ETV Bharat / international

ಮಲಾವಿಯಲ್ಲಿ ಭೀಕರ ಚಂಡಮಾರುತ: ಸಾವಿನ ಸಂಖ್ಯೆ 1,000 ಗಡಿ ದಾಟುವ ಸಾಧ್ಯತೆ

ಮಲಾವಿಯಲ್ಲಿ ಫ್ರೆಡ್ಡಿ ಚಂಡಮಾರುತದ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ.

Death toll from cyclone in Malawi may hit 1000
ಮಲಾವಿಯಲ್ಲಿ ಚಂಡಮಾರುತ : ಸಾವಿನ ಸಂಖ್ಯೆ 1000 ಗಡಿ ದಾಟುವ ಸಾಧ್ಯತೆ
author img

By

Published : Mar 23, 2023, 8:03 AM IST

ಲಿಲೋಂಗ್ವೆ (ಮಲಾವಿ) : ಫ್ರೆಡ್ಡಿ ಎಂಬ ಉಷ್ಣವಲಯ ಚಂಡಮಾರುತದ ಅಬ್ಬರಕ್ಕೆ ಆಫ್ರಿಕಾ ಖಂಡದ ಆಗ್ನೇಯ ಭಾಗದಲ್ಲಿರುವ ಪುಟ್ಟ ದೇಶ ಮಲಾವಿ ತತ್ತರಿಸಿದೆ. ಸಾವಿನ ಸಂಖ್ಯೆ 1,000ದ ಗಡಿ ದಾಟುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಲಾವಿಯ ವಿಪತ್ತು ನಿರ್ವಹಣಾ ವ್ಯವಹಾರಗಳ ಇಲಾಖೆ ಮಾಹಿತಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಮುಂದುವರೆದಿದೆ. ಇದುವರೆಗೆ ಹಲವು ಮೃತದೇಹಗಳನ್ನು ಅವಶೇಷಗಳಡಿಯಿಂದ ಹೊರ ತೆಗೆಯಲಾಗಿದೆ. ಇನ್ನೂ ಹಲವು ಮಂದಿ ನಾಪತ್ತೆಯಾಗಿರುವ ಕುರಿತು ತಿಳಿಸಿದೆ.

ಕಳೆದ ಸೋಮವಾರ ಒಟ್ಟು 499 ಮೃತದೇಹಗಳನ್ನು ಪತ್ತೆ ಹಚ್ಚಲಾಗಿತ್ತು. ಮಂಗಳವಾರದಂದು ಈ ಸಂಖ್ಯೆ 507ಕ್ಕೆ ತಲುಪಿದೆ. ಸೋಮವಾರ 427 ಮಂದಿ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿತ್ತು. ಮಂಗಳವಾರ ಈ ಸಂಖ್ಯೆ 537ಕ್ಕೇರಿದೆ. ಇದುವರೆಗೂ ಒಟ್ಟು 1,332 ಮಂದಿ ಚಂಡಮಾರುತದಿಂದ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಚಂಡಮಾರುತದಿಂದ ಸ್ಥಳಾಂತರಿಸಲ್ಪಟ್ಟ ಜನರ ಸಂಖ್ಯೆ 5,08,244 ರಿಂದ 5,53,614 ರಷ್ಟಿದೆ. ಹೆಚ್ಚಿದ ನಿರಾಶ್ರಿತರಿಗೆ ವಸತಿ ಸೌಲಭ್ಯ ಕಲ್ಪಿಸಲು ಹೆಚ್ಚುವರಿ ಒಂಬತ್ತು ಶಿಬಿರಗಳನ್ನು ಸ್ಥಾಪಿಸಲಾಗಿದೆ. ಸದ್ಯ ನಿರಾಶ್ರಿತರಿಗಾಗಿ ಒಟ್ಟು ಶಿಬಿರಗಳನ್ನು 543ಕ್ಕೆ ತರಲಾಗಿದೆ ಎಂದು ಚೀನಾದ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಫ್ರೆಡ್ಡಿ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶದಲ್ಲಿ ಮಲಾವಿ ಪೊಲೀಸರು ಹಾಗೂ ರಕ್ಷಣಾ ಪಡೆ ಭರದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಕಾರ್ಯಾಚರಣೆಯಲ್ಲಿ ಬ್ರಿಟಿಷ್, ಜಾಂಬಿಯನ್ ಮತ್ತು ತಾಂಜೇನಿಯಾದ ತಜ್ಞರು ಪಾಲ್ಗೊಂಡಿದ್ದಾರೆ. ಚಂಡಮಾರುತದಿಂದ ತೊಂದರೆಗೀಡಾಗಿರುವ ಮಲಾವಿಗೆ ನೆರೆಯ ಹಲವು ದೇಶಗಳು ಧಾವಿಸಿವೆ. ವಿಶ್ವಸಂಸ್ಥೆ, ಇತರ ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ಮಾನವೀಯ ನೆರವು ಮತ್ತು ಬೆಂಬಲವು ಹರಿದುಬರುತ್ತಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ: ವಿಶ್ವದೆಲ್ಲೆಡೆ ಪ್ರಕೃತಿ ವಿಕೋಪಗಳು ನಡೆಯುತ್ತಿದ್ದು, ಭೂಕಂಪನ, ಭೂಕುಸಿತ, ಚಂಡ ಮಾರುತ ಇತ್ಯಾದಿಗಳು ವರದಿಯಾಗುತ್ತಲೇ ಇವೆ. ಈ ಹಿಂದೆ ಟಿರ್ಕಿಯಲ್ಲಿ ಭಾರಿ ಭೂಕಂಪನ ಉಂಟಾಗಿ ಸಾವಿರಾರು ಮಂದಿ ಸಾವನ್ನಪ್ಪಿದ್ದರು. ಅಷ್ಟೇ ಅಲ್ಲದೇ ಪಾಕಿಸ್ತಾನದಲ್ಲಿಯೂ ಪ್ರಬಲ ಭೂಕಂಪನ ಉಂಟಾಗಿದೆ.

ಮಂಗಳವಾರ ಪಾಕಿಸ್ತಾನದ ಕೆಲವು ಪ್ರದೇಶಗಳಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್​ ಮಾಪಕದಲ್ಲಿ ಸುಮಾರು 6.8 ತೀವ್ರತೆ ದಾಖಲಾಗಿದೆ. ಕನಿಷ್ಠ 11 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಫ್ಘಾನಿಸ್ತಾನದ ಹಿಂಡುಕುಶ್​ ಪ್ರದೇಶವು ಭೂಕಂಪನದ ಕೇಂದ್ರಬಿಂದುವಾಗಿದ್ದು, ಈ ಪ್ರದೇಶದ 180 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ಯುಎಸ್​ ಜಿಯೋಲಾಜಿಕಲ್​ ಸರ್ವೆ ಮಾಹಿತಿ ನೀಡಿದೆ.

ಅಲ್ಲದೇ ಇಲ್ಲಿನ ಇಸ್ಲಾಮಾಬಾದ್, ಪೇಶಾವರ, ಚಾರ್ಸದ್ದಾ, ಲಾಹೋರ್ ಮತ್ತು ರಾವಲ್ಪಿಂಡಿ ಸೇರಿದಂತೆ ವಿವಿಧ ನಗರ ಪ್ರದೇಶದ ಜನರಿಗೆ ಕಂಪನದ ಅನುಭವವಾಗಿದೆ. ಜೊತೆಗೆ ಗುಜ್ರಾನ್‌ವಾಲಾ, ಗುಜರಾತ್, ಸಿಯಾಲ್‌ಕೋಟ್, ಕೋಟ್ ಮೊಮಿನ್, ಮಧ್ ರಂಝಾ, ಚಕ್ವಾಲ್ ಕೆಲವು ಪ್ರದೇಶಗಳಲ್ಲಿಯೂ ಭೂಕಂಪನ ಉಂಟಾಗಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ : ನ್ಯೂಜಿಲೆಂಡ್‌ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪನ: ಸುನಾಮಿ ಭೀತಿ ಇಲ್ಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.