ಬೊಗೋಟಾ: ಕೊಲಂಬಿಯಾದ ಮತದಾರರು ಎಡಪಂಥೀಯರ ಬಗ್ಗೆ ದೀರ್ಘಕಾಲದ ದ್ವೇಷವನ್ನು ಬದಿಗಿಟ್ಟು ಒಬ್ಬರನ್ನು ತಮ್ಮ ಹೊಸ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಅಷ್ಟೇ ಅಲ್ಲ ಕೊಲಂಬಿಯಾ ಪ್ರಜೆಗಳು ದೇಶದ ಮೊದಲ ಕಪ್ಪು ಉಪಾಧ್ಯಕ್ಷರನ್ನು ಆಯ್ಕೆ ಮಾಡುವ ಮೂಲಕ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ.
ಮಾಜಿ ಎಡಪಂಥೀಯ ರೆಬೆಲ್ ಗುಸ್ಟಾವೊ ಪೆಟ್ರೋ ಆಗಸ್ಟ್ 7 ರಂದು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ಅವರ ಆಡಳಿತದಲ್ಲಿ ಪ್ರಮುಖರಾಗಿರುವ ಫ್ರಾನ್ಸಿಯಾ ಮಾರ್ಕ್ವೆಜ್ ಭಾನುವಾರ ನಡೆದ ಚುನಾವಣೆಯಲ್ಲಿ ಬಹುಮತದಿಂದ ಆರಿಸಿ ಬಂದರು.
ಫ್ರಾನ್ಸಿಯಾ ಮಾರ್ಕ್ವೆಜ್ ಡಿಸೆಂಬರ್ 1, 1981 ರಂದು ಸೌರೆಜ್ (ಕಾಕಾ) ನಲ್ಲಿ ಜನಿಸಿದರು. ಅವರು ಪರಿಸರ ಕಾರ್ಯಕರ್ತೆಯಾಗಿ ಮಾನವ ಹಕ್ಕುಗಳು ಮತ್ತು ಸ್ತ್ರೀವಾದದ ರಕ್ಷಕರಾಗಿ ಹೊರಹೊಮ್ಮಿದ್ದಾರೆ.
-
"I'm the first Afro-descendant woman of Colombia. I'm your Vice President and I want to present to you your President, Gustavo Petro." @FranciaMarquezM pic.twitter.com/O6lBioJjGX
— Kawsachun News (@KawsachunNews) June 20, 2022 " class="align-text-top noRightClick twitterSection" data="
">"I'm the first Afro-descendant woman of Colombia. I'm your Vice President and I want to present to you your President, Gustavo Petro." @FranciaMarquezM pic.twitter.com/O6lBioJjGX
— Kawsachun News (@KawsachunNews) June 20, 2022"I'm the first Afro-descendant woman of Colombia. I'm your Vice President and I want to present to you your President, Gustavo Petro." @FranciaMarquezM pic.twitter.com/O6lBioJjGX
— Kawsachun News (@KawsachunNews) June 20, 2022
ಮಾರ್ಕ್ವೆಜ್ ಅವರು ಮೊದಲು ಜಲವಿದ್ಯುತ್ ಯೋಜನೆಯ ವಿರುದ್ಧ ಅಭಿಯಾನಗಳನ್ನು ಆಯೋಜಿಸುವ ಮೂಲಕ ಗಮನ ಸೆಳೆದಿದ್ದರು. ನಂತರ ಸಾಮೂಹಿಕ ಒಡೆತನದ ಆಫ್ರೋ-ಕೊಲಂಬಿಯನ್ ಭೂಮಿಯನ್ನು ಆಕ್ರಮಿಸುತ್ತಿದ್ದ ವೈಲ್ಡ್‌ಕ್ಯಾಟ್ ಚಿನ್ನದ ಗಣಿಗಾರರಿಗೆ ಸವಾಲು ಹಾಕಿದರು. ಬಳಿಕ ಇವರಿಗೆ ಪರಿಸರದ ಕೆಲಸಕ್ಕಾಗಿ ಹಲವಾರು ಜೀವ ಬೆದರಿಕೆಗಳನ್ನು ಎದುರಿಸಿದ್ದಾರೆ. ಕಪ್ಪು ಕೊಲಂಬಿಯನ್ನರ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳ ಪ್ರಬಲ ವಕ್ತಾರರಾಗಿ ಮಾರ್ಕ್ವೆಜ್ ಹೊರ ಹೊಮ್ಮಿದ್ದಾರೆ.
ಓದಿ: ರಾಷ್ಟ್ರಪತಿ ಚುನಾವಣೆ: ಯಶವಂತ್ ಸಿನ್ಹಾ ಅಭ್ಯರ್ಥಿಯಾಗಿಸಲು ಟಿಎಂಸಿಗೆ ಶಿಫಾರಸು
ಕೊಲಂಬಿಯಾದಲ್ಲಿ ಇದುವರೆಗೆ ಉಪಾಧ್ಯಕ್ಷ ಸ್ಥಾನವನ್ನು ಹೊಂದಿರುವ ಇತರರಿಗಿಂತ ಅವರು ಸಂಪೂರ್ಣವಾಗಿ ಭಿನ್ನರಾಗಿದ್ದಾರೆ ಎಂದು ಮಾನವ ಹಕ್ಕುಗಳ ಗುಂಪಿನ ಲ್ಯಾಟಿನ್ ಅಮೆರಿಕದ ವಾಷಿಂಗ್ಟನ್ ಕಚೇರಿಯ ಆಂಡಿಸ್ ನಿರ್ದೇಶಕ ಗಿಮೆನಾ ಸ್ಯಾಂಚೆಜ್ ಹೇಳಿದ್ದಾರೆ.
ಮಾರ್ಕ್ವೆಜ್ 2018 ರಲ್ಲಿ ಗೋಲ್ಡ್‌ಮನ್ ಪರಿಸರ ಪ್ರಶಸ್ತಿ ಮತ್ತು ಪರಿಸರ ನೊಬೆಲ್ ಪ್ರಶಸ್ತಿ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ. 2022 ರಲ್ಲಿ ಅವರು ಐತಿಹಾಸಿಕ ಒಪ್ಪಂದದ ಅಂತರಪಕ್ಷದ ಸಮಾಲೋಚನೆಯಲ್ಲಿ ಸ್ಪರ್ಧಿಸಲು ಪರ್ಯಾಯ ಡೆಮಾಕ್ರಟಿಕ್ ಸಮೀಕ್ಷೆಯಿಂದ ಬೆಂಬಲಿತರಾಗಿದ್ದರು. ಅಲ್ಲಿ ಅವರು 7,80,000 ಕ್ಕಿಂತ ಹೆಚ್ಚು ಮತಗಳೊಂದಿಗೆ ಎರಡನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು.