ETV Bharat / international

ರಸ್ತೆ ಬದಿ ಹೂತಿಟ್ಟ ಬಾಂಬ್​ ಸ್ಫೋಟ: ಬಸ್​​ ಛಿದ್ರ ಛಿದ್ರ 10 ಮಂದಿ ಸಾವು - ಬುರ್ಕಿನಾ ಫಾಸೊದಲ್ಲಿ ಬಾಂಬ್​ ಸ್ಪೋಟ

ಬುರ್ಕಿನಾ ಫಾಸೊದಲ್ಲಿ ಬಾಂಬ್​ ಸ್ಪೋಟ - ಒಂದು ದಿನದ ಅಂತರದಲ್ಲಿ ಎರಡು ಕಡೆ ಬಂಬ್​ ದಾಳಿ - ಗಣಿಗಾರಿಕೆ ಸ್ಥಳದ ಸಮೀಪ ಇರುವ ಘಟಕಗಳನ್ನೇ ಗುರಿಯಾಗಿಸಿ ಬಾಂಬ್​ ಸ್ಫೋಟಿಸುತ್ತಿರುವ ಅಲ್-ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್ ಗುಂಪುಗಳು

bus collides with roadside bomb in burkina faso
ಬುರ್ಕಿನಾ ಫಾಸೊದಲ್ಲಿ ರಸ್ತೆಬದಿ ಹೂತಿಟ್ಟ ಬಾಂಬ್​ಗೆ ಡಿಕ್ಕಿ ಹೊಡೆದ ಬಸ್​
author img

By

Published : Dec 27, 2022, 7:16 AM IST

ಡಾಕರ್ (ಸೆನೆಗಲ್): ಪಶ್ಚಿಮ ಆಫ್ರಿಕಾದ ಪೂರ್ವ ಬುರ್ಕಿನಾ ಫಾಸೊದಲ್ಲಿ ಬಸ್ಸೊಂದು ರಸ್ತೆಬದಿಯಲ್ಲಿ ಹೂತಿಟ್ಟ ಬಾಂಬ್‌ ಮೇಲೆ ಚಲಿಸಿದೆ. ಪರಿಣಾಮ ಅದು ಸ್ಫೋಟಗೊಂಡು ಹತ್ತು ಜನರು ಸಾವನ್ನಪ್ಪಿದ್ದರೆ, ಹಲವರು ಗಾಯಗೊಂಡಿದ್ದಾರೆ ಎಂದು ಸೆನೆಗಲ್​ ಸರ್ಕಾರ ಸೋಮವಾರ ತಿಳಿಸಿದೆ.

ರಸ್ತೆ ಬದಿ ಹೂತಿಟ್ಟ ಬಾಂಬ್​ ಎಂದರೆ ಉದ್ದೇಶಪೂರ್ವಕವಾಗಿಯೇ ಯಾವುದಾದರೂ ವಾಹನವನ್ನು ಟಾರ್ಗೆಟ್​ ಮಾಡಿ, ರಸ್ತೆ ಬದಿಯಲ್ಲಿ ಸ್ಫೋಟಕ ಸಾಧನವನ್ನು ಹೂತಿಡಲಾಗುತ್ತದೆ. ವಾಹನ ಬರುವ ವೇಳೆಗ ಆ ಸಾಧನ ಸ್ಫೋಟಗೊಳ್ಳುವಂತೆ ಮಾಡಲಾಗುತ್ತದೆ.

ಭಾನುವಾರ ಮಧ್ಯಾಹ್ನ ಬೌಗುಯಿ ಗ್ರಾಮದ ಬಳಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಮಿನಿಬಸ್ ಆ ಸ್ಫೋಟಕ ಹೂತಿಟ್ಟ ಸ್ಥಳದ ಮೇಲೆ ಚಲಿಸಿದ ಪರಿಣಾಮ ಬಾಂಬ್​ ಸ್ಫೋಟಗೊಂಡಿದೆ. ಗಾಯಾಳುಗಳನ್ನು ಪೂರ್ವದ ಮುಖ್ಯ ಪಟ್ಟಣ ಫಾಡಾ ಎನ್​'ಗೌರ್ಮಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್​ನಲ್ಲಿದ್ದ ಉಳಿದ ಪ್ರಯಾಣಿಕರು ಕಾಣೆಯಾಗಿದ್ದು, ಕಾಣೆಯಾದ ಪ್ರಯಾಣಿಕರ ಶೋಧ ಕಾರ್ಯ ನಡೆಯುತ್ತಿದೆ. ಸರ್ಕಾರದಿಂದ ಅವಘಡ ಸಂಭವಿಸಿದ ಸ್ಥಳದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಕರ್ನಲ್ ಹುಬರ್ಟ್ ಯಾಮಿಯೊಗೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸೆನಗಲ್​ನಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಇಂತಹ ಬಾಂಬ್​ ದಾಳಿಗಳಲ್ಲಿ ಸಾವಿರಾರು ಜನ ಸಾವನ್ನಪ್ಪಿದ್ದರೆ, 2 ಮಿಲಿಯನ್​ಗೂ ಹೆಚ್ಚು ಜನ ದೇಶವನ್ನು ತೊರೆದು ಸ್ಥಳಾಂತರಗೊಂಡಿದ್ದಾರೆ. ಇಂತಹ ದಾಳಿಗಳನ್ನು ತಡೆಹಿಡಿಯುವಲ್ಲಿ ಇಲ್ಲಿನ ಸರ್ಕಾರ ವಿಫಲವಾಗಿದೆ. ಮತ್ತೆ ಮತ್ತೆ ಬಾಂಬ್​ ದಾಳಿಗಳು ನಡೆಯುತ್ತಲೇ ಇವೆ.

ಆಂತರಿಕ ಭದ್ರತಾ ವರದಿ ಪ್ರಕಾರ, ಒಂದು ದಿನದ ಅಂತರದಲ್ಲಿ ಇಲ್ಲಿ ಎರಡು ಬಾಂಬ್​ ದಾಳಿಗಳು ಸಂಭವಿಸಿವೆ. ಶನಿವಾರ ಔಗರೂ ಮತ್ತು ಮಟಿಯಾಕೋಲಿ ಗ್ರಾಮಗಳ ನಡುವೆ ಪೂರ್ವದಲ್ಲಿ ಬಾಂಬ್​ ಸ್ಫೋಟಗೊಂಡಿದ್ದು, ಅದಾದ ಒಂದು ದಿನದ ನಂತರ ಪೂರ್ವ ಬುರ್ಕಿನಾ ಫಾಸೊದಲ್ಲಿ ಬಸ್​ ರಸ್ತೆ ಬದಿ ಹೂತಿಟ್ಟ ಬಾಂಬ್​ಗೆ ಡಿಕ್ಕಿ ಹೊಡೆದಿದೆ. ಈ ಬಾಂಬ್​ ದಾಳಿಗಳು ಗಣಿಗಾರಿಕೆ ಸ್ಥಳದ ಸಮೀಪವಿರುವ ಘಟಕಗಳನ್ನು ಗುರಿಯಾಗಿಸಿದೆ ಎಂದು ವರದಿ ತಿಳಿಸಿದೆ. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಲ್ಲಿ ಕೆಲವರು ಸಾವನ್ನಪ್ಪಿದ್ದರೆ ಇನ್ನೂ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲೂ ಹೆಚ್ಚಿನವರು ಈ ದಾಳಿಗಳಿಂದ ಭಯಭೀತರಾಗಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನದ ಧಾರ್ಮಿಕ ಶಾಲೆಯಲ್ಲಿ ಬಾಂಬ್ ಸ್ಫೋಟ: ವಿದ್ಯಾರ್ಥಿಗಳು ಸೇರಿ 19 ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.