ETV Bharat / international

ಚೀನಾ ವಿಮಾನ ಅಪಘಾತ 'ಉದ್ದೇಶಪೂರ್ವಕ': ಬ್ಲ್ಯಾಕ್‌ ಬಾಕ್ಸ್‌ ಮಾಹಿತಿ ಆಧರಿಸಿ ವರದಿ! - ಬ್ಲ್ಯಾಕ್‌ ಬಾಕ್ಸ್‌ ವರದಿ

ಕಳೆದ ಮಾರ್ಚ್‌ ತಿಂಗಳಲ್ಲಿ ಚೀನಾ ಈಸ್ಟರ್ನ್ ಏರ್‌ಲೈನ್ ಬೋಯಿಂಗ್ ವಿಮಾನ ಗುವಾಂಗ್‌ಕ್ಸಿಯಲ್ಲಿ ಅಪಘಾತಕ್ಕೀಡಾಗಿತ್ತು. ಈ ಘಟನೆಯಲ್ಲಿ 123 ಪ್ರಯಾಣಿಕರು ಮತ್ತು 9 ಮಂದಿ ಸಿಬ್ಬಂದಿ ದಾರುಣವಾಗಿ ಸಾವನ್ನಪ್ಪಿದ್ದರು.

Chinese plane crash
ಗುವಾಂಗ್‌ಕ್ಸಿಯಲ್ಲಿ ಅಪಘಾತಕ್ಕೀಡಾದ ವಿಮಾನ
author img

By

Published : May 18, 2022, 10:10 AM IST

ವಾಷಿಂಗ್ಟನ್: ಕಳೆದ ತಿಂಗಳು ಭೀಕರ ದುರಂತಕ್ಕೀಡಾದ ಚೀನಾ ಈಸ್ಟರ್ನ್ ಏರ್‌ಲೈನ್ಸ್ ವಿಮಾನದ ಬ್ಲ್ಯಾಕ್ ಬಾಕ್ಸ್‌ ತನಿಖೆಯಿಂದ ಈ ಘಟನೆ 'ಉದ್ದೇಶಪೂರ್ವಕ' ಆಗಿರಬಹುದು ಎನ್ನುವುದನ್ನು ಸೂಚಿಸುತ್ತದೆ ಎಂದು ಹಲವು ಮಾಧ್ಯಮ ವರದಿಗಳು ಉಲ್ಲೇಖಿಸಿವೆ. 132 ಜನರನ್ನು ಬಲಿ ಪಡೆದ ದುರಂತ ಉದ್ದೇಶಪೂರ್ವಕವಾಗಿತ್ತು. ವಿಮಾನ ಧರೆಗಪ್ಪಳಿಸಿದ ಸ್ಥಳದಲ್ಲಿ ಸಿಕ್ಕಿದ ಬ್ಲ್ಯಾಕ್‌ ಬಾಕ್ಸ್‌ ಪರಿಶೀಲಿಸಿದಾಗ ಸ್ಫೋಟಕ ಮಾಹಿತಿ ಪತ್ತೆಯಾಗಿದೆ ಎಂದು ಮೂಲಗಳನ್ನು ಆಧರಿಸಿ ಅಮೆರಿಕದ ಪ್ರಮುಖ ಪತ್ರಿಕೆಯೊಂದು ವರದಿ ಮಾಡಿದೆ.

ಕಳೆದ ಮಾರ್ಚ್​ನಲ್ಲಿ ಚೀನಾದ ಈಸ್ಟ್ರನ್‌ ಜೆಟ್‌ ಕಂಪನಿಗೆ ಸೇರಿದ ವಿಮಾನ ಕುನ್ಮಿಂಗ್‌ನಿಂದ ಗ್ವಾಂಗ್‌ಝೌಗೆ ಪ್ರಯಾಣಿಸುವ ವೇಳೆ ಏಕಾಏಕಿ ರಾಕೆಟ್‌ನಂತೆ ಪತನಗೊಂಡಿತ್ತು. ಪೈಲಟ್‌ ತಪ್ಪಿನಿಂದಾಗಿ ಅಥವಾ ಆತ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ವಿಮಾನವನ್ನು ಉದ್ದೇಶಪೂರ್ವಕವಾಗಿಯೇ ಪತನಗೊಳಿಸಿರಬಹುದು ಎಂಬ ಮಾತುಗಳು ಆ ಸಂದರ್ಭದಲ್ಲಿ ಕೇಳಿಬಂದಿದ್ದವು. ಇದಕ್ಕೆ ಪೂರಕವೆಂಬಂತೆ ಇದೀಗ ಅಮೆರಿಕದ ತಜ್ಞರ ವರದಿಯಲ್ಲಿ, ವಿಮಾನಪತನ ಉದ್ದೇಶ ಪೂರ್ವಕವಾಗಿತ್ತು ಎಂಬ ಮಾಹಿತಿ ಹೊರಬಿದ್ದಿದೆ.

65 ಅಡಿ ಕಂದಕ ನಿರ್ಮಾಣ, 49,000 ತುಣುಕು ಪತ್ತೆ: ಈಸ್ರ್ಟನ್‌ ಬೋಯಿಂಗ್‌ ವಿಮಾನ ಪತನಗೊಂಡ ರಭಸಕ್ಕೆ ಸ್ಥಳದಲ್ಲಿ 65 ಅಡಿ ಆಳ ಕಂದಕವೇ ನಿರ್ಮಾಣವಾಗಿತ್ತು ಎಂದು ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ. ಅಂದಾಜು 29,000 ಅಡಿಗಳ ಎತ್ತರದಿಂದ ವಿಮಾನ ಭೂಮಿಗೆ ಅಪ್ಪಳಿಸಿದ ಕಾರಣ, ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದರು. ವಿಮಾನದ ಅವಶೇಷಗಳ ಪತ್ತೆಗಾಗಿ 10 ದಿನಗಳ ಕಾಲ ಶ್ರಮಿಸಲಾಗಿತ್ತು. ಇದಕ್ಕಾಗಿ ಘಟನಾ ಸ್ಥಳದಿಂದ 22,000 ಕ್ಯುಬಿಕ್‌ ಮೀಟರ್‌ನಷ್ಟು ಮಣ್ಣು ಹೊರತೆಗೆದು, ಶೋಧ ನಡೆಸಲಾಗಿದೆ. ಈ ವೇಳೆ ಛಿದ್ರಗೊಂಡಿದ್ದ ವಿಮಾನದ 49,000 ತುಣುಕುಗಳು ಪತ್ತೆಯಾಗಿದ್ದವು.

ವಿಮಾನದ ಎರಡು ಕಪ್ಪು ಪೆಟ್ಟಿಗೆಗಳ ಜೊತೆಗೆ ಫ್ಲೈಟ್‌ ಡೇಟಾ ರೆಕಾರ್ಡರ್‌ ಮತ್ತು ಕಾಕ್‌ ಪಿಟ್‌ ಧ್ವನಿ ರೆಕಾರ್ಡರ್‌ ಅನ್ನು ಈಗಾಗಲೇ ಪರೀಕ್ಷೆಗಾಗಿ ಕಳುಹಿಸಲಾಗಿದೆ. 30 ದಿನಗಳಲ್ಲಿ ಪ್ರಾಥಮಿಕ ವರದಿಗಳು ಬರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: 133 ಜನರಿದ್ದ ವಿಮಾನ ಪತನ... ಎಲ್ಲರೂ ಸುಟ್ಟು ಭಸ್ಮವಾಗಿರುವ ಶಂಕೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.