ETV Bharat / international

ಮಹಿಳೆಯರಿಗೆ 'ಅಡಿಯಿಂದ ಮುಡಿವರೆಗೆ ಬುರ್ಖಾ' ಕಡ್ಡಾಯ ಮಾಡಿದ ತಾಲಿಬಾನ್​ - ಮಹಿಳೆಯರಿಗೆ ನಿಯಮ ವಿಧಿಸಿದ ತಾಲಿಬಾನ್​

ಅಫ್ಘಾನಿಸ್ತಾನ ಮಹಿಳೆಯರ ಮೇಲೆ ಒಂದಿಲ್ಲೊಂದು ನಿಯಮವನ್ನು ಜಾರಿ ಮಾಡುತ್ತಲೇ ಇರುವ ತಾಲಿಬಾನ್ ಸರ್ಕಾರ ಇದೀಗ, ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾವನ್ನು ಕಡ್ಡಾಯ ಮಾಡಿ ಸುಗ್ರೀವಾಜ್ಞೆ ಹೊರಡಿಸಿದೆ.

burqa-mandatory
ತಾಲಿಬಾನ್
author img

By

Published : May 7, 2022, 8:22 PM IST

ಕಾಬೂಲ್(ಅಫ್ಘಾನಿಸ್ತಾನ): ಅಫ್ಘನ್​ ಮಹಿಳೆಯರಿಗೆ 6 ನೇ ತರಗತಿವರೆಗೆ ಶಿಕ್ಷಣ, ವಾಹನ ಚಾಲನಾ ಪರವಾನಗಿ ರದ್ದು ಮಾಡಿದ ತಾಲಿಬಾನ್​ ಸರ್ಕಾರ ಇದೀಗ ಅಡಿಯಿಂದ ಮುಡಿಯವರೆಗೂ ಎಲ್ಲ ಮಹಿಳೆಯರು ಕಡ್ಡಾಯವಾಗಿ ಹಾಕಿಕೊಳ್ಳಬೇಕು ಎಂಬ ಸುಗ್ರೀವಾಜ್ಞೆ ಹೊರಡಿಸಿದೆ.

ಈ ಸುಗ್ರೀವಾಜ್ಞೆಯನ್ನು ತಾಲಿಬಾನ್ ಮುಖ್ಯಸ್ಥ ಹೈಬತುಲ್ಲಾ ಅಖುಂದ್ಜಾದಾ ಅವರು ಹೊರಡಿಸಿದ್ದು, ಬಳಿಕ ಕಾಬೂಲ್‌ನಲ್ಲಿ ನಡೆದ ಸಮಾರಂಭದಲ್ಲಿ ತಾಲಿಬಾನ್ ಅಧಿಕಾರಿಗಳು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಸಾಂಪ್ರದಾಯಿಕ ಮತ್ತು ಗೌರವಾನ್ವಿತ ಉಡುಗೆಯಾದ 'ಚಾದೋರಿ' (ತಲೆಯಿಂದ ಕಾಲಿನವರೆಗೂ ಬುರ್ಖಾ) ಧರಿಸಬೇಕು ಎಂಬ ನಿಯಮವನ್ನು ತಾಲಿಬಾನ್​ ಕಡ್ಡಾಯ ಮಾಡಿದೆ.

ಇನ್ನು ಷರಿಯಾ ಕಾನೂನಿನಲ್ಲಿ ಮಹಿಳೆಯರಿಗೆ ಬುರ್ಖಾ, ಹಿಜಾಬ್​ ಕಡ್ಡಾಯವಾದ ಕಾರಣ ನಿಯಮವನ್ನು ಪಾಲನೆ ಮಾಡಬೇಕು ಎಂಬ ಬರಹವುಳ್ಳ ಕರಪತ್ರಗಳನ್ನು ಸರ್ಕಾರ ಕೆಫೆಗಳು, ಅಂಗಡಿಗಳ ಸಾರ್ವಜನಿಕವಾಗಿ ಅಂಟಿಸಿ ಪ್ರಚಾರ ಮಾಡುತ್ತಿದೆ. ಈ ಆದೇಶ ಹಳೆಯದಾಗಿದ್ದರೂ, ಕೆಲವೆಡೆ ಮಹಿಳೆಯರು ಆಧುನಿಕ ಉಡುಪುಗಳನ್ನು ಧರಿಸಿರುವುದನ್ನು ತಡೆಯಲು ಇದನ್ನು ಕಡ್ಡಾಯಗೊಳಿಸಲಾಗಿದೆ.

ಈ ಹೊಸ ತೀರ್ಪಿನೊಂದಿಗೆ ತಾಲಿಬಾನ್ ಸರ್ಕಾರ ಅಫ್ಘಾನಿಸ್ತಾನದ ಪ್ರತಿಯೊಬ್ಬ ಮಹಿಳೆಯೂ ತನ್ನ ದೇಹದ ಕೇಶದಿಂದ ಹಿಡಿದು ಕಾಲಿನ ಬೆರಳು ಸಹತ ಮುಚ್ಚಿಕೊಳ್ಳುವಂತೆ ಬುರ್ಖಾವನ್ನು ಧರಿಸುವ ನಿಯಮ ಜಾರಿಗೊಳಿಸಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ, ತಾಲಿಬಾನ್ ಮತ್ತೊಂದು ದಮನಕಾರಿ ನಿರ್ದೇಶನವನ್ನು ನೀಡಿತು, ರಸ್ತೆಯ ಮೂಲಕ ದೂರದ ಪ್ರಯಾಣವನ್ನು ಬಯಸುವ ಅಫ್ಘಾನ್ ಮಹಿಳೆಯರಿಗೆ ಪುರುಷ ಸಂಬಂಧಿಯೊಂದಿಗೆ ಮಾತ್ರ ಸಾರಿಗೆಯನ್ನು ಒದಗಿಸಬೇಕು ಎಂದು ಪ್ರಕಟಣೆಯಲ್ಲಿ ಕಟ್ಟಪ್ಪಣೆ ಮಾಡಿದೆ.

ಓದಿ: ಜನರ ಪರ ಹೋರಾಡುವವರಿಗೆ ಮಾತ್ರ ಚುನಾವಣಾ ಟಿಕೆಟ್ : ರಾಹುಲ್ ಗಾಂಧಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.