ಜಕಾರ್ತಾ (ಇಂಡೋನೇಷ್ಯಾ): ಇಂಡೋನೇಷ್ಯಾದ ಪ್ರಮುಖ ದ್ವೀಪವಾದ ಜಾವಾದಲ್ಲಿ ಸೋಮವಾರ ಸಂಭವಿಸಿದ ಭೂಕಂಪದಲ್ಲಿ ಸಾವಿನ ಸಂಖ್ಯೆ 46ಕ್ಕೆ ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 700 ಜನರು ಗಾಯಗೊಂಡಿದ್ದಾರೆ ಎಂದು ಕಂಪನದಿಂದ ಹೆಚ್ಚು ಹಾನಿಗೊಳಗಾದ ಪಟ್ಟಣದ ಸ್ಥಳೀಯ ಅಧಿಕಾರಿಯೊಬ್ಬರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸದ್ಯಕ್ಕೆ ದೊರೆತ ಮಾಹಿತಿಯ ಪ್ರಕಾರ, ಈ ಆಸ್ಪತ್ರೆಯಲ್ಲಿಯೇ ಸುಮಾರು 46ಕ್ಕೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 700 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಕಟ್ಟಡಗಳ ಅವಶೇಷಗಳಿಂದ ಸಿಕ್ಕಿಹಾಕಿಕೊಂಡಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸಿಯಾಂಜೂರ್ ಆಡಳಿತದ ಮುಖ್ಯಸ್ಥ ಹರ್ಮನ್ ಸುಹೆರ್ಮನ್ ಹೇಳಿದರು.
ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ಪ್ರಕಾರ ಸೋಮವಾರ ಇಂಡೋನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿದೆ. ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿಯೂ ಭೂಕಂಪನದ ಅನುಭವವಾಗಿದೆ. USGS ಪ್ರಕಾರ, ಭೂಕಂಪದ ಆಳವು ನೆಲದಿಂದ 10.0 ಕಿಮೀ ಆಳದಲ್ಲಿತ್ತು ಮತ್ತು ಸೋಮವಾರದಂದು ಸುಮಾರು 11:51:10 ಭೂಕಂಪ (UTC+05:30) ಸಂಭವಿಸಿದೆ.
ಇದನ್ನು ಓದಿ: ಆರ್ಥಿಕ ಹಿಂಜರಿತದ ನಿರೀಕ್ಷೆ: ಖರ್ಚು ಕಡಿಮೆ ಮಾಡಿ, ಹಣ ಉಳಿಸಿ ಎಂದ ಜೆಫ್ ಬೆಜೋಸ್