ETV Bharat / international

ಚೀನಾ, ರಷ್ಯಾ, ಇರಾನ್​ನಿಂದ ಜಂಟಿ ನೌಕಾ ಸಮರಾಭ್ಯಾಸ..

author img

By

Published : Mar 15, 2023, 8:38 PM IST

ಚೀನಾ, ಇರಾನ್ ಮತ್ತು ರಷ್ಯಾದ ನೌಕಾ ಪಡೆಗಳು ಈ ವಾರ ಓಮನ್ ಕೊಲ್ಲಿಯಲ್ಲಿ ಸೆಕ್ಯುರಿಟಿ ಬಾಂಡ್ - 2023ರ ಜಂಟಿ ಸಮರಾಭ್ಯಾಸ ನಡೆಸಲಿವೆ ಎಂದು ಚೀನಾದ ರಕ್ಷಣಾ ಸಚಿವಾಲಯ ತಿಳಿಸಿದೆ.

China Russia Iran hold joint drills in Oman
ಚೀನಾ, ರಷ್ಯಾ, ಇರಾನ್​ನಿಂದ ಜಂಟಿ ನೌಕಾ ಸಮರಾಭ್ಯಾಸ

ಬೀಜಿಂಗ್ (ಚೀನಾ): ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ದೇಶಗಳಾದ ಚೀನಾ, ಇರಾನ್ ಮತ್ತು ರಷ್ಯಾ ದೇಶದ ನೌಕಾ ಪಡೆಗಳು ಈ ವಾರ ಓಮನ್ ಕೊಲ್ಲಿಯಲ್ಲಿ ಜಂಟಿ ಸಮರಾಭ್ಯಾಸ ನಡೆಸಲಿವೆ ಎಂದು ಚೀನಾದ ರಕ್ಷಣಾ ಸಚಿವಾಲಯ ಹೇಳಿದೆ.

ನೌಕಾಪಡೆಗಳ ನಡುವೆ ಪ್ರಾಯೋಗಿಕ ಸಹಕಾರ: ಸೆಕ್ಯುರಿಟಿ ಬಾಂಡ್-2023ರ ಸಮರಾಭ್ಯಾಸದ ಅಡಿ ಈ ದೇಶಗಳು ಪಾಲ್ಗೊಳ್ಳಲಿವೆ ಎಂದು ಸಚಿವಾಲಯ ತಿಳಿಸಿದೆ. ಇರಾನ್, ಪಾಕಿಸ್ತಾನ, ಓಮನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಪರ್ಷಿಯನ್ ಕೊಲ್ಲಿಯ ಮುಖಭಾಗದ ಉದ್ದಕ್ಕೂ ಕರಾವಳಿ ಪ್ರದೇಶ ಹೊಂದಿವೆ. ಈ ವ್ಯಾಯಾಮದಲ್ಲಿ ಭಾಗವಹಿಸುವ ಈ ದೇಶಗಳ ನೌಕಾಪಡೆಗಳ ನಡುವಿನ ಪ್ರಾಯೋಗಿಕ ಸಹಕಾರವನ್ನು ಗಾಢವಾಗಿಸಲು ಸಹಾಯಕಾರಿಯಾಗಲಿದೆ. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗಾಗಿ ಧನಾತ್ಮಕ ಶಕ್ತಿ ತುಂಬುತ್ತದೆ ಎಂದು ಸಚಿವಾಲಯ ಹೇಳಿಕೆ ಕೊಟ್ಟದೆ.

ರಷ್ಯಾದ ಮೇಲೆ ಶಿಕ್ಷಾರ್ಹ ಆರ್ಥಿಕ ನಿರ್ಬಂಧ: ಬುಧವಾರದಿಂದ ಭಾನುವಾರದವರೆಗೆ ನಿಗದಿಪಡಿಸಲಾದ ಈ ವ್ಯಾಯಾಮಗಳು, ಉಕ್ರೇನ್‌ನ ಮೇಲಿನ ಆಕ್ರಮಣದ ಬಗ್ಗೆ ಮಾಸ್ಕೋವನ್ನು ಟೀಕಿಸಲು ಚೀನಾ ನಿರಾಕರಿಸುವ ಸಾಧ್ಯತೆಯಿದೆ. ರಷ್ಯಾದ ಆರ್ಥಿಕತೆಗೆ ನಿರಂತರ ಬೆಂಬಲ ಸೇರಿದಂತೆ ಹಲವಾರು ವಿಷಯಗಳ ಕುರಿತು ಯುಎಸ್ ಮತ್ತು ಚೀನಾ ನಡುವಿನ ಉದ್ವಿಗ್ನತೆ ಎದುರಾಗಲಿದೆ. ಈಗಾಗಲೇ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಆಕ್ರಮಣವನ್ನು ಖಂಡಿಸಿವೆ. ರಷ್ಯಾದ ಮೇಲೆ ಶಿಕ್ಷಾರ್ಹ ಆರ್ಥಿಕ ನಿರ್ಬಂಧಗಳನ್ನು ವಿಧಿಸಿವೆ. ಅಷ್ಟೇ ಅಲ್ಲ ರಕ್ಷಣಾತ್ಮಕ ಶಸ್ತ್ರಾಸ್ತ್ರಗಳನ್ನು ಉಕ್ರೇನ್​ಗೆ ರವಾನಿಸಿ, ಆ ರಾಷ್ಟ್ರದ ಪರ ನಿಂತಿವೆ. ಇದೇ ಕಾರಣದಿಂದ ಯುದ್ಧ ಆರಂಭವಾಗಿ ವರ್ಷ ಪೂರೈಸಿದರೂ ನಿಲ್ಲುವ ಲಕ್ಷಣಗಳು ಕಂಡು ಬರುತ್ತಿಲ್ಲ.

ಇದನ್ನೂ ಓದಿ: ಜಿ20 ಶೃಂಗಸಭೆಯಲ್ಲಿ ಪುಟಿನ್ ಭಾಗವಹಿಸುವ ಸಾಧ್ಯತೆ.. ಇನ್ನೂ ಅಂತಿಮ ನಿರ್ಧಾರವಿಲ್ಲ ಎಂದ ಕ್ರೆಮ್ಲಿನ್​

ಮಿಲಿಟರಿ- ರಾಜಕೀಯ ಸಂಬಂಧ: 1979ರಲ್ಲಿ ಇಸ್ಲಾಮಿಕ್ ರಿಪಬ್ಲಿಕ್ ಸ್ಥಾಪನೆಯಾದಾಗಿನಿಂದ ಮತ್ತು ಯುಎಸ್ ರಾಜತಾಂತ್ರಿಕರನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡಾಗಿನಿಂದ ಇರಾನ್ ಮತ್ತು ಯುಎಸ್ ಬದ್ಧ ವಿರೋಧಿಗಳಾಗಿವೆ. ಸಮುದ್ರದಲ್ಲಿ ಹುಡುಕಾಟ ಮತ್ತು ಪಾರುಗಾಣಿಕಾ ಮತ್ತು ಇತರ ಯುದ್ಧ ಅಲ್ಲದ ಕಾರ್ಯಾಚರಣೆಗಳಲ್ಲಿ ಕೇಂದ್ರೀಕೃತವಾಗಿರುವ ಸಮರಾಭ್ಯಾಸ‌ಗಳಲ್ಲಿ ಭಾಗವಹಿಸಲು ಚೀನಾ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ ನ್ಯಾನಿಂಗ್ ಅನ್ನು ಕಳುಹಿಸಿದೆ. ಅಮೆರಿಕ ಮತ್ತು ಅದರ ಪಾಲುದಾರರಿಂದ ಹೆಚ್ಚಾಗಿ ದೂರವಿಡಲ್ಪಟ್ಟ ರಾಷ್ಟ್ರಗಳೊಂದಿಗೆ ಚೀನಾದ ಬೆಳೆಯುತ್ತಿರುವ ಮಿಲಿಟರಿ ಮತ್ತು ರಾಜಕೀಯ ಸಂಬಂಧಗಳನ್ನು ಒತ್ತಿ ಹೇಳುತ್ತದೆ.

ಏಳು ವರ್ಷಗಳ ಉದ್ವಿಗ್ನತೆ: ಕಳೆದ ವಾರ, ಚೀನಾ ಇರಾನ್ ಮತ್ತು ಮುಖ್ಯ ಮಧ್ಯಪ್ರಾಚ್ಯ ಪ್ರತಿಸ್ಪರ್ಧಿ ಸೌದಿ ಅರೇಬಿಯಾ ನಡುವೆ ಮಾತುಕತೆಗಳನ್ನು ಆಯೋಜಿಸಲಾಗಿತ್ತು. ಇದು ಏಳು ವರ್ಷಗಳ ಉದ್ವಿಗ್ನತೆಯ ನಂತರ, ಪೂರ್ಣ ರಾಜತಾಂತ್ರಿಕ ಸಂಬಂಧಗಳನ್ನು ಪುನರ್​ಸ್ಥಾಪಿಸಲು ಶುಕ್ರವಾರದಂದು ಅವರ ನಡುವೆ ಒಪ್ಪಂದಕ್ಕೆ ಕಾರಣವಾಯಿತು. ಅಮೆರಿಕ ಮತ್ತು ಸೌದಿ ಅರೇಬಿಯಾ ದೀರ್ಘಕಾಲದ ಮಿಲಿಟರಿ ಮತ್ತು ರಾಜಕೀಯ ಸಂಬಂಧಗಳನ್ನು ಹೊಂದಿದ್ದವು. ಆದರೆ, 2018ರಲ್ಲಿ ಯುಎಸ್ ಮೂಲದ ಪತ್ರಕರ್ತ ಜಮಾಲ್ ಖಶೋಗಿ ಅವರ ಹತ್ಯೆ ಹಿನ್ನೆಲೆ ಈ ಎರಡು ದೇಶಗಳ ಸಂಬಂಧ ಮತ್ತಷ್ಟು ಹದಗೆಡಲು ಕಾರಣವಾಗಿತ್ತು.

ಇದನ್ನೂ ಓದಿ: ಮೆಕ್​ ಮಹೊನ್​ ರೇಖೆಯೇ ಗಡಿ ರೇಖೆ: ಭಾರತ ಪರ ನಿಂತ ಅಮೆರಿಕ, ಚೀನಾಗೆ ಹಿನ್ನಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.