ETV Bharat / international

ಚೀನಿ ಉದ್ಯಮಿಗಳು ಭೇಟಿ ನೀಡುತ್ತಿದ್ದ ಕಾಬೂಲ್‌ ಹೋಟೆಲ್​ ಮೇಲೆ ದಾಳಿ, ಮೂವರ ಹತ್ಯೆ

ಚೀನಿ ಉದ್ಯಮಿಗಳು ವ್ಯವಹಾರಕ್ಕಾಗಿ ಭೇಟಿ ನೀಡುತ್ತಿದ್ದ ಅಫ್ಘಾನಿಸ್ತಾನದ ಕಾಬೂಲ್​ನಲ್ಲಿರುವ ಹೋಟೆಲ್​ ಮೇಲೆ ದಾಳಿ ನಡೆದಿದೆ.

Loud blast, shots near guest house frequented by Chinese in Kabul
ಅಫ್ಘಾನಿಸ್ತಾನ : ಚೀನಿ ಉದ್ಯಮಿಗಳು ಬರುತ್ತಿದ್ದ ಹೋಟೆಲ್​ನಲ್ಲಿ ಭಾರೀ ಸ್ಫೋಟ,ಗುಂಡಿನ ದಾಳಿ
author img

By

Published : Dec 12, 2022, 8:25 PM IST

Updated : Dec 12, 2022, 8:39 PM IST

ಚೀನಿ ಉದ್ಯಮಿಗಳು ಭೇಟಿ ನೀಡುತ್ತಿದ್ದ ಕಾಬೂಲ್‌ ಹೋಟೆಲ್​ ಮೇಲೆ ದಾಳಿ, ಮೂವರ ಹತ್ಯೆ

ಕಾಬೂಲ್(ಅಫ್ಘಾನಿಸ್ತಾನ): ಚೀನಿ ಉದ್ಯಮಿಗಳು ವ್ಯವಹಾರಕ್ಕಾಗಿ ಆಗಾಗ್ಗೆ ಭೇಟಿ ನೀಡುತ್ತಿದ್ದ ಕಾಬೂಲ್‌ನ ಶಹರ್​ ಎ ನಾವ್​ನ​ ಹೋಟೆಲ್‌ ಮೇಲೆ ದಾಳಿ ನಡೆದಿದೆ. ಇಲ್ಲಿನ ಬಹುಮಹಡಿ ಹೋಟೆಲ್​ನಿಂದ ಭಾರಿ ಪ್ರಮಾಣದ ಸ್ಫೋಟ ಮತ್ತು ಗುಂಡಿನ ಸದ್ದು ಕೇಳಿ ಬಂದಿದೆ. ಮೂವರು ದಾಳಿಕೋರರನ್ನು ಹತ್ಯೆ ಮಾಡಲಾಗಿದ್ದು ಕಾರ್ಯಾಚರಣೆ ಮುಂದುವರೆದಿದೆ ಎಂದು ಕಾಬೂಲ್​ ಪೊಲೀಸ್​ ಮುಖ್ಯಸ್ಥ ಖಾಲಿದ್​ ಜದ್ರಾನ್​ ಹೇಳಿದ್ದಾರೆ.

ಘಟನೆಯಲ್ಲಿ ಇಬ್ಬರು ವಿದೇಶಿಯರು ದಾಳಿಯಿಂದ ತಪ್ಪಿಕೊಳ್ಳಲು ಕಟ್ಟಡದಿಂದ ಕೆಳಗೆ ಜಿಗಿದಿದ್ದು ಗಂಭೀರ ಗಾಯಗೊಂಡಿದ್ದಾರೆ. ಕಾಬೂಲ್‌ನ ಪ್ರಮುಖ ವಾಣಿಜ್ಯ ಸ್ಥಳಗಳಲ್ಲೊಂದಾದ ಶಹರ್ ಎ ನಾವ್‌ನಲ್ಲಿ ನಡೆದ ಸ್ಫೋಟದ ಬಗ್ಗೆ ಸ್ಥಳೀಯರು ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ಬಹುಮಹಡಿಯ ಹೋಟೆಲ್‌ನಿಂದ ಬೆಂಕಿ ಮತ್ತು ಹೊಗೆ ಹೊರ ಬರುತ್ತಿರುವುದನ್ನು ನೋಡಬಹುದು. ಅಲ್ಲದೇ, ಸ್ಥಳೀಯ ನಿವಾಸಿಗಳು ಸ್ಫೋಟ ಮತ್ತು ಗುಂಡಿನ ಸದ್ದು ಕೇಳಿರುವ ಬಗ್ಗೆ ಖಚಿತಪಡಿಸಿದ್ದಾರೆ.

ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆಗಳು ಹೊತ್ತುಕೊಂಡಿಲ್ಲ. ಆದರೂ ಖೊರಾಸನ್ ಪ್ರಾಂತ್ಯದಲ್ಲಿನ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಅಫ್ಘಾನಿಸ್ತಾನದ ತಾಲಿಬಾನ್‌ ಸರಕಾರ ವಿರುದ್ಧ ಹಲವು ದಾಳಿಗಳನ್ನು ಈಗಾಗಲೇ ನಡೆಸಿದೆ. ಹೀಗಾಗಿ ಐಸಿಸ್‌ ಮೇಲೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿವೆ.

ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಶೆಲ್​ ದಾಳಿ: ಪಾಕಿಸ್ತಾನದ 7 ಜನ ಸಾವು

Last Updated : Dec 12, 2022, 8:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.