ಕಾನ್(ಫ್ರಾನ್ಸ್) : ಉಕ್ರೇನ್‌ನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಮಹಿಳೆಯೊಬ್ಬರು ಅರೆಬೆತ್ತಲೆ ಪ್ರತಿಭಟನೆ ನಡೆಸಿದ ಎರಡು ದಿನಗಳ ನಂತರ 75ನೇ ಕಾನ್ ಚಿತ್ರೋತ್ಸವದಲ್ಲಿ ಮತ್ತೊಂದು ಮಹಿಳೆಯರ ಗುಂಪು ರೆಡ್ ಕಾರ್ಪೆಟ್ ಮೇಲೆ ಧರಣಿ ನಡೆಸಿದೆ.
ವರದಿಗಳ ಪ್ರಕಾರ, ಕಪ್ಪು ವಸ್ತ್ರವನ್ನು ಧರಿಸಿದ ಮಹಿಳೆಯರ ಗುಂಪು ಮಹಿಳೆಯರ ಹೆಸರುಗಳನ್ನ ಬರೆದಿದ್ದ ಬ್ಯಾನರ್ ಅನ್ನು ಪ್ರದರ್ಶಿಸುತ್ತ ಹೊಗೆ ಸೂಸುವ ಗ್ರೆನೇಡ್ಗಳನ್ನು ರೆಡ್ ಕಾರ್ಪೆಟ್ ಮೇಲೆ ಹಾಕಿದ್ದಾರೆ. ಇದರಿಂದ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಮತ್ತೊಂದು ಹೋರಾಟ ನಡೆದಿದೆ.
ಪ್ರದರ್ಶಿಸಲಾದ ಬ್ಯಾನರ್‌ನಲ್ಲಿರುವ ಹೆಸರುಗಳು ಫ್ರಾನ್ಸ್‌ನಲ್ಲಿ ಕೌಟುಂಬಿಕ ಹಿಂಸಾಚಾರದ ಪ್ರಕರಣಗಳಲ್ಲಿ ಹತರಾದ ಮಹಿಳೆಯರಿಗೆ ಸಂಬಂಧಿಸಿದ್ದಾಗಿವೆ. ಸ್ತ್ರೀ ಹತ್ಯೆಗಳ ವಿರುದ್ಧ ನಿರ್ಮಿಸಲಾದ ಸಾಕ್ಷ್ಯಚಿತ್ರ 'ರಿಪೋಸ್ಟ್ ಫೆಮಿನಿಸ್ಟ್'ನ ನಿರ್ದೇಶಕರು ಪ್ರತಿಭಟನೆಗೆ ಬೆಂಬಲ ನೀಡಿದರು.
ಓದಿ: ‘ನಮ್ಮ ಮೇಲಿನ ಅತ್ಯಾಚಾರ ನಿಲ್ಲಿಸಿ’.. ಕಾನ್ಸ್ ಚಲನಚಿತ್ರೋತ್ಸವದಲ್ಲಿ ಮಹಿಳೆ ಅರೆಬೆತ್ತಲೆ ಪ್ರತಿಭಟನೆ!