ETV Bharat / international

ಇಮ್ರಾನ್ ಖಾನ್​ ಪತ್ನಿಯ ಸ್ನೇಹಿತೆ ಸಂಪತ್ತಿನಲ್ಲಿ ಭಾರಿ ಏರಿಕೆ: ಬಂಧನ ಭೀತಿಯಲ್ಲಿ ಪಾಕ್‌​ ತೊರೆದ ಫರಾಹ್​​! - ಫರಾಹ್ ಖಾನ್​ ಪಲಾಯನ

ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಅಧಿಕಾರ ಕಳೆದುಕೊಳ್ಳುತ್ತಿದ್ದಂತೆಯೇ ಬಂಧನ ಭೀತಿಯಲ್ಲಿರುವ ಅನೇಕರು ಈಗಾಗಲೇ ದೇಶ ತೊರೆದು, ವಿದೇಶಕ್ಕೆ ಪಲಾಯನ ಮಾಡ್ತಿದ್ದಾರೆ.

Farah Khan
Farah Khan
author img

By

Published : Apr 7, 2022, 4:16 PM IST

ಇಸ್ಲಾಮಾಬಾದ್​(ಪಾಕಿಸ್ತಾನ): ಪಾಕಿಸ್ತಾನದಲ್ಲಿ ರಾಜಕೀಯ ಕೋಲಾಹಲ ತೀವ್ರಗೊಂಡಿದೆ. ಇಮ್ರಾನ್ ಖಾನ್​ ಸರ್ಕಾರ ಪತನಕ್ಕಾಗಿ ಪ್ರತಿಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಇದರ ಬೆನ್ನಲ್ಲೇ ಪ್ರಧಾನಿ ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿ ಅವರ ಆಪ್ತ ಸ್ನೇಹಿತೆ ಫರಾಹ್ ಖಾನ್​ ಬಂಧನದ ಭೀತಿಯಿಂದಾಗಿ ಪಾಕಿಸ್ತಾನ ತೊರೆದಿದ್ದಾಳೆ ಎಂದು ಹೇಳಲಾಗುತ್ತಿದೆ.

  • Farah Khan, Bushra’s Frontwoman who ran away . The bag with her is for $90,000. Yes that’s ninety thousand dollars. pic.twitter.com/ESrZOKD3h6

    — Romina Khurshid Alam (@MNARomina) April 5, 2022 " class="align-text-top noRightClick twitterSection" data=" ">

ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್​ ಸರ್ಕಾರ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ಫರಾಹ್ ಖಾನ್​ ಆಸ್ತಿಯಲ್ಲಿ ಗಣನೀಯ ಮಟ್ಟದಲ್ಲಿ ಏರಿಕೆ ಕಂಡು ಬಂದಿದ್ದು, ಇದೀಗ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದರೆ, ಬಂಧನವಾಗಬಹುದು ಎಂಬ ಭಯದಲ್ಲಿ ಅವರು ಪಲಾಯನ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ. ಅವರು ಈಗಾಗಲೇ ಅಮೆರಿಕಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಇದಕ್ಕೆ ಪುಷ್ಠಿ ನೀಡುವ ಪೋಟೋ ಕೂಡ ವೈರಲ್​ ಆಗಿದೆ.

ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಸಹೋದರರಿಂದ ಅತ್ಯಾಚಾರ: 28 ವರ್ಷಗಳ ನಂತರ ಪ್ರಕರಣ ದಾಖಲು

ಇಮ್ರಾನ್ ಖಾನ್​ ಹಾಗೂ ಅವರ ಪತ್ನಿ ಬುಶ್ರಾ ಬೇಬಿ ಅವರ ಅನುಮತಿ ಪಡೆದುಕೊಂಡು ಫರಾಹ್​ ದೊಡ್ಡ ದೊಡ್ಡಮಟ್ಟದ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾಗಿ ಈಗಾಗಲೇ ವಿರೋಧ ಪಕ್ಷಗಳು ಗಂಭೀರ ಆರೋಪ ಮಾಡಿವೆ. 2017ರಲ್ಲಿ 231 ಮಿಲಿಯನ್ ಡಾಲರ್‌ ಸಂಪತ್ತು ಹೊಂದಿದ್ದ ಫರಾಹ್​, 2021ರಲ್ಲಿ 971 ಮಿಲಿಯನ್ ಡಾಲರ್​ ಆಸ್ತಿ ಗಳಿಕೆ ಮಾಡಿದ್ದಾರೆಂದು ಹೇಳಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.