ETV Bharat / international

ದಾಖಲೆಯ ಗರಿಷ್ಠ ಮಟ್ಟ ತಲುಪಿದ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆ.. ಆತಂಕ

ಕಲ್ಲಿದ್ದಿಲಿನ ಬಳಕೆಯು ಹೆಚ್ಚಾದರಿಂದ 2022ರಲ್ಲಿ ಅತಿ ಹೆಚ್ಚು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಗೆ ಕಾರಣವಾಗಿದೆ ಎಂದು ಅಂತಾರಾಷ್ಟ್ರೀಯ ಶಕ್ತಿ ಸಂಸ್ಥೆ ವರದಿ ಮಾಡಿದೆ.

carbon-dioxide-emissions-reached-a-record-high-in-2022
2022ರಲ್ಲಿ ದಾಖಲೆಯ ಗರಿಷ್ಠ ಮಟ್ಟ ತಲುಪಿದ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆ
author img

By

Published : Mar 2, 2023, 4:56 PM IST

ನ್ಯೂಯಾರ್ಕ್( ಅಮೆರಿಕ)​: 2022ರಲ್ಲಿ ಪ್ರಪಂಚದಾದ್ಯಂತ ಸಮುದಾಯಗಳು ದಾಖಲೆ ಮಟ್ಟದಲ್ಲಿ ಅತಿ ಹೆಚ್ಚು ಇಂಗಾಲಯದ ಡೈ ಆಕ್ಸೈಡ್​ ಅನ್ನು ಹೊರಸೂಸಿದೆ ಎಂದು ವರದಿಯಾಗಿದೆ. ಕಡಿಮೆ ವೆಚ್ಚದಲ್ಲಿ ಶಕ್ತಿ ಉತ್ಪಾದಿಸಲು ಕಲ್ಲಿದ್ದನ್ನು ಹೆಚ್ಚಾಗಿ ಬಳಸಿದ್ದು ಮತ್ತು ಶಕ್ತಿ ಉತ್ಪಾದನೆಯಿಂದ ಹೊರ ಬರುವ ಅನಿಲವು ಶೇ 0.9ರಷ್ಟು ಬೆಳದು 2022ರಲ್ಲಿ 36.8 ಗಿಗಾಟನ್​ ತಲುಪಿದೆ ಎಂದು ಅಂತಾರಾಷ್ಟ್ರೀಯ ಶಕ್ತಿ ಸಂಸ್ಥೆ ಗುರುವಾರ ವರದಿ ಮಾಡಿದೆ. ನಾಸಾ ಪ್ರಕಾರ, ಒಂದು ಗಿಗಾಟನ್ ದ್ರವ್ಯರಾಶಿಯು ಸುಮಾರು 10,000 ಸಂಪೂರ್ಣ ಲೋಡ್ ಮಾಡಲಾದ ವಿಮಾನವಾಹಕ ನೌಕೆಗಳಿಗೆ ಸಮನಾಗಿರುತ್ತದೆ.

ಪಳೆಯುಳಿಕೆ ಇಂಧನಗಳಾದ ತೈಲ, ಕಲ್ಲಿದ್ದಲು ಅಥವಾ ನೈಸರ್ಗಿಕ ಅನಿಲವನ್ನು ಸುಡುವುದರಿಂದ ಇಂಗಾಲಯದ ಡೈ ಆಕ್ಸೈಡ್​ ಬಿಡುಗಡೆಯಾಗುತ್ತದೆ. ಈ ಅನಿಲವು ಪರಿಸರಕ್ಕೆ ಪ್ರವೇಶಿಸಿದಾಗ ಶಾಖ ಹಿಡಿದಿಟ್ಟುಕೊಂಡು ಹವಾಮಾನದಲ್ಲಿ ಉಷ್ಣತೆ ಹೆಚ್ಚು ಮಾಡುತ್ತದೆ ಇದರಿಂದ ಜಾಗತಿಕ ತಾಪಮಾನ ಉಂಟಾಗುತ್ತದೆ. ಜಾಗತಿಕ ತಾಮಮಾನ ಏರಿಕೆಯ ಭೀಕರ ಪರಿಣಾಮವನ್ನು ನಿಧಾನಗೊಳಿಸಲು ಪ್ರಪಂಚದಾದ್ಯಂತ ಇಂಗಾಲಯದ ಡೈ ಆಕ್ಸೈಡ್​ ಹೊರಸೂಸುವಿಕೆ ಕಡಿಮೆ ಮಾಡಬೇಕು ಎಂದು ಹವಮಾನ ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸ್ಟ್ಯಾನ್​ಫೋರ್ಡ್​ ವಿಶ್ವವಿದ್ಯಾಲಯದ ಭೂವಿಜ್ಞಾನ ಪ್ರಾಧ್ಯಾಪಕ ಮತ್ತು ಅಂತಾರಾಷ್ಟ್ರೀಯು ಗ್ಲೋಬಲ್​ ಪ್ರಾಜೆಕ್ಟ್​ನ ಅಧ್ಯಕ್ಷ ರಾಬ್​ ಜಾಕ್ಸ್​ನ್​ ಮಾತನಾಡಿ, ‘‘ನಮ್ಮ ಬೆಳವಣಿಗೆ ಸಾಧ್ಯವಿಲ್ಲ, ನಾವು ನಿಶ್ಚಲತೆಯನ್ನೂ ಪಡೆಯಲು ಸಾಧ್ಯವಿಲ್ಲ, ಇದು ನಮ್ಮ ಭೂಮಿಗೆ ಕಂಟಕವಾಗಿದೆ. ಹೆಚ್ಚಿನ ಕಲ್ಲಿದಲ್ಲು ಮತ್ತು ಪಳೆಯುಳಿಕೆ ತೈಲಗಳನ್ನು ಬಳಸುವುದರಿಂದ ಬರುವ ಹೊಗೆಯಿಂದಾಗಿ ಆಗುತ್ತಿರುವ ಅಪಾಯಕಾರಿ ಬೆಳವಣಿಗೆ, ಈ ಜಗತ್ತಿಗೆ ಮತ್ತು ನಮ್ಮ ಆರೋಗ್ಯಕ್ಕೆ ಅತಿ ಕೆಟ್ಟ ವರ್ಷವಾಗಿದೆ’’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಶೇ 1.6ರಷ್ಟು ಹೆಚ್ಚಾಗಿದೆ ಇಂಗಾಲದ ಡೈ ಆಕ್ಸೈಡ್​​​​​​​​ ಹೊರಸೂಸುವಿಕೆ: ಕಳೆದ ವರ್ಷಕ್ಕಿಂತ ಈ ವರ್ಷ ಇಂಗಾಲದ ಡೈ ಆಕ್ಸೈಡ್​ ಹೊರಸೂಸುವಿಕೆಯ ಪ್ರಮಾಣ ಶೇ 1.6ರಷ್ಟು ಹೆಚ್ಚಾಗಿದೆ. ಉಕ್ರೇನ್​ ಮತ್ತು ರಷ್ಯಾ ನಡುವಿನ ಯುದ್ಧದ ಪರಿಣಾಮದಿಂದ ಇಂಧನದ ಬೆಲೆಗಳು ಹೆಚ್ಚಾಗಿದೆ. ಇದನ್ನು ತಪ್ಪಿಸಲು ಅನೇಕ ದೇಶದವರು ಏಷ್ಯಾದಲ್ಲಿ ಸಿಗುವಂತಹ ನೈಸರ್ಗಿಕ ಕಲ್ಲಿದ್ದಲು ಬಳಸಲು ಮುಂದಾಗಿದೆ ಮತ್ತು ಜಾಗತಿಕವಾಗಿ ವಿಮಾನಯಾನ ಹೆಚ್ಚಾದಂತೆ ಅದರಿಂದ ಹೊರ ಬರುವ ಇಂಗಾಲಯದ ಡೈ ಆಕ್ಸೈಡ್​ನ ಪ್ರಮಾಣ ಸಹ ಶೇ 2.5ರಷ್ಡು ಹೆಚ್ಚಾಗಿದೆ, ಅರ್ಧದಷ್ಟು ಇಂಗಾಲಯದ ಡೈ ಆಕ್ಸೈಡ್​ನ ಪ್ರಮಾಣ ಏರಿಕೆಯಾಗಿರುವುದು ವಾಯುಯಾನ ವಲಯದಿಂದಲೇ ಎಂದು ಅಂತಾರಾಷ್ಟ್ರೀಯ ಶಕ್ತಿ ಸಂಸ್ಥೆ ತಿಳಿಸಿದೆ.

ಅಂತಾರಾಷ್ಟ್ರೀಯ ಶಕ್ತಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಫಾತಿಹ್​ ಬಿರೋಲ್​ ಮಾತನಾಡಿ, ‘‘2020ರಲ್ಲಿ ಕೋವಿಡ್​ನಿಂದಾಗಿ ಪ್ರಯಾಣ ಮತ್ತು ಇನ್ನಿತರ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಅದರಿಂದಾಗಿ ಸುಮಾರು 550 ಮೆಗಾಟನ್​ ಇಂಗಾಲದ ಡೈ ಆಕ್ಸೈಡ್​ ಹೊರಸೂಸುವಿಕೆ ತಡೆಯಲು ಸಹಾಯ ಮಾಡಿದೆ. ಯುರೋಪ್​ನಲ್ಲಿ ಗಾಳಿ ಮತ್ತು ಸೌರಶಕ್ತಿಯಿಂದ ವಿದ್ಯುತ್​ ಉತ್ಪಾದನೆಯು ಹೆಚ್ಚಾಗುತ್ತಿದೆ. ಶುದ್ಧ ನೈಸರ್ಗಿಕ ಶಕ್ತಿಯಿಲ್ಲದಿದ್ದರೆ, ಕಾರ್ಬನ್​ ಡೈ ಆಕ್ಸೈಡ್​ ಹೊರಸೂಸುವಿಕೆಯ ಪ್ರಮಾಣ ಸುಮಾರು ಮೂರು ಪಟ್ಟು ಹೆಚ್ಚಾಗುತ್ತಿತ್ತು’’ ಎಂದು ಅವರು ಇದೇ ವೇಳೆ ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ವೈರಾಣು ಪಸರಿಸಿದ್ದು ಚೀನಾದ ವುಹಾನ್​ ಲ್ಯಾಬ್​ನಿಂದ: ಅಮೆರಿಕದ ಎಫ್​ಬಿಐ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.