ETV Bharat / international

ದೀಪಾವಳಿ ಹಬ್ಬಕ್ಕೆ ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಿದ ನ್ಯೂಯಾರ್ಕ್ ಮೇಯರ್​ - 2023 ರಿಂದ ದೀಪಾವಳಿಯಂದು ಸಾರ್ವಜನಿಕ ಶಾಲಾ ರಜೆ

2023 ರಿಂದ ನ್ಯೂಯಾರ್ಕ್ ನಗರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕ ಶಾಲಾ ರಜೆ ಘೋಷಿಸಲಾಗಿದೆ.

Diwali will be public school holiday  Diwali will be public school holiday in New York  Diwali will be public school holiday in next year  New York City Diwali holiday  ದೀಪಾವಳಿ ಹಬ್ಬಕ್ಕೆ ಪಬ್ಲಿಕ್​ ಸ್ಕೂಲ್​ ಹಾಲಿಡೇ  ಹಬ್ಬಕ್ಕೆ ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಿದ ನ್ಯೂಯಾರ್ಕ್  ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕ ಶಾಲಾ ರಜೆ  ದೇಶದೆಲ್ಲೆಡೆ ದೀಪಾವಳಿ ಹಬ್ಬ  ದೀಪಾವಳಿ ಹಬ್ಬದಾಚರಣೆಗೆ ಹೆಚ್ಚಿನ ಪ್ರಾಮುಖ್ಯತೆ  2023 ರಿಂದ ದೀಪಾವಳಿಯಂದು ಸಾರ್ವಜನಿಕ ಶಾಲಾ ರಜೆ  ಸರ್ಕಾರಿ ಶಾಲೆಗಳಲ್ಲಿ ದೀಪಾವಳಿ ಹಬ್ಬಕ್ಕೆ ರಜೆ
ದೀಪಾವಳಿ ಹಬ್ಬಕ್ಕೆ ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಿದ ನ್ಯೂಯಾರ್ಕ್
author img

By

Published : Oct 21, 2022, 7:14 AM IST

ನ್ಯೂಯಾರ್ಕ್​: ದೇಶದೆಲ್ಲೆಡೆ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ದೀಪಾವಳಿ ಹಬ್ಬದಾಚರಣೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ದೀಪಾವಳಿಯ ದಿನದಂದು ಲಕ್ಷ್ಮಿ ಮತ್ತು ಗಣಪತಿ ಪೂಜಿಸಲಾಗುತ್ತದೆ. ಇದರೊಂದಿಗೆ ಜನರು ತಮ್ಮ ಮನೆಗಳಲ್ಲಿ ದೀಪಗಳನ್ನು ಬೆಳಗಿಸುತ್ತಾರೆ ಮತ್ತು ಪ್ರಸಾದವನ್ನು ವಿತರಿಸುತ್ತಾರೆ.

ಭಾರತವನ್ನು ಹೊರತುಪಡಿಸಿ, ಪ್ರಪಂಚದ ಇತರ ಹಲವು ದೇಶಗಳಲ್ಲಿ ದೀಪಾವಳಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನಮ್ಮ ದೇಶದಲ್ಲಿ ಈ ಹಬ್ಬದ ಪ್ರಯುಕ್ತ ಸರ್ಕಾರಿ ರಜೆ ಘೋಷಿಸಲಾಗುತ್ತದೆ. ಅದರಂತೆ ಮುಂದಿನ ವರ್ಷದಿಂದ ನ್ಯೂಯಾರ್ಕ್​ನಲ್ಲಿ ದೀಪಾವಳಿ ಪ್ರಯುಕ್ತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗುತ್ತಿದೆ.

ನ್ಯೂಯಾರ್ಕ್ ನಗರವು 2023 ರಿಂದ ದೀಪಾವಳಿಯಂದು ಸಾರ್ವಜನಿಕ ಶಾಲಾ ರಜೆಯನ್ನು ಹೊಂದಿರುತ್ತದೆ. ಇದರಿಂದ ಮಕ್ಕಳಿಗೆ ದೀಪಾವಳಿ ಹಬ್ಬದ ಬಗ್ಗೆ ತಿಳಿವಳಿಕೆ ಮೂಡಲು ಉತ್ತೇಜಿಸುತ್ತದೆ ಎಂದು ಮೇಯರ್ ಎರಿಕ್ ಆಡಮ್ಸ್ ಹೇಳಿದ್ದಾರೆ. ನ್ಯೂಯಾರ್ಕ್ ಅಸೆಂಬ್ಲಿ ಸದಸ್ಯೆ ಜೆನ್ನಿಫರ್ ರಾಜ್‌ಕುಮಾರ್ ಮತ್ತು ನ್ಯೂಯಾರ್ಕ್ ಸಿಟಿ ಶಾಲೆಯ ಚಾನ್ಸೆಲರ್ ಡೇವಿಡ್ ಬ್ಯಾಂಕ್ಸ್ ಜೊತೆಗೂಡಿದ ಆಡಮ್ಸ್, ಪ್ರಚಾರದ ಸಮಯದಲ್ಲಿ ತಮ್ಮ ಸಂಭಾಷಣೆಯಲ್ಲಿ ದೀಪಾವಳಿ ಮತ್ತು ಬೆಳಕಿನ ಹಬ್ಬಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇನೆ ಎಂದು ಹೇಳಿದರು.

ನ್ಯೂಯಾರ್ಕ್ ನಗರದ ಸರ್ಕಾರಿ ಶಾಲೆಗಳಲ್ಲಿ ದೀಪಾವಳಿ ಹಬ್ಬಕ್ಕೆ ರಜೆ ಎಂದು ಘೋಷಿಸಿದ ಅವರು, ಇದು ಶೈಕ್ಷಣಿಕ ಕ್ಷಣವಾಗಿದೆ. ಏಕೆಂದರೆ ನಾವು ದೀಪಾವಳಿಯನ್ನು ಆಚರಿಸುವ ಮೂಲಕ ನಾವು ದೀಪಾವಳಿಯ ಬಗ್ಗೆ ಕಲಿಯಲು ಮಕ್ಕಳನ್ನು ಪ್ರೋತ್ಸಾಹಿಸಲಿದ್ದೇವೆ. ಬೆಳಕಿನ ಹಬ್ಬ ಎಂದರೇನು, ನಮ್ಮೊಳಗಿನ ದೀಪಗಳನ್ನು ಹೇಗೆ ಬೆಳಗಿಸಬೇಕು ಎಂಬುದರ ಕುರಿತು ನಾವು ಅವರೊಂದಿಗೆ ಮಾತನಾಡಲಿದ್ದೇವೆ. ಈದ್ ಮತ್ತು ಹೊಸ ವರ್ಷದಂತಹ ಸಾರ್ವಜನಿಕ ರಜಾದಿನಗಳನ್ನು ನಗರವು ಗುರುತಿಸಿದೆ ಎಂದು ಅವರು ಹೇಳಿದರು.

ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲ್ ಜನರಲ್ ರಣಧೀರ್ ಜೈಸ್ವಾಲ್, ದೀಪಾವಳಿ ಹಬ್ಬದ ಪ್ರಯುಕ್ತ ಶಾಲಾ ರಜೆಯನ್ನಾಗಿ ಘೋಷಿಸಿದ್ದಕ್ಕೆ ಆಡಮ್ಸ್‌ಗೆ ಧನ್ಯವಾದ ಅರ್ಪಿಸಿದರು. ಇದು ಭಾರತೀಯ-ಅಮೆರಿಕನ್ ಸಮುದಾಯದ ಬಹುಕಾಲದ ಬೇಡಿಕೆಯಾಗಿತ್ತು. ಈ ಮನ್ನಣೆಯು ನ್ಯೂಯಾರ್ಕ್ ನಗರದಲ್ಲಿನ ವೈವಿಧ್ಯತೆ ಮತ್ತು ಬಹುತ್ವಕ್ಕೆ ಆಳವಾದ ಅರ್ಥವನ್ನು ನೀಡುತ್ತದೆ. ಆದರೆ, ಎಲ್ಲ ವರ್ಗದ ಜನರು ಭಾರತೀಯ ನೀತಿ ಮತ್ತು ಪರಂಪರೆಯನ್ನು ಅನುಭವಿಸಲು, ಆಚರಿಸಲು ಮತ್ತು ಆನಂದಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ತಿಳಿಸಿದರು.

ನ್ಯೂಯಾರ್ಕ್‌ನ ರಾಜ್ಯ ಕಚೇರಿಗೆ ಆಯ್ಕೆಯಾದ ಮೊದಲ ದಕ್ಷಿಣ ಏಷ್ಯಾ - ಅಮೆರಿಕನ್ ಮಹಿಳೆ ಜೆನ್ನಿಫರ್ ರಾಜ್‌ಕುಮಾರ್, ನಮ್ಮ ಸಮಯ ಬಂದಿದೆ ಎಂದು ಹೇಳಲು ಹೆಮ್ಮೆಪಡುತ್ತೇನೆ. ದೀಪಗಳ ಹಬ್ಬವಾದ ದೀಪಾವಳಿಯನ್ನು ಆಚರಿಸುವ ಹಿಂದೂ, ಬೌದ್ಧ, ಸಿಖ್ ಮತ್ತು ಜೈನ ಧರ್ಮಗಳ 2,00,000 ಕ್ಕೂ ಹೆಚ್ಚು ಜನರು ಗುರುತಿಸುವ ಸಮಯ ಬಂದಿದೆ ಎಂದರು.

ನ್ಯೂಯಾರ್ಕ್ ನಗರವು ಇಡೀ ಜಗತ್ತಿಗೆ ನೆಲೆಯಾಗಿದೆ. ಎಲ್ಲಾ ಸಮುದಾಯಗಳು ಮಕ್ಕಳು ಇಲ್ಲಿ ಶಾಲೆಗೆ ಹೋಗುತ್ತಾರೆ. ನಮ್ಮ ಎಲ್ಲ ಯುವಕರನ್ನು ನಾವು ಗೌರವಿಸುವುದು ಮತ್ತು ಗುರುತಿಸುವುದು ಮುಖ್ಯವಾಗಿದೆ. ಆದ್ದರಿಂದ ದೀಪಾವಳಿಯನ್ನು ಆಚರಿಸಲು, ಉನ್ನತೀಕರಿಸಲು ಮತ್ತು ಜನರ ನಂಬಿಕೆಯನ್ನು ಗೌರವಿಸಲು ಇದೊಂದು ಅವಕಾಶವಾಗಿದೆ. ಬೆಳಕಿನ ಆಚರಣೆ, ಕತ್ತಲೆಯ ಮೇಲೆ ಬೆಳಕಿನ ವಿಜಯವು ವಿಮರ್ಶಾತ್ಮಕವಾಗಿ ಮುಖ್ಯವಾಗಿದೆ ಎಂದು ಬ್ಯಾಂಕ್‌ ಹೇಳಿದರು.

ಓದಿ: ದೀಪಾವಳಿ ಸಂದರ್ಭ ಪಟಾಕಿ ಸಿಡಿಸುವ ಕಾಲ 'ಮಿತಿ' ಮೀರಿದರೆ ಆಪತ್ತು!

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.