ETV Bharat / international

ಚೀನಾದ ಜನಸಂಖ್ಯೆ ಕುಸಿತ: ಆರ್ಥಿಕ ಹಿನ್ನಡೆಗೂ ಕಾರಣವಾಯ್ತಾ?.. ಕುಟುಂಬ ಯೋಜನೆ ಮತ್ತು ಜಗತ್ತಿಗೆ ಇದರ ಸಂದೇಶವೇನು? - ಕುಟುಂಬ ಯೋಜನೆ

ಚೀನಾದ ಜನಸಂಖ್ಯೆಯ ಕುಸಿತದ ನಂತರದ ಪರಿಣಾಮಗಳು ಹಾಗೂ ಅದು ಬೀರುವ ಜಾಗತಿಕ ಪರಿಣಾಮಗಳ ಬಗ್ಗೆ ಶೆಫೀಲ್ಡ್ ವಿಶ್ವವಿದ್ಯಾಲಯದ ಚೈನೀಸ್ ಅಧ್ಯಯನದ ಉಪನ್ಯಾಸಕಿ ಕ್ರಿಸ್ಟಿನಾ ಮಾಗ್ಸ್ ಅವರು ಬೆಳಕು ಚೆಲ್ಲಿದ್ದಾರೆ. ಇದರ ಸಂಪೂರ್ಣವಾದ ವಿವರಣೆ ಇಲ್ಲಿದೆ....

chinas-population-decline-is-a-result-of-decades-of-botched-family-planning-measures-and-will-have-global-implications
ಚೀನಾದ ಜನಸಂಖ್ಯೆ ಕುಸಿತ: ಕುಟುಂಬ ಯೋಜನೆ ಮತ್ತು ಜಗತ್ತಿಗೆ ಇದರ ಸಂದೇಶವೇನು?
author img

By

Published : Jan 20, 2023, 5:43 PM IST

ಶೆಫೀಲ್ಡ್ (ಇಂಗ್ಲೆಂಡ್): ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಕಳೆದ 60 ವರ್ಷಗಳಲ್ಲಿ ಮೊದಲ ಬಾರಿಗೆ ಜನಸಂಖ್ಯೆಯಲ್ಲಿ ಕುಸಿತ ಉಂಟಾಗಿದೆ. ರಾಷ್ಟ್ರೀಯ ಜನನ ದರವು 1,000 ಜನರಿಗೆ 6.77 ಜನನಗಳ ದಾಖಲೆಯ ಕಡಿಮೆಯಾಗಿದೆ. ಇದು ಚೀನಾದ ಋಣಾತ್ಮಕ ಜನಸಂಖ್ಯೆ ಬೆಳವಣಿಗೆಯ ಯುಗವಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಕರೆದಿದ್ದಾರೆ.

ಚೀನಾದಲ್ಲಿ ಗ್ರೇಟ್ ಲೀಪ್ ಫಾರ್ವರ್ಡ್ ಎಂಬ ರಾಜಕೀಯ ಅಭಿಯಾನದಿಂದ ಉಂಟಾದ ಭೀಕರ ಕ್ಷಾಮದ ವರ್ಷಗಳನ್ನು (1959-61) ಹೊರತುಪಡಿಸಿ, ಕಳೆದ ದಶಕಗಳಿಂದಲೂ ಜನಸಂಖ್ಯೆಯು ವೇಗವಾಗಿ ಹೆಚ್ಚುತ್ತಲೇ ಇತ್ತು. ಹೀಗಾಗಿ 1970ರಲ್ಲಿ ಚೀನಾ ಸರ್ಕಾರವು ಅಧಿಕ ಜನಸಂಖ್ಯೆಯ ಭಯದಿಂದ ಕುಟುಂಬ ಯೋಜನೆಗಳನ್ನು ಪರಿಚಯಿಸಿತ್ತು. ಇದರ ಪರಿಣಾಮದಿಂದ ಚೀನಾದ ಜನಸಂಖ್ಯೆ ಬೆಳವಣಿಗೆಯಲ್ಲಿ ತ್ವರಿತವಾಗಿ ಕುಸಿಯಲು ಪ್ರಾರಂಭಿಸಿತ್ತು.

ಇದರಲ್ಲಿ ಅತ್ಯಂತ ದೂರಗಾಮಿ ಕ್ರಮವೆಂದರೆ 1980ರಲ್ಲಿ ಚೀನಾ ಅಳವಡಿಸಿಕೊಂಡ ಒಂದು ಮಗುವಿನ ನೀತಿ. ಅಂದರೆ ಪ್ರತಿ ಕುಟುಂಬದಲ್ಲಿ ಕೇವಲ ಒಂದು ಮಗುವಿಗೆ ಮಾತ್ರ ಇರುವಂತೆ ನೋಡಿಕೊಳ್ಳುವುದು. ಇದಕ್ಕೆ ಜನಾಂಗೀಯ ಅಲ್ಪಸಂಖ್ಯಾತರು, ಗ್ರಾಮೀಣ ಕುಟುಂಬಗಳಿಗೆ ಕೆಲವು ವಿನಾಯಿತಿಗಳನ್ನು ನೀಡಲಾಗಿತ್ತು. ಆದರೆ, ಈ ನೀತಿಯ ಅನುಗುಣವಾಗಿ ಚೀನಾದ ಜನಸಂಖ್ಯೆಯ ಬೆಳವಣಿಗೆಯ ದರವು ಹಲವು ದಶಕಗಳಿಂದ ನಿಯಂತ್ರಣಕ್ಕೆ ಬಂದಿತ್ತು. ಈಗ ಆರು ದಶಕಗಳಲ್ಲಿ ಮೊದಲ ಬಾರಿಗೆ ಜನಸಂಖ್ಯೆಯು ಕುಗ್ಗಲು ಪ್ರಾರಂಭಿಸಿದೆ.

ಕೆಲವು ಯಕ್ಷ ಪ್ರಶ್ನೆಗಳು: ಆದರೆ, ಚೀನಾದ ಜನಸಂಖ್ಯೆಯು ನಿಜವಾಗಿಯೂ ಉತ್ತುಂಗಕ್ಕೇರಿದೆಯೇ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ. ಜೊತೆಗೆ ಈ ಜನಸಂಖ್ಯೆ ಕುಗ್ಗುವಿಕೆ ಯಾವಾಗ ಮತ್ತು ಎಷ್ಟು ವೇಗವಾಗಿರುತ್ತದೆ ಎಂಬುದು ಸ್ಪಷ್ಟವಾಗಿಲ್ಲ. 2022ರ ವಿಶ್ವಸಂಸ್ಥೆಯ ವಿಶ್ವ ಜನಸಂಖ್ಯೆ ನಿರೀಕ್ಷೆಗಳ ಪ್ರಕಾರ, ಚೀನಾದ ಜನಸಂಖ್ಯೆಯು 2030ರಲ್ಲಿ ಮಾತ್ರ ಕ್ಷೀಣಿಸಲು ಪ್ರಾರಂಭಿಸಲಿದೆ ಎಂಬ ಅಂದಾಜಿತ್ತು.

ಇತ್ತ, ಚೀನಾದ ರಾಷ್ಟ್ರೀಯ ಅಂಕಿಅಂಶಗಳ ಬ್ಯೂರೋ ಪ್ರಕಾರ, 2022ರ ಅಂತ್ಯದ ವೇಳೆಗೆ ದೇಶವು 141.17 ಕೋಟಿ ಜನರನ್ನು ಹೊಂದಿದೆ. ಇದರ ಒಂದು ವರ್ಷದ ಹಿಂದೆ 141.26 ಕೋಟಿ ಜನಸಂಖ್ಯೆ ಇತ್ತು. ಇದು ಚೀನಾ ಜನಸಂಖ್ಯೆ ಕುಸಿತ ಕುರಿತಾಗಿ ಚೀನಾ ನೀಡಿದ ಅಂಕಿ - ಅಂಶವಾಗಿದೆ. ಆದರೆ, ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯು ಚೀನಾದಲ್ಲಿ 144.85 ಕೋಟಿ ಜನಸಂಖ್ಯೆಯನ್ನು ಅಂದಾಜಿಸಿದೆ. ಮತ್ತೊಂದಡೆ ವಿಶ್ವ ಜನಸಂಖ್ಯೆಯ ವಿಮರ್ಶೆ ಪ್ರಕಾರ ಚೀನಾದ 142.6 ಕೋಟಿ ಜನಸಂಖ್ಯೆ ಇದೆ.

ಜನಸಂಖ್ಯೆಯ ಈ ಅಂಕಿ - ಅಂಶಗಳು ವ್ಯತ್ಯಾಸವು ವಿಭಿನ್ನ ಊಹೆಗಳು ಹಾಗೂ ದತ್ತಾಂಶ ಮೂಲಗಳನ್ನು ಆಧರಿಸಿದೆ. ಹೀಗಾಗಿ ಚೀನಾ ಕಾಲಾನಂತರದಲ್ಲಿ ಹೇಗೆ ಅಭಿವೃದ್ಧಿಗೊಳ್ಳುತ್ತದೆ ಎಂಬುವುದರ ಬಗ್ಗೆ ಚರ್ಚೆ ಆರಂಭವಾಗಿದೆ. ಆದ್ದರಿಂದ 2100ರ ವೇಳೆಗೆ ಚೀನಾದ ಜನಸಂಖ್ಯೆಯು ಅರ್ಧದಷ್ಟು ಕಡಿಮೆಯಾಗಲಿದೆ ಎಂಬ ಭವಿಷ್ಯವಾಣಿಗಳನ್ನು ಸ್ವಲ್ಪ ಎಚ್ಚರಿಕೆಯಿಂದ ಗಮನಿಸಬೇಕಾಗಿದೆ.

ಹೆಚ್ಚು ಮಕ್ಕಳನ್ನು ಹೊಂದಲು ಅವಕಾಶ: ಕೆಲ ದಶಕಗಳಿಂದ ಒಂದೇ ಕುಟುಂಬಕ್ಕೆ ಒಂದೇ ಮಗು ಎಂಬ ನೀತಿಯನ್ನು ಚೀನಾ ಸರ್ಕಾರವು ಸಡಿಲಗೊಳಿಸಿದೆ. ಒಂದು ಮಗುವಿನ ನೀತಿಯು ಚೀನಾದ ಜನನ ದರದಲ್ಲಿ ತ್ವರಿತ ಇಳಿಕೆಗೆ ಕಾರಣವಾದ ನಂತರ ಜನನ ಪ್ರಮಾಣವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. 2016ರಲ್ಲಿ ಪ್ರತಿ ಕುಟುಂಬಗಳಿಗೆ ಎರಡು ಮಕ್ಕಳು ಮತ್ತು ನಂತರ ಮೂರು ಮಕ್ಕಳನ್ನು ಹೊಂದಲು ಅವಕಾಶ ಮಾಡಿಕೊಟ್ಟಿತ್ತು.

ಅಲ್ಲದೇ, ಚೀನಾ ಸರ್ಕಾರವು ಜನನ ಸಂಖ್ಯೆ ಹೆಚ್ಚಿಸಲು ಕುಟುಂಬಗಳನ್ನು ಇತರ ರೀತಿಯಲ್ಲೂ ಬೆಂಬಲಿಸಲು ಪ್ರಾರಂಭಿಸಿದೆ. ಉದಾಹರಣೆಗೆ ದೀರ್ಘಾವಧಿಯ ಮಾತೃತ್ವ ರಜೆ ಮತ್ತು ಮಕ್ಕಳನ್ನು ಹೊಂದಲು ತೆರಿಗೆ ಪ್ರೋತ್ಸಾಹಕಗಳನ್ನು ನೀಡುತ್ತಿದೆ. ಆದರೆ, ಈ ನೀತಿ ಬದಲಾವಣೆಗಳು ತುಂಬಾ ತಡವಾಗಿದೆ ಎಂದು ಚೀನಾ ಸೇರಿದಂತೆ ಇತರ ಅನೇಕ ತಜ್ಞರು ವಾದಿಸಿದ್ದಾರೆ. ಒಂದು ಮಗುವಿನ ನೀತಿಯ ರದ್ದತಿಯು ಒಂದು ದಶಕ ತಡವಾಗಿ ಕೈಗೊಂಡ ಕ್ರಮವಾಗಿದೆ ಎಂದು ಹೇಳುತ್ತಿದ್ದಾರೆ.

ಅಷ್ಟೇ ಅಲ್ಲ, ಚೀನಾದಲ್ಲಿ ಈಗ ವಿದ್ಯಾಭ್ಯಾಸ, ವಸತಿ, ಮದುವೆ ವೆಚ್ಚವೂ ಹೆಚ್ಚಿದೆ. ಹೆಚ್ಚಿನ ಮಕ್ಕಳನ್ನು ಹೊಂದುವುದು ಅನೇಕ ಕುಟುಂಬಗಳಿಗೆ ತುಂಬಾ ದುಬಾರಿಯಾಗಿ ಪರಿಗಣಿಸಿದೆ. ಇದರಿಂದ ಈ ಜನಸಂಖ್ಯೆಯ ಕುಸಿತವು ನಿರೀಕ್ಷೆಗಿಂತ ಹೆಚ್ಚಿನ ವೇಗದಲ್ಲಿ ಉಂಟಾಗುತ್ತಿದೆ. ಇದಕ್ಕೆ ಮತ್ತೊಂದು ಕಾರಣ ಎಂದರೆ ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಹೆಚ್ಚು ಮಕ್ಕಳನ್ನು ಹೊಂದಲು ಕುಟುಂಬದವರು ಹಿಂದೇಟು ಹಾಕುತ್ತಿದ್ದಾರೆ.

ಜಗತ್ತಿಗೆ ಇದರ ಸಂದೇಶವೇನು?: ಚೀನಾದ ಜನಸಂಖ್ಯೆಯ ನೀತಿಯನ್ನು ಜಗತ್ತಿಗೆ ಸಂದೇಶ ಕೊಟ್ಟಿರುವುದು ಮಾತ್ರ ನಿಜ. ಹೆಚ್ಚು ಜನರು ಹೆಚ್ಚು ಕಾಲ ಬದುಕಿದಾಗ ಮತ್ತು ಕಡಿಮೆ ಜನರು ಜನಿಸಿದಾಗ ಅದು ಎರಡು ಪರಿಣಾಮಗಳನ್ನು ಉಂಟುಮಾಡುತ್ತದೆ ಎಂಬುವುದಕ್ಕೆ ಚೀನಾ ನಿರ್ದಶನವಾಗಿದೆ. ಇವುಗಳು ಎಂದರೆ ಉದ್ಯೋಗಿಗಳ ಸಂಖ್ಯೆ ಕುಗ್ಗುತ್ತದೆ ಮತ್ತು ವೃದ್ಧಾಪ್ಯದಲ್ಲಿ ಜನರಿಗೆ ಹೆಚ್ಚಿದ ವೆಚ್ಚಗಳು ಭರಿಸಬೇಕಾಗುತ್ತದೆ.

ಇದೇ ವೇಳೆ, ಚೀನಾದ ತ್ವರಿತ ಆರ್ಥಿಕ ಬೆಳವಣಿಗೆಯು ಹಿಂದೆಯೂ ಅದರ ದೊಡ್ಡ ಸಂಖ್ಯೆಯಲ್ಲಿನ ಉದ್ಯೋಗಿಗಳು ಮತ್ತು ಅಗ್ಗದಲ್ಲಿ ಉದ್ಯೋಗಿಗಳು ಸಿಗುತ್ತಿರುವುದಾಗಿದೆ. ಆದರೆ, ಈಗ ಕಡಿಮೆ ಕೆಲಸಗಾರರ ಲಭ್ಯತೆ ಮತ್ತು ಚೀನಾದಿಂದ ದಂಪತಿಗಳ ಜಾಗತಿಕ ವಲಸೆ ಪರಿಣಾಮ ಕಂಪನಿಗಳು ತಮ್ಮ ಘಟಕಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಆರಂಭಿಸಿವೆ. ಇದು ಚೀನಾದ ಆರ್ಥಿಕ ಬೆಳವಣಿಗೆಗೆ ಬೆದರಿಕೆಯನ್ನೂ ಒಡ್ಡಿದೆ.

ಇದನ್ನೂ ಓದಿ: 2030ರ ವೇಳೆಗೆ 8.5 ಶತಕೋಟಿಗೆ ಜಗತ್ತಿನ ಜನಸಂಖ್ಯೆ ಹೆಚ್ಚಳದ ನಿರೀಕ್ಷೆ..

ಜೊತೆಗೆ ವೇಗವಾಗಿ ಬೆಳೆಯುತ್ತಿರುವ ವೃದ್ಧಾಪ್ಯ ಜನರ ಬಗ್ಗೆ ಹೇಗೆ ಕಾಳಜಿ ವಹಿಸುವುದು ಎಂಬುದು ಮತ್ತೊಂದು ಸಮಸ್ಯೆಯಾಗಿ ಉದ್ಭವಿಸಿದೆ. 2079ರ ವೇಳೆಗೆ ದುಡಿಯುವ ಸಾಮಾರ್ಥ್ಯದ ಉದ್ಯೋಗಿಗಳು ಒಳಗೆ ಇರುವವರಿಗಿಂತ ಹೊರಗೆ ಹೆಚ್ಚು ಇರುತ್ತಾರೆ ಎಂದು ಅಂದಾಜಿಲಾಗಿದೆ. ವೃದ್ಧಾಪ್ಯ ಜನಸಂಖ್ಯೆಯು ನಿರೀಕ್ಷೆಗಿಂತ ನಿಧಾನವಾಗಿ ಮುಂದುವರಿದರೂ, ಉತ್ಪಾದಕತೆಯನ್ನು ಹೆಚ್ಚಿಸದ ಹೊರತು ಪಿಂಚಣಿ, ಆರೋಗ್ಯ ಮತ್ತು ಸಾಮಾಜಿಕ ಕಾಳಜಿಯ ವೆಚ್ಚಗಳು ಆರ್ಥಿಕ ಅಭಿವೃದ್ಧಿಯ ಮೇಲೆ ಭಾರೀ ಒತ್ತಡವನ್ನು ಬೀರುತ್ತವೆ.

ಇಂತಹ ಸಮಸ್ಯೆಗಳನ್ನು ಎದುರಿಸುವಲ್ಲಿ ಚೀನಾ ಒಂದೇ ಇಲ್ಲ. ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ಇತರ ಪೂರ್ವ ಏಷ್ಯಾದ ದೇಶಗಳು ಸಹ ತ್ವರಿತ ವೃದ್ಧಾಪ್ಯ ಜನಸಂಖ್ಯೆಯು ಸಮಸ್ಯೆಯನ್ನು ಎದುರಿಸುತ್ತಿವೆ. ಅಂತೆಯೇ, ಜರ್ಮನಿ ಮತ್ತು ಇಟಲಿ ಸೇರಿದಂತೆ ಅನೇಕ ಯುರೋಪಿಯನ್ ರಾಷ್ಟ್ರಗಳು ಸಹ ದಶಕಗಳಿಂದ ಜನಸಂಖ್ಯೆಯ ಕುಸಿತವನ್ನು ಎದುರಿಸುತ್ತಿವೆ.

ಇದನ್ನೂ ಓದಿ: ದಶಕಗಳಲ್ಲಿ ಇದೇ ಮೊದಲ ಬಾರಿಗೆ ಚೀನಾ ಜನಸಂಖ್ಯೆ ಕುಸಿತ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.