ETV Bharat / international

ಚೀನಾದ ಲ್ಯಾಬ್​ನಿಂದಲೇ ಕೊರೊನಾ ವೈರಾಣು ಪ್ರಸಾರ: ಅಮೆರಿಕದ ವರದಿ - covid19 from china

ಕೊರೊನಾ ವೈರಾಣು ಜನಿಸಿದ್ದೇ ಚೀನಾದಲ್ಲಿ ಎಂಬ ವಾದಗಳು ಹೆಚ್ಚಾಗಿ ಕೇಳಿಬರುತ್ತಿರುವ ನಡುವೆಯೇ ಅಮೆರಿಕದ ಮತ್ತೊಂದು ಅಧ್ಯಯನ ಡ್ರ್ಯಾಗನ್​ ರಾಷ್ಟ್ರದತ್ತಲೇ ಬೆರಳು ಮಾಡಿದೆ.

ಕೊರೊನಾ ವೈರಾಣು ಪ್ರಸಾರ
ಕೊರೊನಾ ವೈರಾಣು ಪ್ರಸಾರ
author img

By

Published : Feb 27, 2023, 8:09 PM IST

ವಾಷಿಂಗ್ಟನ್​: ವಿಶ್ವಕ್ಕೇ ಮಾರಕವಾಗಿ ಪರಿಣಮಿಸಿರುವ ಕೊರೊನಾ ವೈರಾಣು ಚೀನಾದ ಪ್ರಯೋಗಾಲಯದಿಂದಲೇ ಸೋರಿಕೆಯಾಗಿದೆ ಎಂದು ಅಮೆರಿಕದ ಅಧ್ಯಯನವೊಂದು ಹೇಳಿದೆ. ವೈರಾಣು ಕುರಿತು ಅಧ್ಯಯನ ನಡೆಸಿರುವ ಯುಎಸ್​ ಡಿಪಾರ್ಟ್​ಮೆಂಟ್​ ಆಫ್​ ಎನರ್ಜಿ ತನ್ನ ವರ್ಗೀಕರಿಸಿದ ವರದಿಯನ್ನು ಶ್ವೇತಭವನಕ್ಕೆ ನೀಡಿದೆ. ಈ ಗುಪ್ತಚರ ಮಾಹಿತಿಯನ್ನು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

ಡಿಪಾರ್ಟ್​ಮೆಂಟ್​ ಆಫ್​ ಎನರ್ಜಿಯ ಅಧ್ಯಯನದಲ್ಲಿ ಹೇಳಿದಂತೆ ಕೋವಿಡ್ -19 ವೈರಸ್ ಚೀನಾದ ಪ್ರಯೋಗಾಲಯದಲ್ಲಿ ಅಚಾನಕ್ಕಾಗಿ ಹರಡಿರಬಹುದು. ಅದು ಬಳಿಕ ಇಡೀ ವಿಶ್ವಾದ್ಯಂತ ಹರಡಿತು ಎಂದು ಹೇಳಿದೆ. ರಾಷ್ಟ್ರೀಯ ಗುಪ್ತಚರ ಸಮಿತಿಯ ಈ ವರದಿಯನ್ನು ಈ ಬಗ್ಗೆ ಅಧ್ಯಯನ ನಡೆಸುತ್ತಿರುವ ಇತರ ನಾಲ್ಕು ಏಜೆನ್ಸಿಗಳು ಸಹಮತಿಸಿದರೆ, ಇನ್ನೂ ಎರಡು ಯಾವುದೇ ಒಮ್ಮತಕ್ಕೆ ಬಂದಿಲ್ಲ. ಈ ಹಿಂದೆಯೂ ಸಹ 2021 ರಲ್ಲಿ ನಡೆಸಿದ ಅಧ್ಯಯನಲ್ಲಿ ಚೀನಾದಲ್ಲಿ ಲ್ಯಾಬ್​ನಿಂದಲೇ ಕೊರೊನಾ ವೈರಸ್​ ಸೋರಿಕೆಯಾ ಸಾಂಕ್ರಾಮಿಕ ರೋಗ ಹರಡಿತ್ತು ಎಂದು ಎಫ್‌ಬಿಐ ಹೇಳಿತ್ತು. ಈಗ ಮತ್ತೊಂದು ಅಧ್ಯಯನವೂ ಚೀನಾದತ್ತಲೇ ಬೊಟ್ಟು ಮಾಡಿ ತೋರಿಸಿದೆ.

'ಕೊರೊನಾಜನಕ' ವುಹಾನ್​?: ಚೀನಾದ ವುಹಾನ್​ನಲ್ಲಿ ವಿಶ್ವದಲ್ಲಿಯೇ ಮೊದಲ ಬಾರಿಗೆ ಕೊರೊನಾ ವೈರಸ್​ ಕಾಣಿಸಿಕೊಂಡಿತ್ತು. ಸೋಂಕು ಪಸರಿಸಿದ ಬಳಿಕ ಅದರ ತಡೆಗಾಗಿ ಚೀನಾ ಸರ್ಕಾರ ಅತ್ಯಂತ ಕಠಿಣವಾದ ಲಾಕ್‌ಡೌನ್‌ಗಳು, ಸಂಪರ್ಕ ನಿಷೇಧ, ಪ್ರಯಾಣದ ನಿರ್ಬಂಧಗಳನ್ನು ಜಾರಿಗೊಳಿಸಿತ್ತು. 2019 ರ ಕೊನೆಯಲ್ಲಿ ಮಧ್ಯ ಚೀನಾದ ನಗರವಾದ ವುಹಾನ್‌ನಲ್ಲಿ ಮೊದಲು ಪತ್ತೆಯಾದ ವೈರಸ್‌ನ ಮೂಲದ ಬಗ್ಗೆ ವಿಶ್ವವೇ ಅನುಮಾನದ ಕಣ್ಣಿನಿಂದ ನೋಡುತ್ತಿದೆ.

ಸುಳ್ಳು ಹೇಳಿದ್ದ ಚೀನಾ: ಚೀನಾ ತನ್ನ ದೇಶದಲ್ಲಿ ಕೊರೊನಾ ವೈರಸ್ ಕಾಣಿಸಿದೆ ಎಂದು ಘೋಷಿಸುವುದಕ್ಕೆ ಮೊದಲೇ ಕೊರೊನಾ ಸೋಂಕು ಹರಡಿತ್ತು ಎಂದು ಡಾಯ್ಚ್ ವೆಲ್ಲೆ(ಡಿಡಬ್ಲ್ಯೂ) ಈ ಕುರಿತು ಅಧ್ಯಯನ ನಡೆಸಿ ಹೇಳಿತ್ತು. ಚೀನಾ ವರದಿ ಮಾಡಿದ್ದಕ್ಕಿಂತ ಎರಡು ತಿಂಗಳ ಹಿಂದೆಯೇ ವೈರಸ್ ಕಾಣಿಸಿಕೊಂಡಿತ್ತು ಎಂದು ಅದು ತಿಳಿಸಿತ್ತು. ಬ್ರಿಟನ್​ನ ಕೆಂಟ್ ವಿಶ್ವವಿದ್ಯಾಲಯದ ಸಂಶೋಧನೆಯೊಂದರ ತಂತ್ರಗಳನ್ನು ಅನುಸರಿಸಿ ಅಧ್ಯಯನ ನಡೆಸಿ ಡಾಯ್ಟ್​ ವೆಲ್ಲೆ, ಅಕ್ಟೋಬರ್ ಅಥವಾ ನವೆಂಬರ್ ಮಧ್ಯಭಾಗದಲ್ಲಿ ಚೀನಾದಲ್ಲಿ ಕೋವಿಡ್ ಕಾಣಿಸಿರಬಹುದೆಂದು ಅಂದಾಜು ಮಾಡಿದೆ.

ಪಿಎಲ್​ಒಎಸ್​ ಪ್ಯಾಥೋಜೆನ್ಸ್ ಜರ್ನಲ್ ಕೊರೊನಾ ವೈರಸ್ ಬಗ್ಗೆ ವಿಶ್ಲೇಷಣೆಯೊಂದನ್ನು ಪ್ರಕಟಿಸಿದೆ. ನವೆಂಬರ್ 17, 2019ರಂದೇ ಕೊರೊನಾ ವೈರಸ್ ಚೀನಾದಲ್ಲಿ ಪತ್ತೆಯಾಗಿತ್ತು ಎಂದು ವರದಿ ಮಾಡಿದೆ. ಆದರೆ, ಚೀನಾ ಡಿಸೆಂಬರ್ 2019ರಲ್ಲಿ ವೈರಸ್ ಕಾಣಿಸಿದೆ ಎಂದು ಅಧಿಕೃತವಾಗಿ ಹೇಳಿದೆ. ವುಹಾನ್ ಮಾರುಕಟ್ಟೆಯಿಂದ ವೈರಸ್ ಹರಡಿದೆ ಎಂದು ಕೆಲವು ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಮೆರಿಕ ಮೂಲದ ಆರ್​ಎಎನ್​ಡಿ(RAND)ಅಂಕಿ-ಅಂಶವೊಂದನ್ನು ಪ್ರಕಟಿಸಿದೆ. 2020ರ ಜನವರಿಯಲ್ಲಿ ಚೀನಾ ಪ್ರಕಟಿಸಿದ್ದ ಕೋವಿಡ್​ ಪ್ರಕರಣಗಳಿಗಿಂತ 37 ಪಟ್ಟು ಹೆಚ್ಚು ಪ್ರಕರಣಗಳು ಚೀನಾದಲ್ಲಿ ಇದ್ದವು ಎಂದು ಮಾಹಿತಿ ನೀಡಿದೆ. ಕೋವಿಡ್-19 ಬಗ್ಗೆ ಸಾಕಷ್ಟು ಸಂಶೋಧನಾ ವರದಿಗಳು ಪ್ರಕಟವಾಗಿವೆ. ಈವರೆಗೆ ಕೋವಿಡ್ ಮೂಲ ನಿಗೂಢವಾಗಿ ಉಳಿದಿದೆ.

ಇದನ್ನೂ ಓದಿ: ಬಾವಲಿಗಳಲ್ಲಿ ಹೊಸ ತಳಿಯ ಕೊರೊನಾ ವೈರಸ್ ಪತ್ತೆ: ಚೀನಾ ಸಂಶೋಧಕರಿಂದ ಸ್ಫೋಟಕ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.