ETV Bharat / international

ಈಡೇರಿತು ಭಾರತೀಯರ ದಶಕದ ಕನಸು.. ದುಬೈನಲ್ಲಿ ಹಿಂದೂ ದೇವಾಲಯ ಉದ್ಘಾಟನೆ

author img

By

Published : Oct 5, 2022, 10:58 AM IST

ದುಬೈನಲ್ಲಿ ಹಿಂದೂ ದೇವಾಲಯ ನಿರ್ಮಾಣವಾಗುವ ಮೂಲಕ ಹಿಂದೂಗಳ ಹಲವು ವರ್ಷದ ಬೇಡಿಕೆ ಈಡೇರಿದಂತಾಗಿದೆ. ಈ ದೇವಾಲಯದಲ್ಲಿ ಹಲವು ಚರ್ಚ್‌ ಹಾಗೂ ಗುರುದ್ವಾರಗಳಿಗೆ.

Dubai new Hindu temple inaugurates
ಅರಬ್‌ ನಾಡಲ್ಲಿ ಹಿಂದೂ ದೇವಾಲಯ ಉದ್ಘಾಟನೆ

ದುಬೈ(ಯುಎಇ): ಅರಬ್‌ ನಾಡಲ್ಲಿ ಮೊಟ್ಟ ಮೊದಲ ಸ್ವತಂತ್ರ ಹಿಂದೂ ದೇವಾಲಯ ನಿರ್ಮಾಣಗೊಂಡಿದ್ದು, ವಿಜಯ ದಶಮಿಗೆ ಒಂದು ದಿನದ ಮೊದಲು ಉದ್ಘಾಟನೆಗೊಂಡಿದೆ. ದುಬೈನ ಜೆಬೆಲ್‌ ಆಲಿಯಲ್ಲಿರುವ ಆರಾಧನಾ ಗ್ರಾಮದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ. ಈ ಮೂಲಕ ಭಾರತೀಯರ ದಶಕದ ಕನಸು ಈಡೇರಿದೆ.

ಯುಎಇಯ ಸಹಿಷ್ಣುತೆ ಮತ್ತು ಸಹಬಾಳ್ವೆ ಸಚಿವ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಅವರು ಹೊಸ ಹಿಂದೂ ದೇವಾಲಯವನ್ನು ಉದ್ಘಾಟಿಸಿದರು ಎಂದು ಯುಎಇ ನಿವಾಸಿ ಹಸನ್ ಸಜ್ವಾನಿ ಟ್ವೀಟ್ ಮಾಡಿದ್ದಾರೆ.

Dubai new Hindu temple inaugurates
ಅರಬ್‌ ನಾಡಲ್ಲಿ ಹಿಂದೂ ದೇವಾಲಯ ಉದ್ಘಾಟನೆ

2 ವರ್ಷಗಳ ಅವಧಿಯಲ್ಲಿ ದೇವಾಲಯ ನಿರ್ಮಾಣ: ವಿಜಯದಶಮಿ ಹಬ್ಬದ ಒಂದು ದಿನ ಮುಂಚಿತವಾಗಿ ದೇವಾಲಯವನ್ನು ಉದ್ಘಾಟಿಸಲಾಯಿತು. ಈ ದೇವಾಲಯವು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅತ್ಯಂತ ಹಳೆಯ ಹಿಂದೂ ದೇವಾಲಯಗಳಲ್ಲಿ ಒಂದಾದ ಸಿಂಧಿ ಗುರು ದರ್ಬಾರ್ ದೇವಾಲಯದ ವಿಸ್ತರಣೆಯಾಗಿದೆ. ಅ.5 ರಿಂದ ದೇವಾಲಯವು ಸಾರ್ವಜನಿಕರ ದರ್ಶನಕ್ಕೆ ತೆರೆದಿರುತ್ತದೆ. ಹಿಂದೂಗಳ ಹಲವು ವರ್ಷದ ಬೇಡಿಕೆಯಂತೆ 2020 ರಲ್ಲಿ ದೇವಾಲಯಕ್ಕೆ ಅಡಿಪಾಯ ಹಾಕಲಾಗಿದ್ದು, ಎರಡು ವರ್ಷಗಳ ಅವಧಿಯಲ್ಲಿ ದೇವಾಲಯ ನಿರ್ಮಾಣಗೊಂಡಿದೆ.

Dubai new Hindu temple inaugurates
ದುಬೈನಲ್ಲಿ ಹಿಂದೂ ದೇವಾಲಯ ನಿರ್ಮಾಣ

ರಚನೆ ಹೀಗಿದೆ..: ದುಬೈನ ಹಿಂದೂ ದೇವಾಲಯದಲ್ಲಿ 16 ದೇವತೆಗಳ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಅಲಂಕೃತ ಕಂಬಗಳು, ಮುಂಭಾಗದಲ್ಲಿ ಹಿಂದೂ ಮತ್ತು ಅರೇಬಿಕ್ ಜ್ಯಾಮಿತಿಯ ವಿನ್ಯಾಸಗಳು ಮತ್ತು ಚಾವಣಿಯ ಮೇಲೆ ಗಂಟೆಗಳನ್ನು ಒಳಗೊಂಡಿದೆ. ದೇವಾಲಯದಲ್ಲಿ ಶ್ರೀ ಗುರು ಗ್ರಂಥ ಸಾಹಿಬ್ ಅನ್ನು ಸಹ ಸ್ಥಾಪಿಸಲಾಗಿದೆ. ಸೆಪ್ಟೆಂಬರ್ 1 ರಂದು ಎಲ್ಲಾ ಧರ್ಮಗಳ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ದೇವತೆಗಳ ವಿಗ್ರಹಗಳನ್ನು ಸ್ಥಾಪಿಸುವ ಮುಖ್ಯ ಸಭಾಂಗಣದಲ್ಲಿ ಕೇಂದ್ರ ಗುಮ್ಮಟದಲ್ಲಿ 3D-ಮುದ್ರಿತ ಗುಲಾಬಿ ಕಮಲವನ್ನು ಸ್ಥಾಪಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

QR-ಕೋಡ್-ಆಧಾರಿತ ಅಪಾಯಿಂಟ್‌ಮೆಂಟ್: ದೇವಸ್ಥಾನದಲ್ಲಿ ಭಕ್ತರ ಅನುಕೂಲಕ್ಕಾಗಿ ದೇವಾಲಯದ ಆಡಳಿತವು ತನ್ನ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ QR ಕೋಡ್​ ಆಧಾರಿತ ಅಪಾಯಿಂಟ್‌ಮೆಂಟ್ ವ್ಯವಸ್ಥೆಯನ್ನು ಸ್ಥಾಪಿಸಿದೆ. ದೇವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಇದು ದಸರಾ ಮತ್ತು ಇತರ ದಿನದಲ್ಲಿ ಬೆಳಗ್ಗೆ 6:30 ರಿಂದ ರಾತ್ರಿ 8ರ ವರೆಗೆ ತೆರೆದಿರುತ್ತದೆ. ಅಪಾಯಿಂಟ್‌ಮೆಂಟ್‌ ತೆಗೆದುಕೊಂಡಿರುವ ಭಕ್ತರಿಗೆ ಮಾತ್ರವೇ ದೇವರ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗುತ್ತಿದೆ ಎಂದು ದೇವಾಲಯದ ವೆಬ್‌ಸೈಟ್ ಪ್ರಕಟಣೆಯಲ್ಲಿ ತಿಳಿಸಿದೆ.

ಇದಲ್ಲದೇ, ದೇವಾಲಯದಲ್ಲಿ ಪ್ರತಿದಿನ 1200 ಭಕ್ತರಿಗೆ ಅವಕಾಶ ನೀಡಲಾಗುತ್ತದೆ. ಈ ದೇವಾಲಯವು ಜೆಬೆಲ್ ಅಲಿಯಲ್ಲಿ 'ಆರಾಧನಾ ಗ್ರಾಮ' ಎಂದು ಹೆಸರಿಸಿರುವ ಪ್ರದೇಶದಲ್ಲಿ ಇದೆ. ಈ ಪ್ರದೇಶದಲ್ಲಿ ಹಲವು ಚರ್ಚ್‌ಗಳು ಮತ್ತು ಗುರು ನಾನಕ್ ದರ್ಬಾರ್ ಗುರುದ್ವಾರ ಸೇರಿದಂತೆ ವಿವಿಧ ಧರ್ಮಗಳ ಪ್ರಾರ್ಥನಾ ಮಂದಿರಗಳಿವೆ ಎಂಬುದು ವಿಶೇಷ.

ಎಲ್ಲಾ ಧರ್ಮದ ಜನರನ್ನು ಸ್ವಾಗತಿಸುವ ದೇವಾಲಯವು 16 ದೇವತೆಗಳು, ಗುರು ಗ್ರಂಥ ಸಾಹಿಬ್, ಸಿಖ್ಖರ ಪವಿತ್ರ ಪುಸ್ತಕ ಮತ್ತು ಇತರ ಧಾರ್ಮಿಕ ಗ್ರಂಥಗಳನ್ನು ಒಳಗೊಂಡಿದೆ. ದುಬೈನಲ್ಲಿ ಉದ್ಘಾಟನೆಗೊಂಡ ಈ ದೇವಾಲಯ ಐತಿಹಾಸಿಕ ಮಹತ್ವವನ್ನು ಹೊಂದಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ.

ಅರಬ್‌ ರಾಷ್ಟ್ರಗಳ ಪೈಕಿ ಹೆಚ್ಚು ಧಾರ್ಮಿಕ ಸಹಿಷ್ಣುತೆಯನ್ನು ಹೊಂದಿರುವ ಅರಬ್‌ ಸಂಯುಕ್ತ ಸಂಸ್ಥಾನ(ಯುಎಎಇ), ಅನ್ಯ ಧರ್ಮೀಯರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತದೆ. ಅಲ್ಲದೇ ಅನ್ಯ ಧರ್ಮೀಯರ ಪೂಜಾ ಸ್ಥಳ ನಿರ್ಮಾಣ ಮಾಡುವಲ್ಲಿಯೂ ಯುಎಇ ಮುಂದಿದೆ. ಧಾರ್ಮಿಕ ಸಹಿಷ್ಣುತೆಯನ್ನು ಕಾಪಾಡಲೆಂದೇ ಯುಎಇ ಸರ್ಕಾರ ಸಹಿಷ್ಣುತೆ ಮತ್ತು ಸಹಬಾಳ್ವೆ ಇಲಾಖೆಯನ್ನು ಸ್ಥಾಪಿಸಿದೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ: ಮುಂದಿನ ವರ್ಷ ದೀಪಾವಳಿಗೆ ಅರಬ್​​ ನಾಡಲ್ಲಿ ಹೊಸ ಹಿಂದೂ ದೇವಾಲಯ ಓಪನ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.