ಬಫಲೋ (ನ್ಯೂಯಾರ್ಕ್): ಬಾಂಬ್ ಸೈಕ್ಲೋನ್ ಪರಿಣಾಮ ಪಶ್ಚಿಮ ನ್ಯೂಯಾರ್ಕ್‌ನ ಬಫಲೋ ಹಿಮಪಾತದಿಂದ ಸತ್ತವರ ಸಂಖ್ಯೆ 27 ಕ್ಕೆ ಏರಿಕೆಯಾಗಿದೆ. ಅಮೆರಿಕದ 50ಕ್ಕೂ ಹೆಚ್ಚಿನ ಸ್ಟೇಟ್ಸ್‌ಗಳು ತೀವ್ರ ಚಳಿಗಾಳಿಯ ಹೊಡೆತಕ್ಕೆ ಗುರಿಯಾಗಿದೆ. ಇದು ಅಮೆರಿಕದ ಅತ್ಯಂತ ಕೆಟ್ಟ ಹವಾಮಾನ ವೈಪರೀತ್ಯ ಎಂದು ಕರೆಯಲಾಗುತ್ತಿದೆ.
ಬಾಂಬ್ ಸೈಕ್ಲೋನ್ ಎನ್ನುವ ಚಳಿಗಾಲದ ಚಂಡಮಾರುತವು ಅಮೆರಿಕಕ್ಕೆ ಬಂದು ಅಪ್ಪಳಿಸಿದೆ. ಬಫಲೋ ಸುತ್ತಮುತ್ತ ಹಿಮಪಾತದಿಂದ ಆಗುತ್ತಿರುವ ಅನಾರೋಗ್ಯಕ್ಕೆ ತುರ್ತು ವೈದ್ಯಕೀಯ ಸೌಲಭ್ಯ ಮತ್ತು ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಶೀತ ಮಾರುತದಿಂದ ತೀವ್ರ ಸಮಸ್ಯೆಗೆ ಒಳಗಾದ ರಾಜ್ಯಕ್ಕೆ ಸೋಮವಾರದಿಂದ ಫೆಡರಲ್ ನೆರವು ನೀಡಲಾಗುತ್ತಿದೆ. ನಮ್ಮ ಪ್ರಾರ್ಥನೆ ಸಂತ್ರಸ್ತರ ಕುಟುಂಬಗಳೊಂದಿಗೆ ಇದೆ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ರಾಷ್ಟ್ರವ್ಯಾಪಿ ಚಂಡಮಾರುತದಿಂದ ಕನಿಷ್ಠ 50 ಸಾವುಗಳು ಸಂಭವಿಸಿರಬಹುದು ಅಥವಾ ಇದಕ್ಕಿಂತಲೂ ಹೆಚ್ಚಾಗಿರಬಹುದು. ನಮ್ಮ ಜೀವಿತಾವಧಿಯಲ್ಲಿ ಬಹುಶಃ ಅತ್ಯಂತ ಕೆಟ್ಟ ಚಂಡಮಾರುತ ಇದು. ಕೆಲ ಜನರು ತಮ್ಮ ಕಾರುಗಳಲ್ಲಿ ಎರಡು ದಿನಗಳಿಗಿಂತ ಹೆಚ್ಚು ಕಾಲದಿಂದ ಇದ್ದಾರೆ. ಸೋಮವಾರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿವೆ ಎಂದು ಕಾರ್ಯನಿರ್ವಾಹಕ ಎರಿ ಕೌಂಟಿಯ ಹೇಳಿದ್ದಾರೆ.
ಬಹಳಾ ವರ್ಷಗಳ ನಂತರ ಈ ರೀತಿಯ ಹವಾಮಾನ ವೈಪರೀತ್ಯ ಉಂಟಾಗಿದೆ. ಇದರು ಎಂದು ನಿಲ್ಲಲಿದೆ ಎಂದು ಅಂದಾಜಿಸಲು ಸಾಧ್ಯವಾಗುತ್ತಿಲ್ಲ. ಹಿಮಪಾತದ ತೀವ್ರತೆ ಇನ್ನೂ ಕಡಿಮೆಯಾಗಿಲ್ಲ. ಕೆಲವು ಪ್ರದೇಶಗಳಲ್ಲಿ 23 ಸೆಂಟಿಮೀಟರ್‌ಗಳಷ್ಟು ಹಿಮ ಬೀಳಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೌಲ್ಡರ್‌ನ ಕೊಲೊರಾಡೋ ವಿಶ್ವವಿದ್ಯಾಲಯದ ರಾಷ್ಟ್ರೀಯ ಹಿಮ ಮತ್ತು ಐಸ್ ಡೇಟಾ ಕೇಂದ್ರದ ನಿರ್ದೇಶಕ ಮಾರ್ಕ್ ಸೆರೆಜ್, ಹವಾಮಾನ ಬದಲಾವಣೆಯ ಬಿಕ್ಕಟ್ಟು ಚಂಡಮಾರುತದ ತೀವ್ರತೆಗೆ ಕಾರಣ. ವಾತಾವರಣವು ಹೆಚ್ಚಿನ ನೀರಿನ ಆವಿಯನ್ನು ಸಾಗಿಸಬಲ್ಲದು ಹೀಗಾಗಿ ಶೀತಮಾರುತದ ಪ್ರಮಾಣ ಹೆಚ್ಚಿದೆ ಎಂದು ಅಭಿಪ್ರಾಯಿಸಿದ್ದಾರೆ.
ಗ್ರೇಟ್ ಲೇಕ್ಸ್‌ನಿಂದ ಮತ್ತೆ ಚಳಿಗಾಳಿ ಆರಂಭ: ಕಳೆದ ವಾರಕ್ಕೆ ಹೋಲಿಸಿದರೆ ಶೀತಮಾರುತ ಕಡಿಮೆ ಆಗುವ ಮುನ್ಸೂಚನೆ ಇತ್ತು. ಆಂದರೆ ಬಲವಾದ ಚಂಡಮಾರುತದಲ್ಲಿ ವಾತಾವರಣದ ಒತ್ತಡವು ಬೇಗನೆ ಕಡಿಮೆಯಾದಾಗ ಬಾಂಬ್ ಸೈಕ್ಲೋನ್ ದುರ್ಬಲಗೊಂಡಿದೆ. ಗ್ರೇಟ್ ಲೇಕ್ಸ್ ಬಳಿ ಮತ್ತೆ ತೀವ್ರತೆ ಪಡೆದುಕೊಂಡಿದ್ದು, ಹಿಮಪಾತ ಮುಂದುವರೆದಿದೆ.
ತೀವ್ರ ಹವಾಮಾನ ವೈಪರಿತ್ಯವು ಕೆನಡಾದ ಬಳಿಯ ಗ್ರೇಟ್ ಲೇಕ್ಸ್‌ನಿಂದ ಮೆಕ್ಸಿಕೋದ ಗಡಿಯ ರಿಯೊ ಗ್ರಾಂಡೆವರೆಗೆ ವಿಸ್ತರಿಸಿದೆ. ಅಮೆರಿಕದ ಜನಸಂಖ್ಯೆಯ ಸುಮಾರು 60 ರಷ್ಟು ಜನರು ಶೀತಮಾರುತದಿಂದ ಬಾಧಿತರಾಗಿದ್ದಾರೆ ಎಂದು ರಾಷ್ಟ್ರೀಯ ಹವಾಮಾನ ಸೇವೆಯ ಹವಾಮಾನಶಾಸ್ತ್ರಜ್ಞ ಆಷ್ಟನ್ ರಾಬಿನ್ಸನ್ ಕುಕ್ ಹೇಳಿದ್ದಾರೆ.
ವಿಮಾನ ಸಂಚಾರ ಬಂದ್: ಸೋಮವಾರ ಮಧ್ಯಾಹ್ನ 3 ಗಂಟೆಯ ವೇಳೆಗೆ ಸುಮಾರು 3,410 ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ. 22 ಸಾವಿರಕ್ಕೂ ಅಧಿಕ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ದಟ್ಟ ಮಂಜು ಮುಸುಕಿದ್ದು, ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ. ಆದಾಗ್ಯೂ ಹಲವು ಪ್ರದೇಶಗಳಲ್ಲಿ ಅಪಘಾತಗಳು ಸಂಭವಿಸಿ ಜನರು ಪ್ರಾಣ ಕಳೆದುಕೊಂಡಿದ್ದಾಗಿ ವರದಿಯಾಗಿದೆ.
ತಾಪಮಾನ ಕೇಂದ್ರಗಳಲ್ಲಿ ಜನರು: ಇನ್ನು ಅತ್ಯುಗ್ರ ಚಳಿಯಿಂದಾಗಿ ವೃದ್ಧರು ಮತ್ತು ಮಕ್ಕಳನ್ನು ಬಾಧಿಸುತ್ತಿದ್ದು, ರಕ್ಷಣೆಗಾಗಿ ಅಲ್ಲಿನ ಸರ್ಕಾರಗಳು ತಾಪಮಾನ ಕೇಂದ್ರಗಳನ್ನು (ಡೆಟ್ರಾಯಿಟ್)ಆರಂಭಿಸಿದೆ. ಜನರನ್ನು ಚಳಿಯಿಂದ ರಕ್ಷಿಸಲು ಕಾರ್ಯಕರ್ತರು ಹರಸಾಹಸ ಪಡುತ್ತಿದ್ದು, ವಯೋವೃದ್ಧರು ಮತ್ತು ಮಕ್ಕಳು ಡೆಟ್ರಾಯಿಟ್‌ನಲ್ಲಿ ಆಶ್ರಯ ನೀಡಲಾಗುತ್ತಿದೆ. ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದ್ದು, ಆನ್ಲೈನ್ ಮೂಲಕ ಪಾಠ ಪ್ರವಚನ ನಡೆಸಲಾಗುತ್ತಿದೆ.
-60 ಡಿಗ್ರಿಗೆ ತಾಪಮಾನ ಇಳಿಕೆ!: ಹಿಮಪಾತ, ಸುಳಿಗಾಳಿಯಿಂದಾಗಿ ಅಮೆರಿಕದಲ್ಲಿ ತಾಪಮಾನ -60 ಡಿಗ್ರಿಗೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿತ್ತು. ಇದು ಮಂಗಳ ಗ್ರಹಕ್ಕಿಂತಲೂ(-80 ಡಿಗ್ರಿ ಸೆಲ್ಸಿಯಸ್) ತುಸು ಕಡಿಮೆ. ಇದು ಒಂದು ತಲೆಮಾರಿನಲ್ಲಿ ಒಮ್ಮೆ ಆಗುವ ಪ್ರಕೃತಿ ವೈಪರೀತ್ಯವಾಗಿದ್ದು, ಈ ಬಾರಿ ಅಮೆರಿಕಕ್ಕೆ ಬಂದೊದಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಚಳಿಗಾಲದ ಚಂಡಮಾರುತಕ್ಕೆ ಅಮೆರಿಕ ತತ್ತರ: 18 ಮಂದಿ ಬಲಿ-ವಿಮಾನ ಸಂಚಾರ ರದ್ದು