ಬೊಗೋಟಾ(ಕೊಲಂಬಿಯಾ): ಕೊಲಂಬಿಯಾದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಇಳಿಮುಖವಾಗುತ್ತಿರುವ ಕಾರಣ ಇದೇ 16 ರಿಂದ ಶಾಲೆಗಳನ್ನು ಪುನಾರಂಭ ಮಾಡಲಾಗುತ್ತಿದೆ. ಈ ಮಧ್ಯೆಯೇ ಅಲ್ಲಿನ ಸರ್ಕಾರ ಮಾಸ್ಕ್ ಧರಿಸುವ ಕಡ್ಡಾಯ ನಿಯಮವನ್ನು ಕೈಬಿಟ್ಟಿದೆ.
ಶಾಲೆಗಳು ಮೇ 16 ರಿಂದ ಪ್ರಾರಂಭವಾಗಲಿದ್ದು, ಕಳೆದೆರಡು ವಾರಗಳಲ್ಲಿ ಕೊರೊನಾ ಪ್ರಕರಣಗಳು ತಗ್ಗಿವೆ. ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಬಳಕೆಯನ್ನು ಕೈಬಿಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಶುಕ್ರವಾರ ಘೋಷಿಸಿದೆ.
ಶೇ.70 ರಷ್ಟು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಂಪೂರ್ಣ(2 ಡೋಸ್) ಲಸಿಕೆಯನ್ನು ಪಡೆದ ಶಾಲೆಗಳು ಮತ್ತು 40 ಪ್ರತಿಶತದಷ್ಟು ಬೂಸ್ಟರ್ ಡೋಸ್ ಪಡೆದ ಶಾಲೆಗಳು ಮಾತ್ರ ಆದೇಶಕ್ಕೆ ಒಳಪಡಲಿವೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಕೊಲಂಬಿಯಾದಲ್ಲಿ 42.2 ಪ್ರತಿಶತದಷ್ಟು ಮಕ್ಕಳು ಎರಡೂ ಡೋಸ್ ಲಸಿಕೆಯನ್ನು ಹೊಂದಿದ್ದಾರೆ. 3- 11 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ಪ್ರಕ್ರಿಯೆಯನ್ನು ವೇಗಗೊಳಿಸಲು ಆರೋಗ್ಯ ಇಲಾಖೆ ಸಚಿವ ಫರ್ನಾಂಡೋ ರೂಯಿಜ್ ಕರೆ ನೀಡಿದರು.
ಓದಿ: 30 ವರ್ಷಗಳಲ್ಲಿ 60 ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ್ದ ಶಿಕ್ಷಕ ಕೊನೆಗೂ ಅರೆಸ್ಟ್!