ETV Bharat / international

COP-28 ಶೃಂಗಸಭೆ: ಮಣ್ಣಿನ ಸಂರಕ್ಷಣೆಗಾಗಿ ಎಲ್ಲರೂ ಒಗ್ಗಟ್ಟಾಗಬೇಕಿದೆ: ಸದ್ಗುರು ಜಗ್ಗಿ ವಾಸುದೇವ್

author img

By ANI

Published : Dec 2, 2023, 9:39 AM IST

COP 28 Summit: ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ ವಿಶ್ವ ಹವಾಮಾನ (COP 28) ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಮಣ್ಣಿನ ಸಂರಕ್ಷಣೆ ಕುರಿತು ಇಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಮಾತನಾಡಿದರು.

Isha Foundation Sadhguru Jaggi Vasudev
ಇಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್

ದುಬೈ (ಯುಎಇ): ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ ವಿಶ್ವ ಹವಾಮಾನ (COP 28) ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಮಣ್ಣನ್ನು ಪುನರುಜ್ಜೀವನಗೊಳಿಸುವ ನೀತಿಗಳ ಕುರಿತು ಇಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಪ್ರತಿಪಾದಿಸಿದರು. ''ಮಣ್ಣಿನ ಸಂರಕ್ಷಣೆ ಮಾಡಲು ಎಲ್ಲರೂ ಒಗ್ಗಟ್ಟಾಗಬೇಕಿದೆ. ಜನರು ಮತ್ತು ನೀತಿ ನಿರೂಪಕರ ಮೇಲೆ ಪ್ರಭಾವ ಬೀರಲು ಮತ್ತು ಪ್ರೇರೇಪಿಸುವಲ್ಲಿ ವಿಶ್ವದ ನಂಬಿಕೆಯ ನಾಯಕರು ಪ್ರಮುಖ ಪಾತ್ರ ವಹಿಸಬೇಕಿದೆ ಎಂದು ಒತ್ತಿ ಹೇಳಿದ್ದಾರೆ.

''ನಾವೆಲ್ಲರೂ ಒಂದೇ ಮಣ್ಣಿನಿಂದ ಬಂದವರು. ನಾವು ಅದೇ ಮಣ್ಣಿನಲ್ಲಿ ಹುಟ್ಟಿ ಬೆಳೆದಿದ್ದೇವೆ. ನಾವು ಸತ್ತಾಗಲೂ ಅದೇ ಮಣ್ಣಿನಲ್ಲಿ ಸೇರುತ್ತೇವೆ. ಇದರಿಂದ ಅದೇ ಮಣ್ಣಿಗಾಗಿ ಅಂತಿಮವಾಗಿ ನಾವು ಒಂದಾಬೇಕು'' ಎಂದು ಸದ್ಗುರು ಜಗ್ಗಿ ವಾಸುದೇವ್ ತಿಳಿಸಿದರು.

"ಮಣ್ಣನ್ನು ಉಳಿಸಲು ಜನರನ್ನು ಪ್ರೇರೇಪಿಸಲು ವಿಶ್ವದ ನಂಬಿಕೆಯ ನಾಯಕರು ತಮ್ಮ ಪ್ರಭಾವವನ್ನು ಬಳಸಬೇಕು. ಮಣ್ಣಿಗಾಗಿ ಎಲ್ಲರೂ ಅಂತಿಮವಾಗಿ ಒಗ್ಗಟ್ಟಾಗಬೇಕು. ಮಣ್ಣು ಎಲ್ಲ ಎಲ್ಲೆಗಳನ್ನು ಮೀರಿ ನಮ್ಮನ್ನು ಒಂದುಗೂಡಿಸುತ್ತದೆ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ" ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ, ಯುಕೆ ಪ್ರಧಾನ ಮಂತ್ರಿ ರಿಷಿ ಸುನಕ್, ವಿಶ್ವ ಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೋ, ಯುಎಇಯ ಹವಾಮಾನ ಬದಲಾವಣೆ ಮತ್ತು ಪರಿಸರ ಸಚಿವ, ಹೆಚ್ಇ ಮರಿಯಮ್ ಅಲ್ಮ್ಹೇರಿ, ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ಯುಎಸ್​ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಉಪಸ್ಥಿತರಿದ್ದರು.

ಗ್ರೀನ್ ಕ್ರೆಡಿಟ್ ಕಾರ್ಯಕ್ರಮ: ಪ್ರಧಾನಿ ನರೇಂದ್ರ ಮೋದಿ, ಸ್ವೀಡನ್‌ನ ಪಿಎಂ ಉಲ್ಫ್ ಕ್ರಿಸ್ಟರ್ಸನ್, ಮೊಜಾಂಬಿಕ್ ಅಧ್ಯಕ್ಷ ಫಿಲಿಪ್ ಜೆಸಿಂಟೊ ನ್ಯುಸಿ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಅವರು ದುಬೈನಲ್ಲಿ ನಡೆದ COP28 ವಿಶ್ವ ಹವಾಮಾನ ಶೃಂಗಸಭೆಯಲ್ಲಿ ಗ್ರೀನ್ ಕ್ರೆಡಿಟ್ ಕಾರ್ಯಕ್ರಮದ ವೆಬ್ ಪೋರ್ಟಲ್ ಅನ್ನು ಬಿಡುಗಡೆಗೊಳಿಸಿದರು.

"ಜೀವನದಲ್ಲಿ ನಮ್ಮ ಆರೋಗ್ಯ ಕಾರ್ಡ್‌ಗೆ ನಾವು ಯಾವ ರೀತಿಯ ಪ್ರಾಮುಖ್ಯತೆಯನ್ನು ನೀಡುತ್ತೇವೆ. ಅದೇ ರೀತಿಯಲ್ಲಿ ನಾವು ಪರಿಸರ ಉಳಿಸುವ ಬಗ್ಗೆ ಯೋಚಿಸಲು ಪ್ರಾರಂಭಿಸಬೇಕು. ಭೂಮಿಯ ಆರೋಗ್ಯ ಕಾರ್ಡ್‌ಗೆ ಧನಾತ್ಮಕ ಅಂಶಗಳನ್ನು ಸೇರಿಸಲು ಏನು ಮಾಡಬೇಕು ಎಂಬುದನ್ನು ನಾವು ಗಮನಿಸಿಬೇಕಿದೆ. ಹಸಿರು ಕ್ರೆಡಿಟ್ ಎಂದರೆ ಇದೇ ಎಂದು ನಾನು ಭಾವಿಸುತ್ತೇನೆ'' ಎಂದು ಪ್ರಧಾನಿ ಮೋದಿ ಹೇಳಿದ್ದರು.

ಪಿಎಂ ಮೋದಿ, ಯುಎಇಯ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಸಮ್ಮುಖದಲ್ಲಿ COP-28ನಲ್ಲಿ 'ಗ್ರೀನ್ ಕ್ರೆಡಿಟ್ಸ್ ಪ್ರೋಗ್ರಾಂ' ಕುರಿತು ಉನ್ನತ ಮಟ್ಟದ ಕಾರ್ಯಕ್ರಮ ನಡೆಯಿತು. ಸ್ವೀಡಿಷ್ ಪ್ರಧಾನ ಮಂತ್ರಿ, ಮೊಜಾಂಬಿಕ್ ಅಧ್ಯಕ್ಷರು ಮತ್ತು ಯುರೋಪಿಯನ್ ಕೌನ್ಸಿಲ್‌ನ ಅಧ್ಯಕ್ಷರು ಭಾಗವಹಿಸಿದ್ದರು.

ಪ್ರಧಾನಿ ಮೋದಿ ಈ ಉಪಕ್ರಮಕ್ಕೆ ಸೇರಲು ಎಲ್ಲಾ ರಾಷ್ಟ್ರಗಳನ್ನು ಆಹ್ವಾನಿಸಿದರು. "COP28 ಅನ್ನು ಯುಎಇ ಅಧ್ಯಕ್ಷತೆಯಲ್ಲಿ ನಡೆಸಲಾಗುತ್ತಿದೆ. ಶೃಂಗಸಭೆಯು ಹವಾಮಾನ ಬದಲಾವಣೆ ಪೂರಕ ಕ್ರಮಗಳಿಗೆ ಅನನ್ಯ ಅವಕಾಶವನ್ನು ಒದಗಿಸುತ್ತದೆ. ಹವಾಮಾನ ಬದಲಾವಣೆಯನ್ನು ಎದುರಿಸುವ ಪ್ರಯತ್ನಗಳ ಭಾಗವಾಗಿ ಅದರ ಉದ್ದೇಶಿತ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಯನ್ನು ಪೂರೈಸುವ ಕೆಲವು ದೇಶಗಳಲ್ಲಿ ಭಾರತವೂ ಸೇರಿದೆ. 2028ರಲ್ಲಿ COP33ಅನ್ನು ಭಾರತದಲ್ಲಿ ಆಯೋಜಿಸುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಇದನ್ನೂ ಓದಿ: 2028ರಲ್ಲಿ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನ ಆಯೋಜನೆಯ ಪ್ರಸ್ತಾಪ ಮಾಡಿದ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.