ. ಗಾಯಗೊಂಡ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗಣಿ ನಿರ್ವಾಹಕರು ತಿಳಿಸಿದ್ದಾರೆ.

ರಸ್ಟೆನ್‌ಬರ್ಗ್‌ನಲ್ಲಿರುವ ಇಂಪಾಲಾ ಪ್ಲಾಟಿನಂ ಹೋಲ್ಡಿಂಗ್ಸ್ (ಇಂಪ್ಲಾಂಟ್ಸ್) ಕಂಪನಿಯ ಗಣಿಯಲ್ಲಿ ಈ ದುರಂತ ಸಂಭವಿಸಿದೆ. ಕಾರ್ಮಿಕರು ಪಾಳಿ ಮುಗಿದ ಬಳಿಕ ಎಲಿವೇಟರ್​ನಲ್ಲಿ ಬರುತ್ತಿದ್ದಾಗ ಅದು ದಿಢೀರ್​ ಕುಸಿದು ಬಿದ್ದಿದೆ. ಪರಿಣಾಮ ಅದರಲ್ಲಿದ್ದ 11 ಜನ ಕಾರ್ಮಿಕರು ಮೃತಪಟ್ಟು, 75 ಮಂದಿ ಗಾಯಗೊಂಡಿದ್ದಾರೆ. ಈ ಕುರಿತು ಇಂಪಾಲಾ ಪ್ಲಾಟಿನಂ ಸಿಇಒ ನಿಕೊ ಮುಲ್ಲರ್​ ಪ್ರತಿಕ್ರಿಯಿಸಿ, ಇಂಪ್ಲಾಂಟ್ಸ್ ಗಣಿ ಇತಿಹಾಸದಲ್ಲೇ ಇದೊಂದು ಕರಾಳ ದಿನವಾಗಿದೆ. ಲಿಫ್ಟ್ ಕುಸಿದು ಬೀಳಲು ಕಾರಣವೇನು ಎಂಬುದರ ಕುರಿತು ಈಗಾಗಲೇ ತನಿಖೆ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾವು ಪ್ಲಾಟಿನಂನ ವಿಶ್ವದ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. 2022ರಲ್ಲಿ ಸಂಭವಿಸಿದ ಗಣಿಗಾರಿಕೆಗೆ ಸಂಬಂಧಿಸಿದ ದುರ್ಘಟನೆಗಳಲ್ಲಿ ಸುಮಾರು 49 ಮಂದಿ ಸಾವಿಗೀಡಾಗಿದ್ದರು. ಇದರ ಹಿಂದಿನ ವರ್ಷ 74 ಜನ ಕಾರ್ಮಿಕರು ಮೃತಪಟ್ಟಿದ್ದರು. ದಕ್ಷಿಣ ಆಫ್ರಿಕಾದ ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಗಣಿಗಾರಿಕೆ ಅಪಘಾತಗಳಿಂದ ಕಳೆದ ಎರಡು ದಶಕಗಳಲ್ಲಿ ಸಾವುಗಳ ಸಂಖ್ಯೆ ಕಡಿಮೆಯಾಗಿದೆ. 2000 ರಿಂದ ಈಚೆಗೆ ಸುಮಾರು 300 ಮಂದಿ ಅಸುನೀಗಿದ್ದಾರೆ.

ಇದನ್ನೂ ಓದಿ: ಪ್ರತಿದಿನ ಯುದ್ಧಕ್ಕೆ $260 ಮಿಲಿಯನ್ ಖರ್ಚು; ಸಂಕಷ್ಟದಲ್ಲಿ ಇಸ್ರೇಲ್ ಆರ್ಥಿಕತೆ

ಅಗ್ನಿ ದುರಂತದ ನೆನಪು: ದಕ್ಷಿಣ ಆಫ್ರಿಕಾದ ಅತಿದೊಡ್ಡ ನಗರ ಜೋಹಾನ್ಸ್‌ಬರ್ಗ್​​ನಲ್ಲಿ ಆಗಸ್ಟ್​ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿತ್ತು. ಈ ಬೆಂಕಿ ಅವಘಡದಲ್ಲಿ ಕನಿಷ್ಠ 73 ಜನರು ಸಾವಿಗೀಡಾಗಿ, 52 ಜನರು ಗಾಯಗೊಂಡಿದ್ದರು. ನಗರದ ಮಧ್ಯಭಾಗದಲ್ಲಿರುವ ಐದು ಅಂತಸ್ತಿನ ಕಟ್ಟಡದಲ್ಲಿ ತಡರಾತ್ರಿ ಆಗಸ್ಟ್ 30ರ ತಡರಾತ್ರಿ ಅಗ್ನಿ ಅನಾಹುತ ಉಂಟಾಗಿತ್ತು.

ಬಹುಮಹಡಿ ಕಟ್ಟಡ ವಲಸಿಗರಿಂದಲೇ ತುಂಬಿತ್ತು. ಈ ಹಿಂದೆ ಗಲಭೆಗಳ ಸಂದರ್ಭದಲ್ಲಿ ಕ್ರಿಮಿನಲ್‌ಗಳಿಂದ ಅಕ್ರಮಿಸಲ್ಪಟ್ಟ ಕಟ್ಟಡಗಳಲ್ಲಿ ಇದೂ ಒಂದಾಗಿತ್ತು. ಇಲ್ಲಿ ವಿದ್ಯುತ್​, ನೀರು ಸೇರಿ ಯಾವುದೇ ಮೂಲ ಸೌಕರ್ಯಗಳನ್ನು ಪುರಸಭೆ ಒದಗಿಸಿರಲಿಲ್ಲ. ಕಟ್ಟಡದೊಂದಿಗೆ ಸಣ್ಣ ಗುಂಪುಗಳಾಗಿ ನೂರಾರು ಜನರು ವಾಸ ಮಾಡುತ್ತಿದ್ದರು. ಇವರಲ್ಲಿ ಬಹುತೇಕರು ಅಕ್ರಮ ವಲಸಿಗರೇ ಆಗಿದ್ದರು. ಅಗ್ನಿ ದುರಂತದಲ್ಲಿ ಕಟ್ಟಡವು ಬಹುಪಾಲು ಸುಟ್ಟು ಹೋಗಿತ್ತು.

ಇದನ್ನೂ ಓದಿ: ಜೋಹಾನ್ಸ್‌ಬರ್ಗ್: ಬಹುಮಹಡಿ ಕಟ್ಟಡದಲ್ಲಿ ಭೀಕರ ಅಗ್ನಿ ದುರಂತ, 73 ಮಂದಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.