ಔಗಾಡೌಗೌ (ಬುರ್ಕಿನಾ ಫಾಸೊ): ಉತ್ತರ ಬುರ್ಕಿನಾ ಫಾಸೊದ ರಾಜಧಾನಿ ಔಗಾಡೌಗೌದಲ್ಲಿ ನಡೆದ ಹಿಂಸಾತ್ಮಕ ಕೃತ್ಯದಲ್ಲಿ ದಾಳಿಕೋರರು 70 ಅಮಾಯಕ ಜನರನ್ನು ಹತ್ಯೆ ಮಾಡಿದ್ದಾರೆ ಎಂದು ಹತ್ಯಾ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ವೃದ್ಧರು ಮತ್ತು ಮಕ್ಕಳಾಗಿದ್ದಾರೆ. ಈ ಹತ್ಯಾಕಾಂಡದ ಕುರಿತು ತೀವ್ರ ತನಿಖೆ ನಡೆಯುತ್ತಿದ್ದು, ದಾಳಿಕೋರರ ಬಗ್ಗೆ ಸದ್ಯ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಬೌಲ್ಸಾ ನಗರದಿಂದ 60 ಕಿಲೋಮೀಟರ್ ಅಂತರದಲ್ಲಿರುವ ಝೊಂಗೊ ಎಂಬ ಗ್ರಾಮದಲ್ಲಿ ದಾಳಿ ನಡೆದಿತ್ತು. ದಾಳಿ ಕುರಿತಾದ ನಮ್ಮ ಸಂಶೋಶಧನೆಗಳು ಮತ್ತು ಸಂಗ್ರಹಿಸಲಾದ ಸಾಕ್ಷಿಗಳ ತನಿಖೆ ನಡೆಯುತ್ತಿದ್ದು, ದಾಳಿಕೋರರ ಕುರಿತು ಯಾವುದೇ ಸುಳಿವು ಸದ್ಯಕ್ಕಿಲ್ಲ ಎಂದು ಪ್ರಾಸಿಕ್ಯೂಟರ್ ಸೈಮನ್ ಬಿ ಗೌನಾನೌ ತಿಳಿಸಿದ್ದಾರೆ.
ಪಶ್ಚಿಮ ಆಫ್ರಿಕನ್ ರಾಷ್ಟ್ರ ಅಲ್ - ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್ಸ್ ಗುಂಪುಗಳೊಂದಿಗೆ ಸಂಬಂಧವಿರುವ ಜಿಹಾದಿಗಳ ಹಿಡಿತದಲ್ಲಿದೆ. ಇವರ ದಂಗೆ, ದಾಳಿಗಳಿಂದ ಇದುವರೆಗೆ ಸಾವಿರಾರು ಜನರು ಸಾವನ್ನಪ್ಪಿದ್ದು, ಎರಡು ಮಿಲಿಯನ್ಗಿಂತಲೂ ಅಧಿಕ ಆಫ್ರಿಕನ್ನರು ಸ್ಥಳಾಂತರಗೊಂಡಿದ್ದಾರೆ. ಯುರೋಪಿಯನ್ ಯೂನಿಯನ್ ಹತ್ಯಾಕಾಂಡದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 100 ದಾಟಿದೆ ಎಂದು ವರದಿಯಾಗಿದೆ. ಇನ್ನು ತನಿಖಾಧಿಕಾರಿಗಳು ಗ್ರಾಮಕ್ಕೆ ಹೋಗಿದ್ದು ಮೃತರ ಕುಟುಂಬಗಳನ್ನು ಭೇಟಿಯಾಗುತ್ತಿದ್ದಾರೆ. ಈ ಮೂಲಕ ಈಗ ಪ್ರಕಟಿಸಿರುವ 70 ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಘಟನೆಯ ನಂತರ ಹಿಂಸಾತ್ಮಕ ದಾಳಿಯ ಕುರಿತು ಜನರನ್ನು ಎಚ್ಚರಿಸಲು ಕೆಲವು ಸ್ಥಳೀಯ ಕಾನೂನನ್ನು 2 ದಿನಗಳ ಮಟ್ಟಿಗೆ ಜಾರಿಗೊಳಿಸಲಾಗಿತ್ತು. ಜತೆಗೆ ಅಧಿಕಾರಿಗಳ ತಂಡ ದಾಳಿ ನಡೆದಿರುವ ಸ್ಥಳಕ್ಕೆ ತಲುಪಲು 4 ದಿನಗಳನ್ನು ತೆಗೆದುಕೊಂಡಿತು ಎಂದು ಪ್ರಾಸಿಕ್ಯೂಟರ್ ಗೌನಾನೌ ಹೇಳಿದ್ದಾರೆ.
ಇನ್ನು ಘಟನೆ ಕುರಿತು ಕಳೆದ ವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಅಮೆರಿಕ ಸ್ಟೇಟ್ ಡಿಪಾರ್ಟ್‌ಮೆಂಟ್‌ನ ಆಫ್ರಿಕನ್ ವ್ಯವಹಾರಗಳ ಮುಖ್ಯಸ್ಥ ಮೊಲಿ ಫೀ ಅವರು ಪೋಸ್ಟ್ ಮಾಡಿದ್ದರು. ಝೊಂಗೊ ಗ್ರಾಮದಲ್ಲಿ ನಡೆದ ಹತ್ಯೆಗಳ ಸುದ್ದಿಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ, ಬಹಳ ದುಃಖಿತನಾಗಿದ್ದೇನೆ. ಆದಷ್ಟು ಬೇಗ ತನಿಖೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿಯುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಬುರ್ಕಿನಾ ಫಾಸೊದಲ್ಲಿ ಇದಕ್ಕೂ ಮುನ್ನ ಹಲವು ದಾಳಿಗಳು ನಡೆದಿವೆ. ಅಲ್-ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್ ಗುಂಪುಗಳು ಮನಬಂದಂತೆ ಬಾಂಬ್ ಬ್ಲಾಸ್ಟ್ ಮಾಡಿ ಅನೇಕರ ಪ್ರಾಣ ಬಲಿ ತೆಗೆದಿದ್ದಾರೆ. ಇಂತಹ ದಾಳಿಗಳು ಆಗಾಗ್ಗೆ ನಡೆಯುತ್ತಿದ್ದು, ಇವುಗಳನ್ನು ತಡೆಹಿಡಿಯುವಲ್ಲಿ ಇಲ್ಲಿನ ಸರ್ಕಾರ ವಿಫಲವಾಗಿದೆ. ಮತ್ತೆ ಮತ್ತೆ ಬಾಂಬ್ ದಾಳಿಗಳು, ಹಿಂಸಾತ್ಮಕ ಹತ್ಯೆಗಳು ನಡೆಯುತ್ತಲೇ ಇವೆ.
ಇದನ್ನೂ ಓದಿ: ಯುದ್ಧಪೀಡಿತ ಗಾಜಾದಿಂದ ಕಾಶ್ಮೀರಿ ಮಹಿಳೆ, ಮಗು ರಕ್ಷಣೆ: ಸುರಕ್ಷಿತವಾಗಿ ಈಜಿಪ್ಟ್ಗೆ ಕರೆದೊಯ್ದ ಭಾರತೀಯ ಸಂಸ್ಥೆಗಳು