ETV Bharat / international

ಸರ್ಕಾರದ ಕ್ರಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಇಮ್ರಾನ್​ ಖಾನ್​

author img

By

Published : Apr 8, 2023, 8:04 AM IST

ನಮ್ಮ ಅಧಿಕಾರಿಗಳು ವಿಶ್ವದಾದ್ಯಂತ ಪಾಕಿಸ್ತಾನದ ಬಗ್ಗೆ ಅಪ್ರಚಾರ ನಡೆಸುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಟ್ವೀಟ್​ ಮಾಡಿದ್ದಾರೆ.

Dangerous ruling buffoons  making a mockery of Pakistan  ಸರ್ಕಾರದ ಕ್ರಮಗಳ ಬಗ್ಗೆ ಕಳವಳ ವ್ಯಕ್ತ  ಕ್ರಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಇಮ್ರಾನ್​ ಖಾನ್​ ಶ್ವದಾದ್ಯಂತ ಪಾಕಿಸ್ತಾನದ ಬಗ್ಗೆ ಅಪ್ರಚಾರ  ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಟ್ವೀಟ್  ಹೂಡಿಕೆದಾರರು ಒಪ್ಪಂದಗಳ ರಕ್ಷಣೆ
ಸರ್ಕಾರದ ಕ್ರಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಇಮ್ರಾನ್​ ಖಾನ್​

ಇಸ್ಲಾಮಾಬಾದ್, ಪಾಕಿಸ್ತಾನ: ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರದ ಕ್ರಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ವಿದೇಶದಲ್ಲಿ ಪಾಕಿಸ್ತಾನದ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿದ ಇಮ್ರಾನ್ ಖಾನ್​, ಅಧಿಕಾರದಲ್ಲಿರುವ ದೇಶದ ಮಾಜಿ ಪ್ರಧಾನಿ ವಿರುದ್ಧ ನಕಲಿ ಪ್ರಕರಣಗಳನ್ನು ದಾಖಲಿಸುವ ಮೂಲಕ ಮತ್ತು "ಡರ್ಟಿ ಹ್ಯಾರಿ" ಮತ್ತು "ಸೈಕೋಪಾತ್" ಎಂಬ ಪದಗಳನ್ನು ಬಳಸುವುದರ ಮೂಲಕ ಜಗತ್ತಿನಲ್ಲಿ ಪಾಕಿಸ್ತಾನದ ಪ್ರತಿಷ್ಠತೆಯನ್ನು ಇಷ್ಟೊಂದು ಹಾಳು ಮಾಡುತ್ತಾರೆ ಎಂದು ನಾನು ತಿಳಿದಿರಲಿಲ್ಲ ಅಂತಾ ಬರೆದುಕೊಂಡಿದ್ದಾರೆ.

  • اقتدار پر قابض ان خطرناک مسخروں کو تو احساس تک نہیں کہ ملک کے سابق وزیراعظم کیخلاف جعلی مقدمات کے اندراج اور ”ڈرٹی ہیری“ اور ”سائیکوپیتھ“ کی اصطلاحات کے استعمال پر بغاوت کے الزامات کے ذریعے یہ عالمی سطح پر پاکستان کے تشخص کو کس بُرے طریقے سے مسخ کررہے ہیں۔

    — Imran Khan (@ImranKhanPTI) April 7, 2023 " class="align-text-top noRightClick twitterSection" data=" ">

ನಿಸ್ಸಂದೇಹವಾಗಿ ಹೇಳುತ್ತೇನೆ ಅವರೆಲ್ಲರೂ ಪ್ರಪಂಚದಾದ್ಯಂತ ಪಾಕಿಸ್ತಾನವನ್ನು ಅಪಹಾಸ್ಯಕ್ಕೆ ಗುರಿಮಾಡುತ್ತಿದ್ಧಾರೆ. ಪಂಜಾಬ್ ಚುನಾವಣೆ ವಿಳಂಬ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ ತೀರ್ಪನ್ನು ಅಂಗೀಕರಿಸದ ಪಾಕಿಸ್ತಾನ ಸರ್ಕಾರದ ನಿರ್ಧಾರದ ನಂತರ ವಿದೇಶಿ ಹೂಡಿಕೆದಾರರಿಗೆ ಯಾವ ಸಂದೇಶವನ್ನು ಕಳುಹಿಸುತ್ತಿದ್ದಾರೆ?.. ಹೂಡಿಕೆದಾರರು ಒಪ್ಪಂದಗಳ ರಕ್ಷಣೆಯನ್ನು ಬಯಸುತ್ತಾರೆ. ಇದರರ್ಥ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಶ್ವಾಸವಿದೆ ಎಂದು ಆದ್ರೆ ಸರ್ಕಾರದ ಈ ನಿರ್ಧಾರದಿಂದ ವಿದೇಶಿ ಹೂಡಿಕೆದಾರರಿಗೆ ತೊಂದರೆಯ ಸಂದೇಶ ರವಾನೆಯಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಸರಕಾರವೇ ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲಂಘಿಸಲು ನಿರ್ಧರಿಸಿರುವಾಗ ಹೂಡಿಕೆದಾರರು ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಹೇಗೆ ನಂಬುತ್ತಾರೆ. ಏಕ್ ಬನಾ ರಿಪಬ್ಲಿಕ್ ಎಂದರೆ ಇದೇನಾ ಎಂದು ಪ್ರಶ್ನಿಸಿದರು. ನನ್ನ ವಿರುದ್ಧ ದೇಶದ್ರೋಹದ ಪ್ರಕರಣಗಳನ್ನು ಮತ್ತು ನಮ್ಮ ಹಿರಿಯ ನಾಯಕ ಅಲಿ ಅಮೀನ್ ಗಂಡಾಪುರ ವಿರುದ್ಧ ಸುಳ್ಳು ದಾಖಲೆಗಳನ್ನು ದಾಖಲಿಸಿದ್ದಾರೆ. ನಮ್ಮ ನಾಯಕ ಬಂಧನವು ಕೇವಲ ನಮ್ಮ ಪಕ್ಷದ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಮರ್ಥ್ಯ ನಾಶಪಡಿಸುವ ಗುರಿಯನ್ನು ಹೊಂದಿದೆ. ಇದೆಲ್ಲವೂ ನವಾಜ್ ಷರೀಫ್ ಅವರ ಲಂಡನ್ ಯೋಜನೆಯ ಭಾಗವಾಗಿದೆ. ಪಾಕಿಸ್ತಾನ್ ತೆಹ್ರೀಕ್ - ಇ - ಇನ್ಸಾಫ್ ಅನ್ನು ಚುನಾವಣೆಗೆ ಮುನ್ನವೇ ನಾಯಕರ ಬಂಧನದ ಮೂಲಕ ಹತ್ತಿಕ್ಕುವುದು ಗ್ಯಾರಂಟಿಯಾಗಿತ್ತು ಎಂದು ಪಾಕ್​ ಸರ್ಕಾರವನ್ನು ಕುಟುಕಿದರು.

ಇಮ್ರಾನ್ ಖಾನ್ ಅವರು ಪಂಜಾಬ್ ಮತ್ತು ಖೈಬರ್ - ಪಖ್ತುಂಖ್ವಾ ಪ್ರಾಂತ್ಯಗಳಲ್ಲಿ ಅಸೆಂಬ್ಲಿ ಚುನಾವಣೆಗೆ ಒತ್ತಾಯಿಸಿದ್ದಾರೆ. ಪೂರ್ವಭಾವಿ ಸಾರ್ವತ್ರಿಕ ಚುನಾವಣೆಗೆ ಇಮ್ರಾನ್ ಖಾನ್ ಅವರ ಕರೆಯನ್ನು ಪ್ರಧಾನಿ ಶೆಹಬಾಜ್ ಷರೀಫ್ ತಿರಸ್ಕರಿಸಿದ್ದಾರೆ. ಈ ನಡುವೆ ಸರ್ಕಾರದ ನಿಲುವನ್ನ ಅಲ್ಲಿನ ಆಯೋಗವೂ ಬೆಂಬಲಿಸಿದೆ ಎಂದು ಇಮ್ರಾನ್​ ಖಾನ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚುನಾವಣೆ ವಿಳಂಬಕ್ಕೆ ಆಯೋಗವು ಸಂಪನ್ಮೂಲಗಳ ಕೊರತೆಯನ್ನು ಉಲ್ಲೇಖಿಸಿತ್ತು. ಇದಕ್ಕೆ ಪಾಕ್​ ಸರ್ಕಾರವು ಒಪ್ಪಿಗೆ ನೀಡಿತು. ದೇಶವು ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವಾಗ ಪ್ರಾಂತೀಯ ಚುನಾವಣೆಗಳನ್ನು ಸಂಘಟಿಸಲು ಸಾಧ್ಯವಿಲ್ಲ. ಅಕ್ಟೋಬರ್ ಆರಂಭದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಪಾಕ್​ ಸರ್ಕಾರ ಹೇಳಿದೆ. ಆದರೆ ವಿಳಂಬ ಕಾನೂನುಬಾಹಿರ ಮತ್ತು ಎರಡು ಪ್ರಾಂತ್ಯಗಳಲ್ಲಿ ಮತದಾನವನ್ನು ಏಪ್ರಿಲ್ 30 ಮತ್ತು ಮೇ 15 ರ ನಡುವೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಓದಿ: ಇಸ್ರೇಲ್​ನಲ್ಲಿ ದಾಳಿಕೋರನನ್ನು ಗುಂಡಿಕ್ಕಿ ಕೊಂದ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.