ETV Bharat / international

ಚೀನಾದಲ್ಲಿ ಒಂದೇ ವಾರ ಕೋವಿಡ್​ನಿಂದ 13 ಸಾವಿರ ಸಾವು.. ಶೇ 80 ಜನತೆಗೆ ವಕ್ಕರಿಸಿದ ಸೋಂಕು! - ಜನಸಂಖ್ಯೆಯಲ್ಲಿ ಶೇ 80 ರಷ್ಟು ಜನರು ಸೋಂಕಿಗೆ

ಕೋವಿಡ್​ ಬಿಕ್ಕಟ್ಟು - ಕೊನೆಗೂ ಸಾವಿನ ಸಂಖ್ಯೆ ಬಿಚ್ಚಿಟ್ಟ ಚೀನಾ - ಒಂದೇ ವಾರದಲ್ಲಿ 13 ಸಾವಿರ ಜನ ಸಾವನ್ನಪ್ಪಿರುವ ಬಗ್ಗೆ ಸರ್ಕಾರದಿಂದಲೇ ಹೊರಬಿತ್ತು ಮಾಹಿತಿ

china-covid-deaths-and-lunar-new-year-celebrations

author img

By

Published : Jan 22, 2023, 7:26 PM IST

ಬೀಜಿಂಗ್(ಚೀನಾ): ಜನವರಿ 13 ಮತ್ತು 19 ರ ನಡುವೆ ಕೋವಿಡ್​ಗಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಮಾರು 13,000 ಜನ ಸಾವಿಗೀಡಾಗಿದ್ದಾರೆ ಎಂದು ಚೀನಾದ ರೋಗ ನಿಯಂತ್ರಣ ಕೇಂದ್ರ ಶನಿವಾರ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ರೋಗ ನಿಯಂತ್ರಣ ಕೇಂದ್ರವು ಜನವರಿ 13 ಮತ್ತು 19 ರ ನಡುವೆ 12,660 COVID-19-ಸಂಬಂಧಿತ ಸಾವುಗಳನ್ನು ವರದಿ ಮಾಡಿದೆ. ಇದರಲ್ಲಿ ವೈರಸ್‌ನಿಂದ ಉಂಟಾದ 680 ಉಸಿರಾಟದ ವೈಫಲ್ಯದ ಪ್ರಕರಣಗಳು ಮತ್ತು ಕೋವಿಡ್-19 ನೊಂದಿಗೆ ಇತರ ಕಾಯಿಲೆಗಳು ಸೇರಿಕೊಂಡು ಸಂಭವಿಸಿದ 11,980 ಸಾವುಗಳು ಸೇರಿವೆ.

ಈಗ ಸಂಭವಿಸಿದ ಸಾವುಗಳ ಸಂಖ್ಯೆ 2022ರ ಡಿಸೆಂಬರ್ ಆರಂಭದಿಂದ ಕಳೆದ ವಾರದವರೆಗೆ ವರದಿಯಾಗಿದ್ದ 60,000 ಸಾವುಗಳ ಹೊರತಾಗಿದೆ. ಆಸ್ಪತ್ರೆಗಳಲ್ಲಿ ಸಂಭವಿಸಿದ ಸಾವುಗಳ ಅಂಕಿ-ಅಂಶಗಳನ್ನು ಮಾತ್ರ ಶನಿವಾರದ ಪ್ರಕಟಣೆ ಒಳಗೊಂಡಿದೆ. ಅಂದರೆ ಮನೆಯಲ್ಲಿ ಸಾವನ್ನಪ್ಪಿದ ಯಾವುದೇ ಸಾವನ್ನು ಈ ಲೆಕ್ಕದಲ್ಲಿ ಸೇರಿಸಲಾಗುವುದಿಲ್ಲ. ಚೀನಾ ತನ್ನ ಅಧಿಕೃತ ಕೋವಿಡ್-19 ಸಾವಿನ ಸಂಖ್ಯೆಯಲ್ಲಿ ನ್ಯುಮೋನಿಯಾ ಅಥವಾ ಉಸಿರಾಟದ ವೈಫಲ್ಯದಿಂದಾದ ಸಾವುಗಳನ್ನು ಮಾತ್ರ ಲೆಕ್ಕ ಹಾಕಿದೆ. ಪ್ರಪಂಚದಲ್ಲಿ ಕೋವಿಡ್​ನಿಂದಾದ ಸಾವುಗಳನ್ನು ಎಣಿಸುವ ಪದ್ಧತಿಯನ್ನು ಹೊರತುಪಡಿಸಿದ ಕ್ರಮ ಇದಾಗಿದೆ. ದೇಶದ 1.4 ಶತಕೋಟಿ ಜನಸಂಖ್ಯೆಯ ಪೈಕಿ ಶೇ 80 ರಷ್ಟು ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ತಜ್ಞರು ಹೇಳುತ್ತಿರುವ ಮಧ್ಯೆ ಈ ದೊಡ್ಡ ಅಂಕಿ ಅಂಶಗಳನ್ನು ಚೀನಾ ಬಿಡುಗಡೆ ಮಾಡಿದೆ.

ಚೀನಾದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್‌ನ ಮುಖ್ಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ವು ಜುನ್ಯೂ ಹೇಳುವ ಪ್ರಕಾರ- ಮುಂದಿನ ಎರಡು ಅಥವಾ ಮೂರು ತಿಂಗಳಲ್ಲಿ ದೊಡ್ಡ ಪ್ರಮಾಣದ ಕೋವಿಡ್-19 ಉಲ್ಬಣವು ಅಸಂಭವವಾಗಿದೆ. ಏಕೆಂದರೆ ಇತ್ತೀಚಿನ ಅಲೆಯ ಸಮಯದಲ್ಲಿ ದೇಶದ 1.4 ಶತಕೋಟಿ ಜನರಲ್ಲಿ ಸುಮಾರು ಶೇ 80 ರಷ್ಟು ಜನ ಸೋಂಕಿಗೆ ಒಳಗಾಗಿದ್ದಾರೆ ಎಂದು ಅವರು ಶನಿವಾರ ಸಾಮಾಜಿಕ ಮಾಧ್ಯಮ ವೈಬೊದಲ್ಲಿ ಬರೆದಿದ್ದಾರೆ. ಏತನ್ಮಧ್ಯೆ, ಸರ್ಕಾರವು ತನ್ನ ಕಟ್ಟುನಿಟ್ಟಾದ ಶೂನ್ಯ ಕೋವಿಡ್ ನೀತಿಯನ್ನು ತೆಗೆದುಹಾಕಿದ ನಂತರ ಚೀನಾದಾದ್ಯಂತ ಜನರು ಕುಟುಂಬಗಳೊಂದಿಗೆ ಸಂಭ್ರಮಾಚರಣೆ ಮತ್ತು ದೇವಾಲಯಗಳಿಗೆ ಭೇಟಿ ನೀಡುವುದರೊಂದಿಗೆ ಭಾನುವಾರ ಚಾಂದ್ರಮಾನ ಹೊಸ ವರ್ಷಾಚರಣೆಯಲ್ಲಿ ತೊಡಗಿದ್ದಾರೆ. ಮೂರು ವರ್ಷಗಳ ಹಿಂದೆ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಇದು ಅತಿದೊಡ್ಡ ಪ್ರಮಾಣದ ಹಬ್ಬದ ಆಚರಣೆಯಾಗಿದೆ.

ಚಾಂದ್ರಮಾನ ಹೊಸ ವರ್ಷವು ಚೀನಾದಲ್ಲಿ ಪ್ರಮುಖ ವಾರ್ಷಿಕ ರಜಾ ದಿನವಾಗಿದೆ. ಪ್ರತಿ ವರ್ಷಕ್ಕೂ ಚೀನಿ ರಾಶಿಚಕ್ರದ 12 ಚಿಹ್ನೆಗಳಲ್ಲಿ ಒಂದು ಹೆಸರನ್ನು ಇಡಲಾಗುತ್ತದೆ. ಈ ವರ್ಷವು ಮೊದಲ ವರ್ಷವಾಗಿದೆ. ಕಳೆದ ಮೂರು ವರ್ಷಗಳಿಂದ ಕೋವಿಡ್ ಆತಂಕದಿಂದ ಸಂಭ್ರಮಾಚರಣೆಗಳು ನಡೆದಿರಲಿಲ್ಲ. ಈಗ ಎಲ್ಲ ರೀತಿಯ ಕೋವಿಡ್ ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ. ಹೀಗಾಗಿ ಕೋವಿಡ್ ಭಯದಿಂದ ಮನೆಯಲ್ಲೇ ಉಳಿದಿದ್ದ ಲಕ್ಷಾಂತರ ಜನ ಈಗ ವರ್ಷಗಳ ನಂತರ ತಮ್ಮ ಮೊದಲ ಪ್ರವಾಸ ಹೊರಡುವ ಸಂಭ್ರಮದಲ್ಲಿದ್ದಾರೆ. ಚೀನಾದಲ್ಲಿ ಸ್ಪ್ರಿಂಗ್ ಫೆಸ್ಟಿವಲ್ ಎಂದು ಕರೆಯಲ್ಪಡುವ ಉತ್ಸವ ಈ ಬಾರಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಈ ಉತ್ಸವದ ಅಂಗವಾಗಿ ರಾಜಧಾನಿ ಬೀಜಿಂಗ್​ನಲ್ಲಿ ಸಾವಿರಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ.

ಇದನ್ನೂ ಓದಿ: ಪಾಕಿಸ್ತಾನ ಹಣಕಾಸು ಬಿಕ್ಕಟ್ಟು ತೀವ್ರ: ಸಾಲ, ಸಾಲದ ಬಡ್ಡಿಗೆ ಬಜೆಟ್ ಚುಕ್ತಾ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.