ETV Bharat / international

COVID-19 Coordinator: ಅಮೆರಿಕದ COVID ಸಂಯೋಜಕ ಹುದ್ದೆಯಿಂದ ಡಾ.ಆಶಿಶ್ ಝಾ ನಿರ್ಗಮನ - ಬ್ರೌನ್ ವಿಶ್ವವಿದ್ಯಾಲಯ

ಭಾರತೀಯ - ಅಮೆರಿಕನ್ ವೈದ್ಯ ಡಾ. ಆಶಿಶ್ ಝಾ ಅವರು ಜೂನ್ ಅಂತ್ಯದ ವೇಳೆಗೆ ತಮ್ಮ ಹುದ್ದೆ COVID-19 ಸಂಯೋಜಕ ಹುದ್ದೆಯನ್ನು ತೊರೆದು, ಹಿಂದಿನ ಡೀನ್​ ಹುದ್ದೆಗೆ ಮರಳಲಿದ್ದಾರೆ ಎಂದು ಅಧ್ಯಕ್ಷ ಜೋ ಬೈಡನ್​ ತಿಳಿಸಿದ್ದಾರೆ.

Coordinator Ashish Jha
ಡಾ.ಆಶಿಶ್ ಝಾ
author img

By

Published : Jun 9, 2023, 7:52 AM IST

ವಾಷಿಂಗ್ಟನ್ (ಅಮೆರಿಕ): ಅಮೆರಿಕದ COVID-19 ಸಂಯೋಜಕ (response coordinator) ಭಾರತೀಯ - ಅಮೆರಿಕನ್ ವೈದ್ಯ ಡಾ ಆಶಿಶ್ ಝಾ ಅವರು ಜೂನ್ ಅಂತ್ಯದ ವೇಳೆಗೆ ತಮ್ಮ ಹುದ್ದೆಯನ್ನು ತೊರೆಯಲಿದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಅಧ್ಯಕ್ಷ ಜೋ ಬೈಡನ್​ ತಿಳಿಸಿದ್ದಾರೆ. 52 ವರ್ಷದ ಝಾ ಅವರನ್ನು ಏಪ್ರಿಲ್ 2022 ರಲ್ಲಿ ಅಮೆರಿಕಾದ COVID-19 ರ ಸಂಯೋಜಕರಾಗಿ ನೇಮಕ ಮಾಡಲಾಗಿತ್ತು.

ಈ ಕರ್ತವ್ಯಕ್ಕೆ ಆಯ್ಕೆಯಾಗುವ ಮೊದಲು ಅವರು ಬ್ರೌನ್ ವಿಶ್ವವಿದ್ಯಾಲಯದಲ್ಲಿ ವಾರ್ಸಿಟಿಯ ಸಾರ್ವಜನಿಕ ಆರೋಗ್ಯ ಶಾಲೆಯ ಡೀನ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅಮೆರಿಕದಲ್ಲಿ ಕೋವಿಡ್​ ಹೆಚ್ಚಿದ ಹಿನ್ನೆಲೆ ಕೋವಿಡ್ 19 ನಿರ್ವಹಣೆಗಾಗಿ ಆಗ ಡಾ. ಆಶಿಶ್ ಝಾ ಅವರನ್ನು ಆರೋಗ್ಯ ಸಲಹೆಗಾರರಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್​ ನೇಮಕ ಮಾಡಿದ್ದರು. ಈಗ ಕೋವಿಡ್​ 19 ರ ಪ್ರಕರಣಗಳು ಇಳಿಕೆ ಆಗಿದ್ದು,ಕೋವಿಡ್​ ಸಾವು ನೋವುಗಳೂ ಇಳಿಕೆಯಾಗಿವೆ. ಹಾಗಾಗಿ ಶ್ವೇತಭವನವು ಗುರುವಾರ ಸಂಯೋಜಕ ಹುದ್ದೆಯಿಂದ ಡಾ ಆಶಿಶ್ ಝಾ ಅವರ ನಿರ್ಗಮನವನ್ನು ಪ್ರಕಟಿಸಿದೆ. ಈ ಹುದ್ದೆಯನ್ನು ಝಾ ಅವರು ತೊರೆದ ನಂತರ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಆರೋಗ್ಯ ಶಾಲೆಯ ಡೀನ್ ಆಗಿ ಹಿಂದಿನಂತೆ ತಮ್ಮ ಸೇವೆಯನ್ನು ಸಲ್ಲಿಸಲಿದ್ದಾರೆ.

COVID-19 ಇನ್ನು ಮುಂದೆ ನಮ್ಮ ದೈನಂದಿನ ಜೀವನಕ್ಕೆ ಅಡ್ಡಿಯಾಗುವುದಿಲ್ಲ. ಕಳೆದ ವರ್ಷ COVID-19 ಸಂಯೋಜಕರಾಗಿ ಡಾ ಆಶಿಶ್ ಝಾ ಅವರನ್ನು ಹುದ್ದೆಗೆ ನೇಮಿಕ ಮಾಡಿದ್ದೆ ಎಂದು ಅಧ್ಯಕ್ಷ ಜೋ ಬೈಡನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅವರು ಅಮೆರಿಕದ ಪ್ರಮುಖ ಸಾರ್ವಜನಿಕ ಆರೋಗ್ಯ ತಜ್ಞರಲ್ಲಿ ಒಬ್ಬರಾಗಿದ್ದು, ಸಾಂಕ್ರಾಮಿಕ ರೋಗವನ್ನು ತಡೆಯುವಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ ಎಂದೂ ಅವರು ತಮ್ಮ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

ಜೊತೆಗೆ ಈ ವೈರಸ್​ನಿಂದ ಲಕ್ಷಾಂತರ ಅಮೆರಿಕನ್ನರ ಜೀವನವನ್ನು ಕಾಪಾಡುವಲ್ಲಿ ಮತ್ತು ಎಲ್ಲವನ್ನೂ ಸುಧಾರಿಸುವಲ್ಲಿ ಪರಿಣಾಮಕಾರಿಯಾಗಿ ಝಾ ಕಾರ್ಯ ನಿರ್ವಹಿಸಿದ್ದಾರೆ. ನಾನು ಅಧಿಕಾರ ವಹಿಸಿಕೊಂಡಾಗ, ನಮ್ಮ ರಾಷ್ಟ್ರವು ಕೋವಿಡ್​ 19 ರ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿತ್ತು. ಈ ವೈರಸ್​ ಎಲ್ಲವನ್ನು ಆಗ ಬದಲಾಯಿಸಿತ್ತು. ನಾನು ಸರ್ಕಾರಕ್ಕೆ ನನ್ನ ಧನ್ಯವಾದ ತಿಳಿಸುತ್ತಿದ್ದೇನೆ. ಈಗ ನಮ್ಮಲ್ಲಿ ಕೋವಿಡ್​ 19 ರಂದು ನಿಯಂತ್ರಿಸಲು ಬೇಕಾದ ಎಲ್ಲಾ ಸಾಧನಗಳನ್ನು ಹೊಂದಿದ್ದೇವೆ. ಹಾಗಾಗಿ ಇನ್ನು ಮುಂದೆ ಈ ವೈರಸ್​​ ನಮ್ಮ ದಿನನಿತ್ಯದ ಜೀವನಕ್ಕೆ ಅಡ್ಡಿಯಾಗುವುದಿಲ್ಲ ಎಂದೂ ಬೈಡನ್​ ತಿಳಿಸಿದ್ದಾರೆ.

ಅಲ್ಲದೇ, ಜುಲೈ 1 ರಂದು ಡಾ. ಆಶಿಶ್ ಝಾ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಡೀನ್ ಆಗಿ ವಿಶ್ವವಿದ್ಯಾನಿಲಯಕ್ಕೆ ಮರಳಲಿದ್ದಾರೆ ಎಂದು ಬ್ರೌನ್ ವಿಶ್ವವಿದ್ಯಾಲಯ ತಿಳಿಸಿದೆ. ಆಶಿಶ್ ಝಾ ಸಂಯೋಜಕರಾಗಿ ಆಯ್ಕೆಯಾದಾಗ ಡೀನ್​ ಆಗಿ ಆಗ ರೊನಾಲ್ಡ್ ಆಬರ್ಟ್ ಬ್ರೌನ್ ಆ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಇನ್ನು ಬ್ರೌನ್ ವಿಶ್ವವಿದ್ಯಾನಿಲಯದ ಮಧ್ಯಂತರ ಪ್ರೊವೊಸ್ಟ್ ಲ್ಯಾರಿ ಲಾರ್ಸನ್ ಅವರು ಆಶಿಶ್ ಝಾ ಅವರ ಸೇವೆಯನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಅಮೆರಿಕನ್ನರು - ಭಾರತೀಯರ ಒಂದುಗೂಡಿಸುವ ಪ್ರಧಾನಿ ಮೋದಿ ಭೇಟಿ: ಶ್ವೇತಭವನದ ಬಣ್ಣನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.