ETV Bharat / international

ತಲೆ ಕಡಿದು ಮರಣದಂಡನೆ: 10 ದಿನದಲ್ಲಿ 12 ಆರೋಪಿಗಳಿಗೆ ಶಿಕ್ಷೆ ನೀಡಿದ ಸೌದಿ ಅರೇಬಿಯಾ - ಅತಿದೊಡ್ಡ ಸಾಮೂಹಿಕ ಮರಣದಂಡನೆ

ಕೊಲೆ, ಭಯೋತ್ಪಾದನೆ ಹೀಗೆ ವಿವಿಧ ಅಪರಾಧಗಳಲ್ಲಿ ಭಾಗಿಯಾದ 81 ಆರೋಪಿಗಳಿಗೆ ಈ ವರ್ಷದ ಮಾರ್ಚ್​​ನಲ್ಲಿ ಸೌದಿ ಅರೇಬಿಯಾ ಮರಣ ದಂಡನೆ ನೀಡಿತ್ತು. ಇತ್ತೀಚಿನ ಇತಿಹಾಸದಲ್ಲೇ ಇದು ಅತಿದೊಡ್ಡ ಪ್ರಮಾಣದ ಮರಣದಂಡನೆಯಾಗಿದೆ.

ತಲೆ ಕಡಿದು ಮರಣದಂಡನೆ: 10 ದಿನದಲ್ಲಿ 12 ಆರೋಪಿಗಳನ್ನು ಸಾಯಿಸಿದ ಸೌದಿ ಅರೇಬಿಯಾ
Death penalty by beheading: Saudi Arabia executed 12 accused in 10 days
author img

By

Published : Nov 23, 2022, 11:17 AM IST

ನವ ದೆಹಲಿ: ಡ್ರಗ್ಸ್​ ಸಂಬಂಧಿತ ಅಪರಾಧಗಳಿಗಾಗಿ ಸೌದಿ ಅರೇಬಿಯಾ ಕಳೆದ ಹತ್ತು ದಿನಗಳಲ್ಲಿ 12 ಜನರಿಗೆ ಮರಣ ದಂಡನೆ ವಿಧಿಸಿದೆ. ಇದರಲ್ಲಿ ಕೆಲವರನ್ನು ಕತ್ತಿಯಿಂದ ತಲೆ ಕಡಿದು ಸಾಯಿಸಲಾಗಿದೆ ಎಂದು ವರದಿ ತಿಳಿಸಿದೆ. ಹಿಂಸೆಗೆ ಸಂಬಂಧಿಸಿದ ಡ್ರಗ್ಸ್​ ಆರೋಪದಲ್ಲಿ ಜೈಲಿಗಟ್ಟಲಾಗಿದ್ದ 12 ಆರೋಪಿಗಳಿಗೆ ಮರಣ ದಂಡನೆ ವಿಧಿಸಲಾಗಿತ್ತು. ಇದರಲ್ಲಿ ಪಾಕಿಸ್ತಾನದ ಮೂವರು, ಸಿರಿಯಾದ ನಾಲ್ವರು, ಜೋರ್ಡಾನಿನ ಇಬ್ಬರು ಮತ್ತು ಮೂವರು ಸೌದಿ ಅರೇಬಿಯಾದ ನಾಗರಿಕರು ಸೇರಿದ್ದಾರೆ.

ಕೊಲೆ, ಭಯೋತ್ಪಾದನೆ ಹೀಗೆ ವಿವಿಧ ಅಪರಾಧಗಳಲ್ಲಿ ಭಾಗಿಯಾದ 81 ಆರೋಪಿಗಳಿಗೆ ಈ ವರ್ಷದ ಮಾರ್ಚ್​​ನಲ್ಲಿ ಸೌದಿ ಅರೇಬಿಯಾ ಮರಣ ದಂಡನೆ ನೀಡಿತ್ತು. ಇತ್ತೀಚಿನ ಇತಿಹಾಸದಲ್ಲೇ ಇದು ಅತಿದೊಡ್ಡ ಪ್ರಮಾಣದ ಮರಣದಂಡನೆಯಾಗಿದೆ.

ಈ ವರ್ಷದ ಮಾರ್ಚ್‌ನಲ್ಲಿ ಸೌದಿ ಅರೇಬಿಯಾ ತನ್ನ ಆಧುನಿಕ ಇತಿಹಾಸದಲ್ಲಿ ಸಾಮ್ರಾಜ್ಯವು ನಡೆಸಿದ ಅತಿದೊಡ್ಡ ಸಾಮೂಹಿಕ ಮರಣದಂಡನೆಯಲ್ಲಿ ಹತ್ಯೆಗಳು ಮತ್ತು ಉಗ್ರಗಾಮಿ ಗುಂಪುಗಳಿಗೆ ಸೇರಿದವರು ಸೇರಿದಂತೆ ವಿವಿಧ ಅಪರಾಧಗಳಿಗೆ ಶಿಕ್ಷೆಗೊಳಗಾದ 81 ಜನರನ್ನು ಗಲ್ಲಿಗೇರಿಸಿತ್ತು.

ಇಂಥ ಶಿಕ್ಷೆಗಳನ್ನು ಕಡಿಮೆ ಮಾಡುವ ಬಗ್ಗೆ ಸೌದಿ ಅರೇಬಿಯಾ ನಿರ್ಧಾರ ಮಾಡಿದ 2 ವರ್ಷಗಳ ನಂತರ ಮತ್ತೆ ಅದೇ ರೀತಿಯ ಕಠಿಣ ಶಿಕ್ಷೆ ಜಾರಿಗೊಳಿಸಲಾಗಿದೆ. ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಆದೇಶದ ಮೇರೆಗೆ ಸೌದಿ ಡೆತ್ ಸ್ಕ್ವಾಡ್‌ನಿಂದ 2018 ರಲ್ಲಿ ಟರ್ಕಿಯಲ್ಲಿ ಯುಎಸ್ ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆಯ ಹಿನ್ನೆಲೆಯಲ್ಲಿ ಈಗ ಮರಣ ದಂಡನೆ ಶಿಕ್ಷೆಗಳನ್ನು ಮತ್ತೆ ಜಾರಿ ಮಾಡಲಾಗುತ್ತಿದೆ.

2018 ರಲ್ಲಿ ಸಹ ಸೌದಿ ಆಡಳಿತವು ಮರಣದಂಡನೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿತ್ತು ಮತ್ತು ಕೊಲೆ ಅಥವಾ ನರಹತ್ಯೆಯ ತಪ್ಪಿತಸ್ಥರನ್ನು ಮಾತ್ರ ಮರಣದಂಡನೆಗೆ ಒಳಪಡಿಸುತ್ತಿದೆ.

ಇದನ್ನೂ ಓದಿ: ಬಿಟೆಕ್​​​​ ವಿದ್ಯಾರ್ಥಿನಿ ಕೊಲೆ ಕೇಸ್​: ಅಪರಾಧಿಗೆ ಮರಣದಂಡನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.