ETV Bharat / international

ಢಾಕಾ ಹೋಲ್​ಸೇಲ್​ ಮಾರ್ಕೆಟ್​ಗೆ ಬೆಂಕಿ: ಜ್ವಾಲೆ ನಂದಿಸಲು 700 ಅಗ್ನಿಶಾಮಕ ವಾಹನಗಳಿಂದ ಕಸರತ್ತು

author img

By

Published : Apr 5, 2023, 5:51 PM IST

ಢಾಕಾದಲ್ಲಿರುವ ಅತಿದೊಡ್ಡ ವ್ಯಾಪಾರಿ ಕಟ್ಟಡವೊಂದಕ್ಕೆ ಬೆಂಕಿ ಹೊತ್ತಿಕೊಂಡಿದೆ. 36 ತಾಸುಗಳ ನಂತರವೂ ಅಗ್ನಿಶಾಮಕ ವಾಹನಗಳು ಬೆಂಕಿ ಆರಿಸುವಲ್ಲಿ ನಿರತವಾಗಿವೆ.

700 firefighters work to douse massive Dhaka wholesale market fire

ಢಾಕಾ (ಬಾಂಗ್ಲಾದೇಶ) : ಸುಮಾರು 36 ಗಂಟೆಗಳ ಹಿಂದೆ ಬಾಂಗ್ಲಾದೇಶದ ಅತಿದೊಡ್ಡ ಸಗಟು ಮಾರುಕಟ್ಟೆಯಾದ ಢಾಕಾದ ಬಂಗಾಬಜಾರ್‌ನಲ್ಲಿ ಹೊತ್ತಿಕೊಂಡ ಬೃಹತ್ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಸುಮಾರು 700 ಅಗ್ನಿಶಾಮಕ ಸಿಬ್ಬಂದಿ ಬುಧವಾರವೂ ಕೆಲಸ ಮುಂದುವರೆಸಿದ್ದಾರೆ. ಅನೆಕ್ಸ್​ಕೊ ಹೆಸರಿನ ಟವರ್​ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ಕಟ್ಟಡದ ನಾಲ್ಕು, ಐದನೇ, ಆರನೇ ಮತ್ತು ಏಳನೇ ಮಹಡಿಗಳು ಗೋದಾಮುಗಳಾಗಿವೆ. ಅಗ್ನಿಶಾಮಕ ದಳದವರು ಈ ಮಹಡಿಗಳಲ್ಲಿನ ಬೆಂಕಿ ನಂದಿಸಲು ಶ್ರಮ ಪಡುತ್ತಿದ್ದಾರೆ.

ಘಟನೆಯ ಬಗ್ಗೆ ಮಾತನಾಡಿದ ಬಾಂಗ್ಲಾದೇಶದ ಅಗ್ನಿಶಾಮಕ ದಳದ ಮಹಾನಿರ್ದೇಶಕ (ಡಿಜಿ)ರಾಗಿರುವ ಬ್ರಿಗೇಡಿಯರ್ ಜನರಲ್ ಎಂ.ಡಿ.ಮೈನ್ ಉದ್ದೀನ್, ನಾವು 2019 ರಲ್ಲಿ ಈ ಕಟ್ಟಡವನ್ನು ದುರ್ಬಲ ಕಟ್ಟಡವೆಂದು ಘೋಷಿಸಿದ್ದೇವೆ. ನಂತರ ಇಲ್ಲಿ ವ್ಯಾಪಾರ ನಡೆಸದಂತೆ ನಾವು ಅವರಿಗೆ ಸುಮಾರು 10 ಬಾರಿ ನೋಟಿಸ್ ನೀಡಿದ್ದೇವೆ. ಇಷ್ಟಾದರೂ ಅವರು ಇಲ್ಲಿ ವ್ಯಾಪಾರ ಮುಂದುವರೆಸಿದ್ದಾರೆ ಎಂದು ಅವರು ಹೇಳಿದರು. ಬೆಂಕಿ ನಂದಿಸಲು ಶಾಹಿದುಲ್ಲಾ ಹಾಲ್‌ನಿಂದ ಪಂಪ್ ಮೂಲಕ ನೀರು ತರಬೇಕಿದೆ. ವಾಯುಸೇನೆ ಕೂಡ ಹತಿರ್‌ಜೀಲ್‌ನಿಂದ ಹೆಲಿಕಾಪ್ಟರ್‌ನಲ್ಲಿ ನೀರು ತಂದು ಬೆಂಕಿ ನಂದಿಸುವಲ್ಲಿ ಸಹಕರಿಸಿದೆ. ಬುರಿಗಂಗೆಯಿಂದಲೂ ನೀರು ತಂದಿದ್ದೇವೆ. ಮೂರು ಪಡೆಗಳ ಹೊರತಾಗಿ ವಾಸಾ ಕೂಡ ಈ ಕೆಲಸದಲ್ಲಿ ನಮಗೆ ಸಹಾಯ ಮಾಡಿದೆ ಎಂದು ಅವರು ತಿಳಿಸಿದರು.

ಮಂಗಳವಾರ ಬೆಳಗ್ಗೆ 6.10ಕ್ಕೆ ಬೆಂಕಿ ಹೊತ್ತಿಕೊಂಡಿದೆ. ಏತನ್ಮಧ್ಯೆ, ಬೆಂಕಿಯಿಂದ ನಷ್ಟ ಅನುಭವಿಸಿದ ವ್ಯಾಪಾರಿಗಳಿಗೆ ಆದಷ್ಟು ಹೆಚ್ಚಿನ ಮೊತ್ತದ ಪರಿಹಾರ ನೀಡುವುದಾಗಿ ಪ್ರಧಾನಿ ಶೇಖ್ ಹಸೀನಾ ಬುಧವಾರ ಭರವಸೆ ನೀಡಿದ್ದಾರೆ. ನಾವು ಅವರಿಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತೇನೆ ಮತ್ತು ಯಾವ ರೀತಿಯ ಹಾನಿಯಾಗಿದೆ ಎಂಬುದನ್ನು ಮೇಲ್ವಿಚಾರಣೆ ಮಾಡುತ್ತೇವೆ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದರು. ಬೆಂಕಿ ಅನಾಹುತವನ್ನು ಅತ್ಯಂತ ದುರಂತ ಘಟನೆ ಎಂದು ಬಣ್ಣಿಸಿದ ಹಸೀನಾ, ಈದ್‌ ಹಬ್ಬದ ಸಮಯದಲ್ಲಿಯೇ ಇಂಥ ಘಟನೆ ನಡೆದಿರುವುದು ಮತ್ತು ಅನೇಕ ವ್ಯಾಪಾರಿಗಳು ನಷ್ಟ ಅನುಭವಿಸಿರುವುದು ನೋವಿನ ಸಂಗತಿ ಎಂದು ಅವರು ನುಡಿದರು. ಅಗ್ನಿಶಾಮಕ ದಳದ ಪ್ರಧಾನ ಕಛೇರಿ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದವರ ವಿರುದ್ಧವೂ ವಾಗ್ದಾಳಿ ನಡೆಸಿದ ಪ್ರಧಾನಿ, ಶೀಘ್ರವೇ ಅವರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಬೆಂಕಿ ಹೊತ್ತಿಕೊಂಡ ಎರಡೇ ನಿಮಿಷಗಳಲ್ಲಿ ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪಿತ್ತು. ಈ ಸಂದರ್ಭದಲ್ಲಿ ಅಂಗಡಿಕಾರರು ತಮ್ಮ ಅಂಗಡಿಗಳಿಂದ ಸರಕುಗಳನ್ನು ಹೊರಗೆಸೆದು ಆದಷ್ಟೂ ವಸ್ತುಗಳನ್ನು ರಕ್ಷಣೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡು ಬಂದಿತ್ತು. ಆದಾಗ್ಯೂ ಬೆಂಕಿ ಅನಾಹುತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಢಾಕಾ ಮಾಧ್ಯಮಗಳು ವರದಿ ಮಾಡಿವೆ. ಮಾರುಕಟ್ಟೆಯಲ್ಲಿ 6,000 ಕ್ಕೂ ಹೆಚ್ಚು ಜನರು ಅಂಗಡಿಗಳನ್ನು ಹೊಂದಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಯಾವುದೇ ಅಗ್ನಿಶಾಮಕ ವ್ಯವಸ್ಥೆ ಇಲ್ಲ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಹೊತ್ತಿಕೊಂಡಿರುವ ಘಟನೆ ಪೂರ್ವ ಯೋಜಿತ ಎಂದು ಕೆಲವು ಅಂಗಡಿ ಮಾಲೀಕರು ಹೇಳಿದ್ದಾರೆ ಮತ್ತು ಘಟನೆಯ ಬಗ್ಗೆ ತನಿಖೆಗೆ ಒತ್ತಾಯಿಸಿದರು.

ಇದನ್ನೂ ಓದಿ : ಕೋಲ್ಕತ್ತಾ-ಢಾಕಾ ಬಸ್ ಸೇವೆ ಮತ್ತೆ ಆರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.