ETV Bharat / international

ಖ್ಯಾತ ಹಾಸ್ಯನಟ ಚಾರ್ಲಿ ಚಾಪ್ಲಿನ್​ ಪುತ್ರಿ ಜೋಸೆಫೀನ್ ಚಾಪ್ಲಿನ್ ನಿಧನ

ಚಾರ್ಲಿ ಚಾಪ್ಲಿನ್​ ಅವರ ಪುತ್ರಿ ಹಾಗೂ ನಟಿ ಜೋಸೆಫೀನ್​ 74ನೇ ವಯಸ್ಸಿಗೆ ವಿಧಿವಶರಾಗಿದ್ದಾರೆ.

ಖ್ಯಾತ ಹಾಸ್ಯನಟ ಚಾರ್ಲಿ ಚಾಪ್ಲಿನ್​ ಪುತ್ರಿ ನಿಧನ

author img

By

Published : Jul 22, 2023, 11:27 AM IST

ವಾಷಿಂಗ್ಟನ್: ಕಾಮಿಡಿ ಜಗತ್ತಿನ ಲೆಜೆಂಡ್​ ಚಾರ್ಲಿ ಚಾಪ್ಲಿನ್ ಅವರ ಪುತ್ರಿ ಹಾಗೂ ನಟಿ ಜೋಸೆಫೀನ್ 74ನೇ ವಯಸ್ಸಿಗೆ ಪ್ಯಾರಿಸ್‌ನಲ್ಲಿ ನಿಧನ ಹೊಂದಿದ್ದಾಗಿ ಅವರ ಕುಟುಂಬದವರು ಶುಕ್ರವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಜೋಸೆಫೀನ್, ಪಿಯರ್ ಪಾವೊಲೊ ಪಸೊಲಿನಿಯ, ದಿ ಕ್ಯಾಂಟರ್ಬರಿ ಟೇಲ್ಸ್ ಸೇರಿದಂತೆ ಹಲವಾರು ಹಾಲಿವುಡ್ ಚಲನಚಿತ್ರಗಳಲ್ಲಿ ಇವರು ನಟಿಸಿದ್ದರು. ಜುಲೈ 13 ರಂದು ಇಹಲೋಕ ತ್ಯಜಿಸಿದ್ದಾರೆ. ​

ಜೋಸೆಫೀನ್ ಚಾಪ್ಲಿನ್ ಹಾಸ್ಯ ಜಗತ್ತಿನ ದಂತಕಥೆ ಚಾರ್ಲಿ ಚಾಪ್ಲಿನ್ ಅವರಿಗೆ ಒಟ್ಟು 11 ಮಕ್ಕಳಿದ್ದು ಅದರಲ್ಲಿ ಜೋಸೆಫೀನ್ 6ನೇಯವರು. ಚಾರ್ಲಿ ಚಾಪ್ಲಿನ್​ ಅವರ ನಾಲ್ಕನೇ ಹೆಂಡತಿ, ನೊಬೆಲ್ ಪ್ರಶಸ್ತಿ ವಿಜೇತ ನಾಟಕಕಾರ ಯುಜೀನ್ ಓ'ನೀಲ್ ಅವರ ಮಗಳಾಗಿದ್ದರು. ಓ'ನೀಲ್ ಅವರ ಎಂಟು ಮಕ್ಕಳ ಪೈಕಿ ಜೋಸೆಫೀನ್ ಮೂರನೆಯವರು.

1949ರಲ್ಲಿ ​ಜೋಸೆಫೀನ್ ಜನನ.. ಚಾಪ್ಲಿನ್ 1942 ರಲ್ಲಿ ಓ'ನೀಲ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ಬಳಿಕ ಇಬ್ಬರ ನಡುವೆ ಸ್ನೇಹ ಆರಂಭವಾಗಿ ಪ್ರೀತಿಗೆ ತಿರುಗಿತ್ತು. 1943ರಲ್ಲಿ ಚಾಪ್ಲಿನ್ ಓ'ನೀಲ್​ ಅವರೊಂದಿಗೆ ಸಪ್ತಪದ ತುಳಿದರು. ನಂತರ 1949ರಲ್ಲಿ ​ಜೋಸೆಫೀನ್ ಚಾಪ್ಲಿನ್ ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾದಲ್ಲಿ ಜನಿಸಿದರು. ಚಾಪ್ಲಿನ್ ಚಾರ್ಲಿ ಚಾಪ್ಲಿನ್ ಮತ್ತು ಊನಾ ಓ'ನೀಲ್ ದಂಪತಿಗೆ ಜನಿಸಿದ ಎಂಟು ಮಕ್ಕಳ ಪೈಕಿ ಮೂರನೆಯವರಾಗಿದ್ದರು.

ಹಲಾವರು ಚಿತ್ರಗಳಲ್ಲಿ ನಟಿಸಿದ ಜೋಸೆಫೀನ್​.. ಜೋಸೆಫೀನ್​ ಚಾಪ್ಲಿನ್​ ನಟಿಯಾಗಿ, ಎಸ್ಕೇಪ್ ಟು ದಿ ಸನ್, ವಿಟ್ಟೋರಿಯೊ ಡಿ ಸಿಕಾ, ಲೋಡೆರ್ ಡೆಸ್ ಫೌವ್ಸ್ ಮತ್ತು ಜರ್ಮನ್ ಭಾಷೆಯ ಜ್ಯಾಕ್ ದಿ ರಿಪ್ಪರ್ ಮಾರಿಸ್ ರೋನೆಟ್ ಮತ್ತು ಡೇನಿಯಲ್ ಪೆಟ್ರಿ ಅವರ ದಿ ಬೇ ಬಾಯ್‌ನಲ್ಲಿ ನಟಿಸಿದ್ದರು. ಜೋಸೆಫೀನ್​ ಮೂರು ವರ್ಷದವರಿದ್ದಾಗಲೇ ಬಣ್ಣಹಚ್ಚಿ ತೆರೆಯ ಮೇಲೆ ಕಾಣಿಸಿಕೊಂಡಿದ್ದರು. 1952 ರಲ್ಲಿ ಚಾರ್ಲಿ ಚಾಪ್ಲಿನ್​ ನಿರ್ಮಿಸಿದ 'ಲೈಮ್ಲೈಟ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಚಾಪ್ಲಿನ್​ ಈ ಚಿತ್ರದ ಬರಹಗಾರ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರು. 1967 ರಲ್ಲಿ 'ಎ ಕೌಂಟೆಸ್ ಫ್ರಮ್ ಹಾಂಗ್ ಕಾಂಗ್' ನಲ್ಲೂ ಇವರು ಕಾಣಿಸಿಕೊಳ್ಳುವ ಮೂಲಕ ಬೆಳ್ಳಿ ಪರದೆಯ ಜರ್ನಿ ಆರಂಭಿಸಿದರು.

ಇವರ ತಂದೆ ಚಾರ್ಲಿ ಚಾಪ್ಲಿನ್ ಕೂಡ ತಮ್ಮ ಹಾಸ್ಯಕ್ಕಾಗಿ ಹೆಚ್ಚು ಹೆಸರುವಾಸಿಯಾಗಿದ್ದರೂ, ಅವರು ಅನೇಕ ಚಲನಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದರು. ಚಾರ್ಲಿಯ ಚಲನಚಿತ್ರ 'ದಿ ಟ್ರ್ಯಾಂಪ್' ವಿಶ್ವದಾದ್ಯಂತ ವೀಕ್ಷಿಸಿದ ಅವರ ಮೊದಲ ಸಿನಿಮಾವಾಗಿತ್ತು. ಇದರಲ್ಲಿ ಹಾಸ್ಯವು ಸಿನಿ ಪ್ರಿಯರ ಗಮನ ಸೆಳೆದಿತ್ತು. ತಮ್ಮ ಮೂಖ ನಟನೆಯಿಂದಲೇ ಚಾರ್ಲಿ ಚಾಪ್ಲಿನ್​ ಇಡೀ ಜಗತ್ತಿಗೆ ಪ್ರಸಿದ್ಧಿ ಹೊಂದಿದ್ದರು.

ಇದನ್ನೂ ಓದಿ: 50ನೇ ಸಿನಿಮಾ ಘೋಷಿಸಿದ ಸ್ಟಾರ್​ ನಟರು; ನಿಮ್ಮನ್ನು ರಂಜಿಸಲು ಬರುತ್ತಿರುವ ಸಿನಿಮಾಗಳಿವು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.